R Ashwin: ಅಶ್ವಿನ್ 500 ವಿಕೆಟ್ ಕಬಳಿಸಲು ಎಷ್ಟು ಎಸೆತಗಳನ್ನು ಎಸೆದಿದ್ದಾರೆ ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Feb 17, 2024 | 2:00 PM

Ravichandran Ashwin: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 1 ವಿಕೆಟ್ ಕಬಳಿಸುವುದರೊಂದಿಗೆ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ 2ನೇ ಬೌಲರ್ ಹಾಗೂ ವಿಶ್ವದ 5ನೇ ಸ್ಪಿನ್ನರ್ ಎಂಬ ಹಿರಿಮೆಗೆ ಅಶ್ವಿನ್ ಪಾತ್ರರಾಗಿದ್ದಾರೆ. ಇದರೊಂದಿಗೆ ಇನ್ನೂ ಹಲವು ದಾಖಲೆಗಳನ್ನು ಅಶ್ವಿನ್ ತಮ್ಮದಾಗಿಸಿಕೊಂಡಿದ್ದಾರೆ.

1 / 9
ರಾಜ್​ಕೋಟ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 1 ವಿಕೆಟ್ ಕಬಳಿಸುವ ಮೂಲಕ ರವಿಚಂದ್ರನ್ ಅಶ್ವಿನ್ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್​ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾಗಿದ್ದಾರೆ.

2 / 9
ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 500 ವಿಕೆಟ್​ಗಳನ್ನು ಕಬಳಿಸಿದ ಬೌಲರ್​ಗಳ ಪಟ್ಟಿಯಲ್ಲಿ ಅಶ್ವಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಂದರೆ ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ ಹಾಗೂ ಅತೀ ಕಡಿಮೆ ಎಸೆತಗಳ ಮೂಲಕ 500 ವಿಕೆಟ್​ಗಳ ಮೈಲುಗಲ್ಲು ದಾಟಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​ ಕಬಳಿಸಲು ಅತೀ ಕಡಿಮೆ ಎಸೆತಗಳನ್ನು ಎಸೆದ ಬೌಲರ್​ಗಳು ಯಾರೆಂದು ತಿಳಿಯೋಣ...

3 / 9
1- ಗ್ಲೆನ್ ಮೆಕ್​ಗ್ರಾಥ್: ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಕಡಿಮೆ ಎಸೆತಗಳ ಮೂಲಕ 500 ವಿಕೆಟ್​ಗಳನ್ನು ಕಬಳಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮೆಕ್​ಗ್ರಾಥ್ ಹೆಸರಿನಲ್ಲಿದೆ. ಮೆಕ್​ಗ್ರಾಥ್ ಕೇವಲ 25,528 ಎಸೆತಗಳ ಮೂಲಕ ಐನೂರು ವಿಕೆಟ್​ಗಳ ಮೈಲುಗಲ್ಲನ್ನು ದಾಟಿದ್ದರು.

4 / 9
2- ರವಿಚಂದ್ರನ್ ಅಶ್ವಿನ್: ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ರವಿಚಂದ್ರನ್ ಅಶ್ವಿನ್. ಟೀಮ್ ಇಂಡಿಯಾ ಸ್ಪಿನ್ನರ್ 25,714 ಎಸೆತಗಳ ಮೂಲಕ 500 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 500 ವಿಕೆಟ್​ಗಳನ್ನು ಪೂರೈಸಿದ ವಿಶ್ವದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

5 / 9
3- ಜೇಮ್ಸ್ ಅ್ಯಂಡರ್ಸನ್: ಇಂಗ್ಲೆಂಡ್ ವೇಗಿ ಜೇಮ್ಸ್​ ಅ್ಯಂಡರ್ಸನ್ ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳನ್ನು ಕಬಳಿಸಲು 28,150 ಎಸೆತಗಳನ್ನು ಎಸೆದಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

6 / 9
4- ಸ್ಟುವರ್ಟ್ ಬ್ರಾಡ್: ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್​ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಇದ್ದಾರೆ. ಬ್ರಾಡಿ ಐನೂರು ವಿಕೆಟ್​ಗಳ ಮೈಲುಗಲ್ಲನ್ನು ದಾಟಲು ಬರೋಬ್ಬರಿ 28,430 ಎಸೆತಗಳನ್ನು ಎಸೆದಿದ್ದರು.

7 / 9
5- ಕಾರ್ಟ್ನಿ ವಾಲ್ಷ್: ವೆಸ್ಟ್ ಇಂಡೀಸ್​ ತಂಡದ ಮಾಜಿ ವೇಗಿ ಕಾರ್ಟ್ನಿ ವಾಲ್ಷ್ ಈ ಪಟ್ಟಿಯಲ್ಲಿ ಐದನೇ ಸ್ಥಾನ ಅಲಂಕರಿಸಿದ್ದಾರೆ. 28,833 ಎಸೆತಗಳ ಮೂಲಕ ವಾಲ್ಷ್ 500 ವಿಕೆಟ್​ಗಳ ಸಾಧನೆ ಮಾಡಿದ್ದರು.

8 / 9
ಇನ್ನು ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ 500 ವಿಕೆಟ್​ಗಳನ್ನು ಕಬಳಿಸಿದ ವಿಶ್ವ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. 87 ಟೆಸ್ಟ್ ಪಂದ್ಯಗಳ ಮೂಲಕ ಮುರಳೀಧರನ್ ಈ ಸಾಧನೆ ಮಾಡಿದ್ದರು.

9 / 9
ಇದೀಗ 98 ಟೆಸ್ಟ್ ಪಂದ್ಯಗಳ ಮೂಲಕ 500 ವಿಕೆಟ್​ಗಳ ಮೈಲುಗಲ್ಲನ್ನು ದಾಟಿರುವ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ ಐನೂರು ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.