ಕಿಂಗ್ ಕೊಹ್ಲಿ ಈ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದೇ ಸೂಕ್ತ ಎಂದ ಎಬಿ ಡಿ ವಿಲಿಯರ್ಸ್

|

Updated on: Aug 26, 2023 | 1:00 PM

Ab De Villiers: ಈ ಬಗ್ಗೆ ಮಾತನಾಡಿರುವ ಎಬಿಡಿ, ಕೊಹ್ಲಿ ನಾಲ್ಕನೇ ಕ್ರಮಾಂದಲ್ಲಿ ಆಡಬೇಕೆನ್ನುವ ಹೇಳಿಕೆಗೆ ನಾನು ಕೂಡ ಬೆಂಬಲಿಗನಾಗಿದ್ದೇನೆ. ಕೊಹ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಪರಿಪೂರ್ಣ ಆಟಗಾರ ಎಂದು ನಾನು ಭಾವಿಸುತ್ತೇನೆ. ಮಧ್ಯಮ ಕ್ರಮಾಂಕದಲ್ಲಿ ಯಾವುದೇ ರೀತಿಯ ಪಾತ್ರವನ್ನು ನಿರ್ವಹಿಸುವ ಸಾಮಥ್ಯ್ರ ಕೊಹ್ಲಿಗಿದೆ ಎಂದಿದ್ದಾರೆ.

1 / 7
ಕೆಲವೇ ತಿಂಗಳ ಅಂತರದಲ್ಲಿ ಟೀಂ ಇಂಡಿಯಾ, ಎರಡು ಪ್ರಮುಖ ಈವೆಂಟ್​ಗಳಾದ  ಏಷ್ಯಾಕಪ್ ಹಾಗೂ ವಿಶ್ವಕಪ್  ಆಡಲಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಬಹಳ ವರ್ಷಗಳಿಂದ ಕಾಡುತ್ತಿರುವ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಸಂಬಂಧಿಸಿದಂತೆ  ಇನ್ನು ಯಾವುದೇ ಪರಿಹಾರ ಸಿಕ್ಕಿಲ್ಲ.

2 / 7
ಈ ಹಿಂದೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಶ್ರೇಯಸ್ ಅಯ್ಯರ್ ಇದೀಗ ಇಂಜುರಿಯಿಂದ ತಂಡಕ್ಕೆ ಮರಳಿದ್ದಾರಾದರೂ ಅವರ ಫಾರ್ಮ್​ ಹೇಗಿದೆ ಎಂಬುದಕ್ಕೂ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ಏಷ್ಯಾಕಪ್​ ಸನಿಹವಾಗುತ್ತಿದ್ದಂತೆ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರ ಅಭಿಪ್ರಾಯವಾಗಿದೆ.

3 / 7
ಇದೀಗ ಈ ಪಟ್ಟಿಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿ ವಿಲಿಯರ್ಸ್​ ಕೂಡ ರವಿಶಾಸ್ತ್ರಿ ಮಾತಿಗೆ ಪುಷ್ಠಿ ನೀಡುವಂತಹ ಹೇಳಿಕೆ ನೀಡಿದ್ದಾರೆ. ‘360 ಶೋ' ನಲ್ಲಿ ಈ ಬಗ್ಗೆ ಮಾತನಾಡಿರುವ ಎಬಿ ಡಿ ವಿಲಿಯರ್ಸ್​ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಒಳಿತು ಎಂದಿದ್ದಾರೆ.

4 / 7
ಈ ಬಗ್ಗೆ ಮಾತನಾಡಿರುವ ಎಬಿಡಿ, ಕೊಹ್ಲಿ ನಾಲ್ಕನೇ ಕ್ರಮಾಂದಲ್ಲಿ ಆಡಬೇಕೆನ್ನುವ ಹೇಳಿಕೆಗೆ ನಾನು ಕೂಡ ಬೆಂಬಲಿಗನಾಗಿದ್ದೇನೆ. ಕೊಹ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಪರಿಪೂರ್ಣ ಆಟಗಾರ ಎಂದು ನಾನು ಭಾವಿಸುತ್ತೇನೆ. ಮಧ್ಯಮ ಕ್ರಮಾಂಕದಲ್ಲಿ ಯಾವುದೇ ರೀತಿಯ ಪಾತ್ರವನ್ನು ನಿರ್ವಹಿಸುವ ಸಾಮಥ್ಯ್ರ ಕೊಹ್ಲಿಗಿದೆ.

5 / 7
ಆದರೆ ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕೊಹ್ಲಿ ಬಯಸುತ್ತಾರೆಯೇ ಎಂದು ನನಗೆ ತಿಳಿದಿಲ್ಲ. ಆದರೆ ತಂಡಕ್ಕೆ ಅವಶ್ಯಕತೆ ಇದ್ದಾಗ ಮತ್ತು ಆ ಪಾತ್ರವನ್ನು ನಿರ್ವಹಿಸುವ ಅನಿವಾರ್ಯತೆ ಇದ್ದಾಗ ಕೊಹ್ಲಿ ಅದಕ್ಕೆ ಸಮ್ಮತಿ ಸೂಚಿಸಬೇಕು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

6 / 7
ಆದರೆ ಇದೀಗ ವರದಿಯಾಗಿರುವ ಪ್ರಕಾರ ಟೀಂ ಇಂಡಿಯಾ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್​ ಅವರನ್ನು ಆಡಿಸುವುದು ಪಕ್ಕ ಆಗಿದೆ. ಇದಕ್ಕೆ ಪೂರಕವಾಗಿ ಪ್ರಸ್ತುತ ಟೀಂ ಇಂಡಿಯಾ ಬೆಂಗಳೂರಿನ ಆಲೂರಿನಲ್ಲಿ ತರಬೇತಿ ಶಿಬಿರ ನಡೆಸುತ್ತಿದೆ. ಅಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುವ ವೇಳೆ ಕೊಹ್ಲಿ ತಮ್ಮ ಎಂದಿನ ಕ್ರಮಾಂದಲ್ಲಿ (3ನೇ ಕ್ರಮಾಂಕದಲ್ಲಿ) ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ.

7 / 7
ಹೀಗಾಗಿ ಪ್ರಮುಖ ಟೂರ್ನಿಗಳನ್ನು ಮುಂದಿಟ್ಟುಕೊಂಡು ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸುವ ಗೋಜಿಗೆ ಆಡಳಿತ ಮಂಡಳಿ ಹೋಗವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ಈ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ಸೆಪ್ಟಂಬರ್ 2 ರಂದು ತನ್ನ ಮೊದಲ ಪಂದ್ಯವನ್ನಾಡಲಿದ್ದು, ತಂಡದ ಬ್ಯಾಟಿಂಗ್ ಕ್ರಮಾಂಕ ಹೇಗಿರಲಿದೆ ಎಂಬುದು ಆ ಪಂದ್ಯದಲ್ಲಿ ತಿಳಿಯಲಿದೆ.