- Kannada News Photo gallery Cricket photos AFG vs SL Rashid Khan ruled out of first two ODIs against Sri Lanka due to lower back injury
Rashid Khan: ಇಂಜುರಿ ನಡುವೆ ಐಪಿಎಲ್ ಆಡಿದ್ದ ರಶೀದ್ ಖಾನ್ ಏಕದಿನ ಸರಣಿಯಿಂದ ಔಟ್..!
Rashid Khan: ಗಾಯದ ಸಮಸ್ಯೆಯಿಂದಾಗಿ ರಶೀದ್ ಖಾನ್ ಅವರನ್ನು ಮೊದಲ ಎರಡು ಏಕದಿನ ಪಂದ್ಯದಿಂದ ಹೊರಗಿಡಲಾಗಿದೆ ಎಂದು ಅಫ್ಘಾನ್ ಮಂಡಳಿ ತಿಳಿಸಿದೆ.
Updated on: Jun 01, 2023 | 2:07 PM

ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಗೆ ಅಫ್ಘಾನಿಸ್ತಾನ ತನ್ನ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಆದರೆ ತಂಡಕ್ಕೆ ಆಘಾತವೆಂಬಂತೆ ತಂಡದ ಸ್ಟಾರ್ ಆಲ್ರೌಂಡರ್ ರಶೀದ್ ಖಾನ್ ಇಂಜುರಿಯಿಂದಾಗಿ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಹಸ್ಮತುಲ್ಲಾ ಶಾಹಿದಿ ತಂಡದ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಿದ್ದು, ಗಾಯದ ಸಮಸ್ಯೆಯಿಂದಾಗಿ ರಶೀದ್ ಖಾನ್ ಅವರನ್ನು ಮೊದಲ ಎರಡು ಏಕದಿನ ಪಂದ್ಯದಿಂದ ಹೊರಗಿಡಲಾಗಿದೆ ಎಂದು ಅಫ್ಘಾನ್ ಮಂಡಳಿ ತಿಳಿಸಿದೆ. ಅಲ್ಲದೆ ಸರಣಿಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿರುವ ರಶೀದ್ ಈ ಸಮಯದಲ್ಲಿ ನಮ್ಮ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

ರಶೀದ್ ಖಾನ್ ಅನುಪಸ್ಥಿತಿಯಲ್ಲಿ ಆಫ್ಘನ್ ತಂಡದ ಸ್ಪಿನ್ ಬೌಲಿಂಗ್‌ನ ಸಂಪೂರ್ಣ ಜವಾಬ್ದಾರಿ ಮೊಹಮ್ಮದ್ ನಬಿ, ಮುಜೀಬ್-ಉರ್-ರೆಹಮಾನ್ ಮತ್ತು ನೂರ್ ಅಹ್ಮದ್ ಅವರ ಮೇಲಿದೆ.

ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಜೂನ್ 2 ರಿಂದ ಆರಂಭವಾಗಲಿದೆ. ಈ ಸರಣಿಯ ಎರಡನೇ ಪಂದ್ಯ ಜೂನ್ 4 ರಂದು ನಡೆಯಲಿದೆ. ಜೂನ್ 7 ರಂದು ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ನಡೆಯಲ್ಲಿದ್ದು, ಈ ಪಂದ್ಯದಲ್ಲಿ ರಶೀದ್ ಖಾನ್ ಆಡುವ ಸಾಧ್ಯತೆಯಿದೆ. ಈ ಸರಣಿ ಮುಗಿದ ಒಂದು ವಾರದ ನಂತರ ಅಫ್ಘಾನಿಸ್ತಾನ, ಬಾಂಗ್ಲಾದೇಶದೊಂದಿಗೆ ಟೆಸ್ಟ್ ಪಂದ್ಯವನ್ನು ಆಡಬೇಕಾಗಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ನಜಿಬುಲ್ಲಾ ಝದ್ರಾನ್, ರಹಮತ್ ಶಾ, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್, ಇಕ್ರಮ್ ಅಲಿಖಿಲ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಅಬ್ದುಲ್ ರಹಮಾನ್, ಫಝಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್

ಇನ್ನು ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ರಶೀದ್ ಖಾನ್ ತಂಡವನ್ನು ಫೈನ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಸೀಸನ್ನಲ್ಲಿ ಒಟ್ಟು 27 ವಿಕೆಟ್ ಪಡೆದ ರಶೀದ್ ಪರ್ಪಲ್ ಕ್ಯಾಪ್ ರೇಸ್ನಲ್ಲೂ ಕಾಣಿಸಿಕೊಂಡಿದ್ದರು. ಬೌಲಿಂಗ್ ಜೊತೆಗೆ ರಶೀದ್ ಕೆಲವು ಪಂದ್ಯಗಳಲ್ಲಿ ಬ್ಯಾಟಿಂಗ್ನಲ್ಲೂ ಕಮಾಲ್ ಮಾಡಿದ್ದರು.




