
ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವೆ 2 ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳಿಗಾಗಿ ಉಭಯ ತಂಡಗಳನ್ನು ಪ್ರಕಟಿಸಲಾಗಿದೆ.

14 ಸದಸ್ಯರ ಇಂಗ್ಲೆಂಡ್ ಲಯನ್ಸ್ ತಂಡದಲ್ಲಿ ಇಂಗ್ಲೆಂಡ್ನ ಮಾಜಿ ಆಟಗಾರ ಆಂಡ್ರ್ಯೂ ಫಿಂಟ್ಲಾಫ್ ಪುತ್ರ ರಾಕಿ ಫ್ಲಿಂಟಾಫ್ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಕೌಂಟಿ ಚಾಂಪಿಯನ್ಶಿಪ್ ಪಂದ್ಯಗಳ ಮೂಲಕ ಗಮನ ಸೆಳೆದಿದ್ದ ರಾಕಿ ಇದೀಗ ಇಂಗ್ಲೆಂಡ್ ಲಯನ್ಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದು ವೇಳೆ ಭಾರತ ಎ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ರಾಕಿ ಫಿಂಟ್ಲಾಫ್ ಇಂಗ್ಲೆಂಡ್ ತಂಡದಲ್ಲೂ ಸ್ಥಾನ ಪಡೆಯಲಿದ್ದಾರೆ. ಏಕೆಂದರೆ ಭಾರತದ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡವನ್ನು ಇನ್ನೂ ಸಹ ಪ್ರಕಟಿಸಿಲ್ಲ. ಅದರಲ್ಲೂ ಈ ಸರಣಿಯಲ್ಲಿ 5 ಪಂದ್ಯಗಳಿರುವುದರಿಂದ 2 ಅಥವಾ 3 ಪಂದ್ಯಗಳ ಬಳಿಕ ತಂಡದಲ್ಲಿ ಬದಲಾವಣೆ ಕಂಡು ಬರಬಹುದು.

ಹೀಗಾಗಿ 17 ವರ್ಷದ ರಾಕಿ ಫಿಂಟ್ಲಾಫ್ ಟೀಮ್ ಇಂಡಿಯಾ ಎ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ, ಸೀನಿಯರ್ ತಂಡಕ್ಕೆ ಸೆಲೆಕ್ಟ್ ಆಗಬಹುದು. ಅದರಂತೆ ಇಂಗ್ಲೆಂಡ್ ಪರ ಕಣಕ್ಕಿಳಿದ ತಂದೆ-ಮಗ ಜೋಡಿಗಳ ಪಟ್ಟಿಯಲ್ಲಿ ಆಂಡ್ರ್ಯೂ ಫ್ಲಿಟಾಂಫ್ ಹಾಗೂ ರಾಕಿ ಫಿಂಟ್ಲಾಫ್ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

ಇಂಗ್ಲೆಂಡ್ ಲಯನ್ಸ್ ತಂಡ: ಜೇಮ್ಸ್ ರೆವ್ (ನಾಯಕ), ಫರ್ಹಾನ್ ಅಹ್ಮದ್, ಸೋನಿ ಬೇಕರ್, ಜೋರ್ಡಾನ್ ಕಾಕ್ಸ್, ರಾಕಿ ಫ್ಲಿಂಟಾಫ್, ಎಮಿಲಿಯೊ ಗೇ, ಟಾಮ್ ಹೈನ್ಸ್, ಜಾರ್ಜ್ ಹಿಲ್, ಜೋಶ್ ಹಲ್, ಎಡ್ಡಿ ಜ್ಯಾಕ್, ಬೆನ್ ಮೆಕಿನ್ನಿ, ಡ್ಯಾನ್ ಮೌಸ್ಲಿ, ಅಜೀತ್ ಸಿಂಗ್ ಡೇಲ್, ಕ್ರಿಸ್ ವೋಕ್ಸ್, ರೆಹಾನ್ ಅಹ್ಮದ್.

ಭಾರತ ಎ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ಶಮ್ಸ್ ಮುಲಾನಿ, ಮುಕೇಶ್ ಕುಮಾರ್, ಆಕಾಶ್ ದೀಪ್, ರುತುರಾಜ್ ಗಾಯಕ್ವಾಡ್, ಸರ್ಫರಾಝ್ ಖಾನ್, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಹರ್ಷ್ ದುಬೆ. ಶುಭ್ಮನ್ ಗಿಲ್, ಸಾಯಿ ಸುದರ್ಶನ್ (ಕೊನೆಯ ಪಂದ್ಯಗಳಿಗೆ)