ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಟೀಮ್ ಇಂಡಿಯಾ ಆಟಗಾರ

Updated on: Sep 04, 2025 | 1:39 PM

Amit Mishra Retirement: ಅಮಿತ್ ಮಿಶ್ರಾ ಭಾರತ ಪರ 22 ಟೆಸ್ಟ್, 36 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ತಮ್ಮ ಸ್ಪಿನ್ ಮೋಡಿಯೊಂದಿಗೆ 156 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 150 ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

1 / 5
ಟೀಮ್ ಇಂಡಿಯಾ ಆಟಗಾರ ಅಮಿತ್ ಮಿಶ್ರಾ (Amit Mishra) ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ 15 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯಗೊಂಡಂತಾಗಿದೆ. 2010 ರಲ್ಲಿ ಭಾರತದ ಪರ ಸ್ಪಿನ್ನರ್ ಆಗಿ ಪಾದಾರ್ಪಣೆ ಮಾಡಿದ ಅಮಿತ್ ಮಿಶ್ರಾ 2017 ರವರೆಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು.

2 / 5
2017 ರಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದರೂ ಅಮಿತ್ ಮಿಶ್ರಾ ದೇಶೀಯ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್​ಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ 42ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.

3 / 5
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ಅಮಿತ್ ಮಿಶ್ರಾ,  ನನ್ನ ಕ್ರಿಕೆಟ್ ಜೀವನದ ಈ 25 ವರ್ಷಗಳು ಸ್ಮರಣೀಯ. ಇಷ್ಟು ದಿನ ನನ್ನೊಂದಿಗಿದ್ದ ಬಿಸಿಸಿಐ, ಆಡಳಿತ, ಹರಿಯಾಣ ಕ್ರಿಕೆಟ್ ಸಂಘ, ಸಹಾಯಕ ಸಿಬ್ಬಂದಿ, ನನ್ನ ಸಹೋದ್ಯೋಗಿಗಳು ಮತ್ತು ನನ್ನ ಕುಟುಂಬ ಸದಸ್ಯರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಷ್ಟು ವರ್ಷಗಳ ಸ್ಮರಣೀಯ ನೆನಪುಗಳೊಂದಿಗೆ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳುತ್ತಿರುವುದಾಗಿ ಅಮಿತ್ ಮಿಶ್ರಾ ತಿಳಿಸಿದ್ದಾರೆ.

4 / 5
ಅಮಿತ್ ಮಿಶ್ರಾ ಭಾರತದ ಪರ 22 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 40 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು 76 ವಿಕೆಟ್ ಪಡೆದಿದ್ದಾರೆ. ಇನ್ನು ಏಕದಿನ ಕ್ರಿಕೆಟ್​ನಲ್ಲಿ 36 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು 34 ಇನಿಂಗ್ಸ್​ಗಳ ಮೂಲಕ 64 ವಿಕೆಟ್ ಕಬಳಿಸಿದ್ದಾರೆ.

5 / 5
ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ 10 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 16 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಡೆಕ್ಕನ್ ಚಾರ್ಜರ್ಸ್, ಸನ್​ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಅಮಿತ್ ಮಿಶ್ರಾ 162 ಪಂದ್ಯಗಳಿಂದ 174 ವಿಕೆಟ್ ಕಬಳಿಸಿದ್ದಾರೆ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ವಿದಾಯ ಹೇಳುವ ಮೂಲಕ ಅಮಿತ್ ಮಿಶ್ರಾ ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ.