- Kannada News Photo gallery Cricket photos team india will be playing 8 t20i in august 2023 check details in kannada
Team India: ಆಗಸ್ಟ್ ತಿಂಗಳಲ್ಲಿ 8 ಟಿ20 ಪಂದ್ಯಗಳನ್ನಾಡಲಿದೆ ಭಾರತ! ವೇಳಾಪಟ್ಟಿ ಹೀಗಿದೆ
Team India: ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಗಾಗಿ 2 ದೇಶಗಳಿಗೆ ಪ್ರವಾಸ ಮಾಡಲಿದ್ದು, ಈ ಪ್ರವಾಸದಲ್ಲಿ ಹಾರ್ದಿಕ್ ಪಡೆ ಆಗಸ್ಟ್ ತಿಂಗಳು ಒಂದರಲ್ಲೇ ಬರೋಬ್ಬರಿ 8 ಟಿ20 ಪಂದ್ಯಗಳನ್ನು ಆಡುತ್ತಿದೆ.
Updated on: Jun 28, 2023 | 2:04 PM

ವಿಶ್ವಕಪ್ ವೇಳಾಪಟ್ಟಿಯ ಪ್ರಕಟಣೆಯೊಂದಿಗೆ ಭಾರತದಲ್ಲಿ ವಿಶ್ವಕಪ್ ತಯಾರಿ ಮತ್ತಷ್ಟು ವೇಗ ಪಡೆದುಕೊಂಡಿದೆ. ಆದರೆ ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಗಾಗಿ 2 ದೇಶಗಳಿಗೆ ಪ್ರವಾಸ ಮಾಡಲಿದ್ದು, ಈ ಪ್ರವಾಸದಲ್ಲಿ ಹಾರ್ದಿಕ್ ಪಡೆ ಆಗಸ್ಟ್ ತಿಂಗಳು ಒಂದರಲ್ಲೇ ಬರೋಬ್ಬರಿ 8 ಟಿ20 ಪಂದ್ಯಗಳನ್ನು ಆಡುತ್ತಿದೆ. ಆ8 ಪಂದ್ಯಗಳ ವಿವರ ಇಲ್ಲಿದೆ.

ಮೊದಲನೇಯದಾಗಿ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಭಾರತ ಕೆರಿಬಿಯನ್ ನಾಡಲ್ಲಿ 5 ಟಿ20 ಪಂದ್ಯಗಳನ್ನಾಡಲಿದೆ. ಆ ಬಳಿಕ ಐರ್ಲೆಂಡ್ ವಿರುದ್ಧ 3 ಟಿ20 ಪಂದ್ಯಗಳನ್ನು ಆಡಲಿದೆ.

ಮೊದಲ ಟಿ20 ಪಂದ್ಯ ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವೆ ಆಗಸ್ಟ್ 3 ರಂದು ನಡೆಯಲಿದೆ. ಈ ಪಂದ್ಯಕ್ಕೆ ಬ್ರಿಯಾನ್ ಲಾರಾ ಕ್ರೀಡಾಂಗಣ ಆತಿಥ್ಯವಹಿಸಲಿದೆ.

ಎರಡನೇ ಟಿ20 ಪಂದ್ಯ ಆಗಸ್ಟ್ 6 ರಂದು ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೂರನೇ ಟಿ20 ಪಂದ್ಯ ಆಗಸ್ಟ್ 8 ರಂದು ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ನಾಲ್ಕನೇ ಟಿ20 ಪಂದ್ಯ ಆಗಸ್ಟ್ 12 ರಂದು ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಐದನೇ ಟಿ20 ಪಂದ್ಯ ಆಗಸ್ಟ್ 13 ರಂದು ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಆ ಬಳಿಕ 3 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಲಿರುವ ಭಾರತ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 18 ರಂದು ಮಲ್ಹೈಡ್, ಡುಬ್ಲಿನ್ನಲ್ಲಿ ಆಡಲಿದೆ.

ಹಾಗೆಯೇ 2ನೇ ಟಿ20 ಪಂದ್ಯ ಆಗಸ್ಟ್ 20 ರಂದು ನಡೆದರೆ, 3ನೇ ಟಿ20 ಪಂದ್ಯ ಆಗಸ್ಟ್ 23 ರಂದು ಡುಬ್ಲಿನ್ನಲ್ಲಿ ನಡೆಯಲಿದೆ.




