Ashes 2023: ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರು: ಎತ್ತಿಕೊಂಡು ಹೋದ ಜಾನಿ ಬೈರ್ಸ್ಟೋವ್
TV9 Web | Updated By: ಝಾಹಿರ್ ಯೂಸುಫ್
Updated on:
Jun 28, 2023 | 7:59 PM
Ashes 2023: ಜಸ್ಟ್ ಸ್ಟಾಪ್ ಆಯಿಲ್ ಯುನೈಟೆಡ್ ಕಿಂಗ್‌ಡಮ್‌ನ ಪರಿಸರವಾದಿಗಳ ಸಂಘಟನೆ. 2022 ರಲ್ಲಿ ಶುರುವಾದ ಈ ಸಂಘಟನೆಯು ಯುನೈಟೆಡ್ ಕಿಂಗ್ಡಮ್ನಲ್ಲಿ ತೈಲ ಮತ್ತು ಇತರ ಪಳೆಯುಳಿಕೆ ಇಂಧನಗಳ ಪರಿಶೋಧನೆಗಾಗಿ ಸರ್ಕಾರವು ಹೊಸ ಪರವಾನಗಿಗಳನ್ನು ನಿಲ್ಲಿಸಬೇಕೆಂದು ಪ್ರತಿಭಟನೆ ನಡೆಸುತ್ತಾ ಬರುತ್ತಿದೆ.
1 / 7
Ashes 2023: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದ ವೇಳೆ ಪ್ರತಿಭಟನಾಕಾರರು ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ.
2 / 7
ಜಸ್ಟ್ ಸ್ಟಾಪ್ ಆಯಿಲ್ ಸಂಘಟನೆಯ ಇಬ್ಬರು ಪ್ರತಿಭಟನಾಕಾರರು ಪಂದ್ಯ ಆರಂಭವಾಗುತ್ತಿದ್ದಂತೆ ಮೈದಾನಕ್ಕೆ ನುಗ್ಗಿದ್ದರು. ಅಲ್ಲದೆ ಮೈದಾನದಲ್ಲಿ ಆರೆಂಜ್ ಬಣ್ಣವನ್ನು ಎರಚುವ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸಿದ್ದರು.
3 / 7
ಈ ವೇಳೆ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜಾನಿ ಬೈರ್ಸ್ಟೋವ್ ಪ್ರತಿಭಟನಾಕಾರೊಬ್ಬರನ್ನು ಎತ್ತಿಕೊಂಡು ಮೈದಾನದ ಹೊರಗೆ ಕರೆದುಕೊಂಡು ಹೋದರು.
4 / 7
ಅಷ್ಟರಲ್ಲಾಗಲೇ ಕಾರ್ಯಪ್ರವೃತ್ತರಾಗಿದ್ದ ಭದ್ರತಾ ಸಿಬ್ಬಂದಿಗಳು ಮತ್ತೋರ್ವ ಪ್ರತಿಭಟನಾಕಾರನನ್ನು ವಶಕ್ಕೆ ಪಡೆದರು. ಅಲ್ಲದೆ ತಕ್ಷಣವೇ ಮೈದಾನದಲ್ಲಿನ ಬಣ್ಣಗಳನ್ನು ತೆರವುಗೊಳಿಸಿ ಪಂದ್ಯವನ್ನು ಮುಂದುವರೆಸಲಾಯಿತು.
5 / 7
ಇದೀಗ ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ ಜಾನಿ ಬೈರ್ಸ್ಟೋವ್ ಪ್ರತಿಭಟನಾಕಾರನೊಬ್ಬನನ್ನು ಏಕಾಂಗಿಯಾಗಿ ಎತ್ತಿಕೊಂಡು ಹೋಗುತ್ತಿರುವ ಫೋಟೋ ಇಂಟರ್ನೆಟ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.
6 / 7
ಏನಿದು ಜಸ್ಟ್ ಸ್ಟಾಪ್ ಆಯಿಲ್ ಪ್ರತಿಭಟನೆ?- ಜಸ್ಟ್ ಸ್ಟಾಪ್ ಆಯಿಲ್ ಯುನೈಟೆಡ್ ಕಿಂಗ್‌ಡಮ್‌ನ ಪರಿಸರವಾದಿಗಳ ಸಂಘಟನೆ. 2022 ರಲ್ಲಿ ಶುರುವಾದ ಈ ಸಂಘಟನೆಯು ಯುನೈಟೆಡ್ ಕಿಂಗ್ಡಮ್ನಲ್ಲಿ ತೈಲ ಮತ್ತು ಇತರ ಪಳೆಯುಳಿಕೆ ಇಂಧನಗಳ ಪರಿಶೋಧನೆಗಾಗಿ ಸರ್ಕಾರವು ಹೊಸ ಪರವಾನಗಿಗಳನ್ನು ನಿಲ್ಲಿಸಬೇಕೆಂದು ಪ್ರತಿಭಟನೆ ನಡೆಸುತ್ತಾ ಬರುತ್ತಿದೆ.
7 / 7
ಈ ಪ್ರತಿರೋಧದ ಭಾಗವಾಗಿ ಲಾರ್ಡ್ಸ್ ಮೈದಾನದಲ್ಲಿನ ನಡೆಯುತ್ತಿದ್ದ ಆ್ಯಶಸ್ ಸರಣಿಯ ವೇಳೆ ಜಸ್ಟ್ ಸ್ಟಾಪ್ ಆಯಿಲ್ ಸಂಘಟನೆಯ ಇಬ್ಬರು ಕಾರ್ಯಕರ್ತರು ಮೈದಾನಕ್ಕೆ ನುಗ್ಗಿದ್ದರು. ಇದೀಗ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.