ICC T20I Rankings: ಸಹ ಆರಂಭಿಕನನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಅಭಿಷೇಕ್ ಶರ್ಮಾ

Updated on: Jul 30, 2025 | 4:05 PM

ICC T20I Rankings: ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಇತ್ತೀಚಿನ ಐಸಿಸಿ ಟಿ20 ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿ 829 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಅದ್ಭುತ ಸ್ಟ್ರೈಕ್ ರೇಟ್ ಇದಕ್ಕೆ ಕಾರಣ. ಭಾರತದ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ಮೂರನೇ ಮತ್ತು ಆರನೇ ಸ್ಥಾನದಲ್ಲಿದ್ದಾರೆ.

1 / 6
ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಟಿ20 ಬ್ಯಾಟ್ಸ್‌ಮನ್​ಗಳ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ, ಅಭಿಷೇಕ್ ಶರ್ಮಾ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿದ್ದಾರೆ. ಟ್ರಾವಿಸ್ ಹೆಡ್ ದೀರ್ಘಕಾಲ ನಂಬರ್ 1 ಶ್ರೇಯಾಂಕದಲ್ಲಿದ್ದರು ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅವರ ಪ್ರದರ್ಶನ ಉತ್ತಮವಾಗಿಲ್ಲ, ಇದರಿಂದಾಗಿ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.

2 / 6
ಟ್ರಾವಿಸ್ ಹೆಡ್ ಕಳಪೆ ಪ್ರದರ್ಶನ ಅಭಿಷೇಕ್​ ಶರ್ಮಾಗೆ ವರವಾಗಿದ್ದು, ಕೆಲವು ತಿಂಗಳುಗಳಿಂದ ಯಾವುದೇ ಟಿ20 ಪಂದ್ಯವನ್ನು ಆಡದಿದ್ದರು ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅಗ್ರಸ್ಥಾನಕ್ಕೇರಿರುವ ಅಭಿಷೇಕ್ ಶರ್ಮಾ ಅವರ ರೇಟಿಂಗ್ ಪಾಯಿಂಟ್‌ 829 ಆಗಿದ್ದರೆ, ಟ್ರಾವಿಸ್ ಹೆಡ್ 814 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

3 / 6
ಅಭಿಷೇಕ್ ಶರ್ಮಾ ಟಿ20 ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದರೆ, ಭಾರತದ ತಿಲಕ್ ವರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಆರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ 6 ಬ್ಯಾಟ್ಸ್‌ಮನ್‌ಗಳನ್ನು  ಹಿಂದಿಕ್ಕುವ ಮೂಲಕ ಟಾಪ್ 10 ಪಟ್ಟಿಗೆ ಪ್ರವೇಶಿಸಿದ್ದಾರೆ. ಅದೇ ಸಮಯದಲ್ಲಿ, ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟಾಪ್ 10 ರಿಂದ ಹೊರಬಿದ್ದಿದ್ದು, 11 ನೇ ಸ್ಥಾನಕ್ಕೆ ಕುಸಿದಿದ್ದಾರೆ.

4 / 6
ಅಭಿಷೇಕ್ ಶರ್ಮಾ ಇದುವರೆಗೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿರುವ 16 ಇನ್ನಿಂಗ್ಸ್‌ಗಳಲ್ಲಿ 33.43 ಸರಾಸರಿಯಲ್ಲಿ 535 ರನ್ ಗಳಿಸಿದ್ದಾರೆ. ದೊಡ್ಡ ವಿಷಯವೆಂದರೆ ಅವರ ಸ್ಟ್ರೈಕ್ ರೇಟ್ ಸುಮಾರು 200 ರ ಆಸುಪಾಸಿನಲ್ಲಿದೆ. ಅಭಿಷೇಕ್ ಇದುವರೆಗೆ 2 ಶತಕಗಳು ಮತ್ತು 2 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ 41 ಸಿಕ್ಸರ್‌ಗಳು ಮತ್ತು 46 ಬೌಂಡರಿಗಳು ಸೇರಿವೆ.

5 / 6
ಅಭಿಷೇಕ್ ಶರ್ಮಾ ಕಳೆದ ವರ್ಷ ಜುಲೈ 6 ರಂದು ಜಿಂಬಾಬ್ವೆ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ಅವರು ತಮ್ಮ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ ಆದರೆ ಮುಂದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದರು. ಆ ಪಂದ್ಯದಲ್ಲಿ ಅಭಿಷೇಕ್ 8 ಸಿಕ್ಸರ್‌ಗಳನ್ನು ಬಾರಿಸಿದರು. ಈ ಶತಕದ ನಂತರ, ಅವರು ಸತತ 7 ಪಂದ್ಯಗಳಲ್ಲಿ ವಿಫಲರಾದರು

6 / 6
 ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಈ ವರ್ಷದ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶತಕ ಸಿಡಿಸಿದರು. ವಾಂಖೆಡೆಯಲ್ಲಿ ನಡೆದ ಆ ಪಂದ್ಯದಲ್ಲಿ, ಅಭಿಷೇಕ್ 54 ಎಸೆತಗಳಲ್ಲಿ 135 ರನ್ ಗಳಿಸಿದರು, ಇದರಲ್ಲಿ 13 ಸಿಕ್ಸರ್‌ಗಳು ಸೇರಿದ್ದವು. ಈ ಸ್ಫೋಟಕ ಬ್ಯಾಟಿಂಗ್‌ನ ಆಧಾರದ ಮೇಲೆ, ಅಭಿಷೇಕ್ ಇಂದು ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ತಲುಪಿದ್ದಾರೆ.