
ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ 592 ರನ್ ಗಳಿಸಿದ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಇದರೊಂದಿಗೆ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 275 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯದ 317 ರನ್‌ಗಳಿಗೆ ಉತ್ತರವಾಗಿ, ಇಂಗ್ಲೆಂಡ್ ತಂಡ ಒಟ್ಟು ಐವರ ಅರ್ಧ ಶತಕ ಮತ್ತು ಆರಂಭಿಕನ ಸ್ಫೋಟಕ ಅರ್ಧಶತಕದ ಬಲದಿಂದ ಇಂಗ್ಲೆಂಡ್ ಆಸೀಸ್ ವಿರುದ್ಧ ಪಾರುಪತ್ಯ ಮೆರೆದಿದೆ.

ಇದೀಗ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ಮೂರನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿದೆ. ಹೀಗಾಗಿ ಇಂಗ್ಲೆಂಡ್ ನೀಡಿರುವ ಗುರಿ ಮುಂದೆ ಆಸೀಸ್ ಇನ್ನು 162 ರನ್‌ಗಳ ಹಿನ್ನಡೆಯಲ್ಲಿದೆ.

ಇನ್ನು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಜಾಕ್ ಕ್ರೌಲಿ ಅತ್ಯಧಿಕ 189 ರನ್ ಬಾರಿಸಿದರೆ, ಮೊಯಿನ್ ಅಲಿ 54 ರನ್ ಗಳಿಸಿದರು. ಮೂರನೇ ವಿಕೆಟ್‌ಗೆ ಆರಂಭಿಕರಾದ ಜಾಕ್ ಮತ್ತು ಜೋ ರೂಟ್ 206 ರನ್‌ಗಳ ದ್ವಿಶತಕದ ಜೊತೆಯಾಟವನ್ನು ಹಂಚಿಕೊಂಡರು.

ಆದರೆ ಕ್ಯಾಮರೂನ್ ಗ್ರೀನ್ ಈ ಜೋಡಿಯನ್ನು ಮುರಿದು 189 ರನ್‌ಗಳಿಗೆ ಝಾಕ್ ಅವರನ್ನು ಔಟ್ ಮಾಡಿದರು. ನಂತರ ಜೋ ರೂಟ್ 84 ರನ್ ಗಳಿಸಿ ಔಟಾದರು. ಬಳಿಕ ನಾಯಕ ಬೆನ್ ಸ್ಟೋಕ್ಸ್ 51 ರನ್‌ಗಳಿಗೆ ಸುಸ್ತಾದರೆ, ಹ್ಯಾರಿ ಬ್ರೂಕ್ 61 ರನ್ ಬಾರಿಸಿದರು.

ಬಳಿಕ ಜೇಮ್ಸ್ ಜೇಮ್ಸ್ ಆಂಡರ್ಸನ್ ಮತ್ತು ಜಾನಿ ಬೈರ್‌ಸ್ಟೋವ್ ಜೋಡಿ ಹತ್ತನೇ ವಿಕೆಟ್‌ಗೆ 66 ರನ್‌ಗಳ ಪ್ರಮುಖ ಜೊತೆಯಾಟವನ್ನು ಮಾಡಿದರು. ಆದರೆ ಕ್ಯಾಮರೂನ್ ಗ್ರೀನ್ 5 ರನ್‌ಗಳಿಗೆ ಜೇಮ್ಸ್ ಆಂಡರ್ಸನ್ ಅವರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್ ಅಂತ್ಯ ಹಾಡಿದರೆ, 99 ರನ್ ಬಾರಿಸಿದ್ದ ಬೈರ್‌ಸ್ಟೋ ಔಟಾಗದೆ 1 ರನ್ಗಳಿಂದ ಶತಕ ವಂಚಿರಾದರು.

5 ವಿಕೆಟ್ ಪಡೆದ ಜೋಶ್ ಹ್ಯಾಜಲ್‌ವುಡ್ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರೆ, ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ 2 ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮ್ಮಿನ್ಸ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಅವರ ಏಕೈಕ ವಿಕೆಟ್ ಪಡೆದರು.