ಇಂಗ್ಲೆಂಡ್ ತಂಡದ ಪರವಾಗಿ ಟೆಸ್ಟ್ ಮಾದರಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಆಂಡರ್ಸನ್, ಇದುವರೆಗೆ ಆಡಿದ 333 ಇನ್ನಿಂಗ್ಸ್‌ಗಳಲ್ಲಿ 685 ವಿಕೆಟ್‌ಗಳನ್ನು ಪಡೆದಿದ್ದಾರೆ. 700 ವಿಕೆಟ್‌ಗಳನ್ನು ಪೂರೈಸಲು ಆಂಡರ್ಸನ್‌ಗೆ 15 ವಿಕೆಟ್‌ಗಳ ಅಗತ್ಯವಿದೆ. ಈ ಬಾರಿ ಆಶಸ್ ಸರಣಿಯಲ್ಲಿ ಆಂಡರ್ಸನ್ ಈ ಮೈಲಿಗಲ್ಲನ್ನು ಪೂರ್ಣಗೊಳಿಸುವ ಸಾಧ್ಯತೆಗಳಿವೆ.