- Kannada News Photo gallery Cricket photos Andre Russell posted a nude selfie of himself on his Instagram story Photo goes viral on Social Media
Andre Russel: ವೆಸ್ಟ್ ಇಂಡೀಸ್ ಸ್ಟಾರ್ ಕ್ರಿಕೆಟಿಗ ಆಂಡ್ರೆ ರಸೆಲ್ ಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Andre Russell Photo Viral: ವೆಸ್ಟ್ ಇಂಡೀಸ್ನ ಹಿರಿಯ ಕ್ರಿಕೆಟಿಗ, ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಆಲ್ ರೌಂಡರ್ ಆಂಡ್ರೆ ರಸೆಲ್ ಅವರ ನಗ್ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Updated on:Nov 19, 2022 | 9:43 AM

ಸೆಲಿಬ್ರಿಟಿಗಳ ಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿದೆ. ಕೆಲ ತಿಂಗಳ ಹಿಂದೆ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಅವರು ಅಮೇರಿಕದ ನಟ ಬರ್ಟ್ ರೆನಾಲ್ಡ್ಸ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಮ್ಯಾಗಝೀನ್‌ವೊಂದರ ಫೋಟೋಶೂಟ್‌ನಲ್ಲಿ ಬೆತ್ತಲೆಯಾಗಿದ್ದರು.

ರಣ್‌ವೀರ್ ಸಿಂಗ್ ಅವರ ಆ ಫೋಟೋ ಸೋಷಿಯಲ್ ಮೀಡಿಯಾದಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆನಂತರ ಅದು ವಿವಾದದ ಸ್ವರೂಪ ಕೂಡ ಪಡೆದುಕೊಂಡಿತ್ತು. ಇದೀಗ ಮತ್ತೊಬ್ಬ ಸೆಲೆಬ್ರಿಟಿಯ ನಗ್ನ ಫೋಟೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ.

ವೆಸ್ಟ್ ಇಂಡೀಸ್ನ ಹಿರಿಯ ಕ್ರಿಕೆಟಿಗ, ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಆಲ್ ರೌಂಡರ್ ಆಂಡ್ರೆ ರಸೆಲ್ ಅವರ ನಗ್ನ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ಆಂಡ್ರೆ ರಸೆಲ್ ಅವರು ಶಾಪಿಂಗ್ ಮಾಲ್ ಒಂದರಲ್ಲಿ ತೆಗೆದಿರುವ ಬೆತ್ತಲೆ ಸೆಲ್ಫಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಕನ್ನಡಿಯ ಮುಂದೆ ನಿಂತು ಈ ಫೋಟೋವನ್ನು ಅವರು ತೆಗೆದಿದ್ದು, ತನ್ನ ಖಾಸಗಿ ಭಾಗವನ್ನು ತಲೆಬುರುಡೆಯ ಆಟಿಕೆ ಎಮೋಜಿಯಿಂದ ಕವರ್ ಮಾಡಿದ್ದಾರೆ.

ಈ ಫೋಟೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಈ ನಗ್ನ ಫೋಟೋಗೆ ಕ್ರಿಕೆಟ್ ಅಭಿಮಾನಿಗಳು ವ್ಯಂಗ್ಯವಾಗಿ ಕಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಅರ್ಹತಾ ಸುತ್ತಿನಿಂದಲೇ ನಿರ್ಗಮಿಸಿದ ಮನೆಗೆ ತೆರಳಿತು. ಚುಟುಕು ವಿಶ್ವಕಪ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಕೆರಿಬಿಯನ್ ತಂಡ ಈ ಬಾರಿ ಸೂಪರ್ 12 ಹಂತಕ್ಕೂ ತಲುಪದೆ ಟೂರ್ನಿಯಿಂದ ಔಟ್ ಆಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಟಿ20 ವಿಶ್ವಕಪ್ಗೆ ತಂಡವನ್ನು ಪ್ರಕಟ ಮಾಡುವಾಗ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಅಚ್ಚರಿಯ ನಿರ್ಧಾರ ತೆಗೆದುಕೊಂಡಿತ್ತು. ವಿಂಡೀಸ್ ತಂಡಕ್ಕೆ ಅನೇಕ ಬಾರಿ ಆಧಾರವಾಗಿದ್ದ ಆಂಡ್ರೆ ರಸೆಲ್ ಅವರನ್ನು ಹೊರಗಿಟ್ಟಿತು. ಜೊತೆಗೆ ಸುನಿಲ್ ನರೈನ್ ಅವರನ್ನೂ ಆಯ್ಕೆ ಮಾಡಿರಲಿಲ್ಲ.

ಇನ್ನು ಮೊನ್ನೆಯಷ್ಟೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸ್ ಆಂಡ್ರೆ ರಸೆಲ್ ಅವರನ್ನು ಉಳಿಸಿಕೊಂಡಿದೆ.

ಕಳೆದ ಕೆಲ ಸಮಯದಿಂದ ಕ್ರಿಕೆಟ್ ನಿಂದ ದೂರ ಉಳಿದಿರುವ ರಸೆಲ್ ಕಳಪೆ ಫಾರ್ಮ್ನಲ್ಲಿದ್ದಾರೆ. ರಸೆಲ್ ವಿಂಡೀಸ್ ಪರ 67 ಟಿ20 ಪಂದ್ಯ, 56 ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್ನಲ್ಲಿ ಈವರೆಗೆ ಒಟ್ಟು 98 ಪಂದ್ಯಗಳನ್ನು ಆಡಿದ್ದಾರೆ.
Published On - 9:43 am, Sat, 19 November 22
