Asia Cup Prize Money: ಭಾರತ ಏಷ್ಯಾಕಪ್ ಗೆದ್ದರೂ ಬಹುಮಾನದ ಹಣ ಪಡೆಯದಿರಲು ಕಾರಣವೇನು?

Updated on: Sep 09, 2025 | 3:31 PM

Asia Cup Prize Money: 2025ರ ಏಷ್ಯಾಕಪ್ ಟಿ20 ಟೂರ್ನಿ ಸೆಪ್ಟೆಂಬರ್ 9ರಿಂದ ಆರಂಭವಾಗಲಿದೆ. ಭಾರತ ತನ್ನ ಅಭಿಯಾನವನ್ನು ಸೆಪ್ಟೆಂಬರ್ 10ರಿಂದ ಆರಂಭಿಸಲಿದೆ. ಭಾರತ-ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 14ರಂದು ನಡೆಯಲಿದೆ. ಈ ಬಾರಿಯ ಚಾಂಪಿಯನ್ ತಂಡಕ್ಕೆ 1 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಬಹುಮಾನ ಸಿಗಲಿದೆ. ಒಟ್ಟು 8 ತಂಡಗಳು ಭಾಗವಹಿಸುತ್ತಿವೆ.

1 / 6
2025 ರ ಟಿ20 ಏಷ್ಯಾಕಪ್ ಇಂದಿನಿಂದ ಅಂದರೆ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವೆ ಅಬುಧಾಬಿಯಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ತನ್ನ ಅಭಿಯಾನವನ್ನು ನಾಳೆ ಅಂದರೆ ಸೆಪ್ಟೆಂಬರ್ 10 ರಿಂದ ಆರಂಭಿಸಲಿದೆ. ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 14 ರ ಭಾನುವಾರ ನಡೆಯಲಿದೆ.

2 / 6
ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಇವುಗಳನ್ನು ತಲಾ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಗ್ರೂಪ್-ಎ ನಲ್ಲಿ ಭಾರತ-ಪಾಕಿಸ್ತಾನದೊಂದಿಗೆ ಓಮನ್ ಮತ್ತು ಯುಎಇ ನಂತಹ ತಂಡಗಳಿವೆ. ಗ್ರೂಪ್-ಬಿ ನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಹಾಂಗ್ ಕಾಂಗ್ ಜೊತೆಗೆ ಶ್ರೀಲಂಕಾ ತಂಡಗಳಿವೆ.

3 / 6
ಮೂರನೇ ಬಾರಿಗೆ ಟಿ20 ಮಾದರಿಯಲ್ಲಿ ನಡೆಯುತ್ತಿರುವ ಏಷ್ಯಾಕಪ್​ ಆರಂಭಕ್ಕೂ ಮುನ್ನ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ಈ ಬಾರಿ ಚಾಂಪಿಯನ್ ಆಗುವ ತಂಡಕ್ಕೆ 1 ಕೋಟಿ ರೂ. ಅಧಿಕ ಬಹುಮಾನ ಸಿಗಲಿದೆ. ಅಂದರೆ 2025 ರ ಏಷ್ಯಾಕಪ್ ಬಹುಮಾನದ ಮೊತ್ತ ಪೂರ್ಣ 1 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.

4 / 6
ಕಳೆದ ಬಾರಿ, ಅಂದರೆ 2022 ರಲ್ಲಿ ನಡೆದಿದ್ದ ಟಿ20 ಏಷ್ಯಾಕಪ್​ನಲ್ಲಿ ಚಾಂಪಿಯನ್ ಆಗಿದ್ದ ಶ್ರೀಲಂಕಾ ತಂಡಕ್ಕೆ ಸುಮಾರು 1.6 ಕೋಟಿ ಬಹುಮಾನದ ಹಣ ಸಿಕ್ಕಿತು. ಹಾಗೆಯೇ ಪಂದ್ಯಾವಳಿಯಲ್ಲಿ ರನ್ನರ್ ಅಪ್ ತಂಡವಾಗಿದ್ದ ಪಾಕಿಸ್ತಾನಕ್ಕೆ 79.66 ಲಕ್ಷ ರೂ. ಬಹುಮಾನ ನೀಡಲಾಗಿತ್ತು. ಉಳಿದಂತೆ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳು ಕ್ರಮವಾಗಿ ಸುಮಾರು 53 ಲಕ್ಷ ಮತ್ತು 39 ಲಕ್ಷ ರೂ. ಹಣ ಪಡೆದಿದ್ದವು.

5 / 6
2022 ರ ಟಿ20 ಏಷ್ಯಾ ಕಪ್‌ಗೆ ಹೋಲಿಸಿದರೆ, ಈ ವರ್ಷದ ವಿಜೇತರಿಗೆ ಸಿಗುವ ಬಹುಮಾನದ ಮೊತ್ತ 2.6 ಕೋಟಿ ರೂ. ಆಗಿದೆ. ಅಂದರೆ ಕಳೆದ ಏಷ್ಯಾಕಪ್‌ನ ಬಹುಮಾನದ ಮೊತ್ತಕ್ಕಿಂತ ಸುಮಾರು ಒಂದು ಕೋಟಿ ಭಾರತೀಯ ರೂಪಾಯಿ ಹೆಚ್ಚಾಗಿದೆ. ಹಾಗೆಯೇ ರನ್ನರ್ ಅಪ್ ತಂಡವು 1.3 ಕೋಟಿ ರೂ. ಪಡೆಯುವ ನಿರೀಕ್ಷೆಯಿದೆ. ಸರಣಿ ಶ್ರೇಷ್ಠ ಆಟಗಾರನಿಗೆ 12.5 ಲಕ್ಷ ರೂ. ಬಹುಮಾನದ ಮೊತ್ತ ಸಿಗಲಿದೆ ಎಂದು ವರದಿಯಾಗಿದೆ.

6 / 6
ಇನ್ನು ಏಷ್ಯಾಕಪ್​ನ ಒಂದು ವಿಶೇಷ ಸಂಗತಿಯೆಂದರೆ, ಟೀಂ ಇಂಡಿಯಾ ಏಷ್ಯಾಕಪ್ ಗೆದ್ದಾಗಲೆಲ್ಲ ಆ ಹಣವನ್ನು ತಾನು ಪಡೆದುಕೊಳ್ಳುವುದಿಲ್ಲ. ಅಂದರೆ ಆ ಹಣವನ್ನು ತಂಡದ ಆಟಗಾರರಿಗೆ ಹಂಚುವ ಬದಲು ಬಿಸಿಸಿಐ, ಏಷ್ಯನ್ ಕ್ರಿಕೆಟ್ ಅನ್ನು ಉತ್ತೇಜಿಸಲು ಈ ಮೊತ್ತವನ್ನು ದೇಣಿಗೆ ನೀಡುತ್ತದೆ.