- Kannada News Photo gallery Cricket photos Abhishek Sharma will overtakes Virat Kohli in ICC rankings
ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್
Abhishek Sharma World Record: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎಂಬ ವಿಶ್ವ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ನ ಡೇವಿಡ್ ಮಲಾನ್ (919) ಹೆಸರಿನಲ್ಲಿತ್ತು. ಇದೀಗ ಈ ದಾಖಲೆ ಮುರಿದು ಅಭಿಷೇಕ್ ಶರ್ಮಾ ವಿರಾಟ್ ಕೊಹ್ಲಿಯ ದಾಖಲೆ ಮುರಿಯುವತ್ತ ದಾಪುಗಾಲಿಟ್ಟಿದ್ದಾರೆ.
Updated on: Oct 02, 2025 | 8:54 AM

ಐಸಿಸಿ ಟಿ20 ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪ್ರಕಟಿಸಿದೆ. ಈ ಬಾರಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಟೀಮ್ ಇಂಡಿಯಾದ ಯುವ ದಾಂಡಿಗ ಅಭಿಷೇಕ್ ಶರ್ಮಾ (Abhishek Sharma). ಅದು ಕೂಡ ವಿಶ್ವ ದಾಖಲೆಯ ರೇಟಿಂಗ್ ಪಡೆಯುವ ಮೂಲಕ ಎಂಬುದು ವಿಶೇಷ.

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎಂಬ ವಿಶ್ವ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ. ನೂತನ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಭಿಷೇಕ್ ಒಟ್ಟು 931 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಇಂಗ್ಲೆಂಡ್ನ ಡೇವಿಡ್ ಮಲಾನ್ (919) ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದಿದ್ದಾರೆ.

ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮುರಿಯುವತ್ತ ದಾಪುಗಾಲಿಟ್ಟಿದ್ದಾರೆ. ಅಂದರೆ ಭಾರತದ ಪರ ಐಸಿಸಿ ರ್ಯಾಂಕಿಂಗ್ನಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ವಿರಾಟ್ ಕೊಹ್ಲಿ. 2018 ರಲ್ಲಿ ಟೆಸ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ 937 ರೇಟಿಂಗ್ ಪಡೆಯುವ ಮೂಲಕ ಕಿಂಗ್ ಕೊಹ್ಲಿ ಈ ಸಾಧನೆ ಮಾಡಿದ್ದರು.

ಇದೀಗ ಈ ಶ್ರೇಷ್ಠ ದಾಖಲೆ ಮುರಿಯಲು ಅಭಿಷೇಕ್ ಶರ್ಮಾಗೆ ಬೇಕಿರುವುದು ಕೇವಲ 7 ರೇಟಿಂಗ್ ಮಾತ್ರ. ಅಂದರೆ ಮುಂಬರುವ ಟಿ20 ಪಂದ್ಯಗಳಲ್ಲಿ ಅಭಿಷೇಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ 938 ರೇಟಿಂಗ್ ಪಡೆಯುವುದು ಖಚಿತ. ಈ ಮೂಲಕ ಐಸಿಸಿ ರ್ಯಾಂಕಿಂಗ್ ಇತಿಹಾಸದಲ್ಲೇ ಭಾರತದ ಪರ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಅಷ್ಟೇ ಅಲ್ಲದೆ ಮುಂಬರುವ ಸರಣಿಗಳಲ್ಲೂ ಅಭಿಷೇಕ್ ಶರ್ಮಾ ತನ್ನ ಸಿಡಿಲಬ್ಬರ ಮುಂದುವರೆಸಿದರೆ ಹೊಸ ಇತಿಹಾಸವನ್ನು ಸಹ ನಿರ್ಮಿಸಿದರು. ಏಕೆಂದರೆ ಐಸಿಸಿ ರ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ವಿಶ್ವ ದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. 1934 ರ ಟೆಸ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ ಬ್ರಾಡ್ಮನ್ ಒಟ್ಟು 961 ರೇಟಿಂಗ್ ಪಡೆದಿದ್ದರು.

ಡಾನ್ ಬ್ರಾಡ್ಮನ್ ಹೆಸರಿನಲ್ಲಿರುವ 961 ರೇಟಿಂಗ್ನ ವಿಶ್ವ ದಾಖಲೆ ಮುರಿಯಲು ಅಭಿಷೇಕ್ ಶರ್ಮಾಗೆ ಬೇಕಿರುವುದು ಕೇವಲ 31 ರೇಟಿಂಗ್ ಮಾತ್ರ. ಅಂದರೆ ಮುಂಬರುವ ಸರಣಿಗಳಲ್ಲೂ ಟೀಮ್ ಇಂಡಿಯಾದ ಯುವ ದಾಂಡಿಗ ಭರ್ಜರಿ ಪ್ರದರ್ಶನ ನೀಡಿದರೆ, ಐಸಿಸಿ ರ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎನಿಸಿಕೊಳ್ಳಬಹುದು.
