SL vs PAK: ಏಷ್ಯಾಕಪ್ ಗೆದ್ದ ಬಳಿಕ ಶ್ರೀಲಂಕಾ ಆಟಗಾರರ ಸಂಭ್ರಮಾಚರಣೆ ಹೇಗಿತ್ತು ನೋಡಿ
TV9 Web | Updated By: Vinay Bhat
Updated on:
Sep 12, 2022 | 11:05 AM
Asia Cup Final 2022: ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ತೆರೆಬಿದ್ದಿದ್ದು ಶ್ರೀಲಂಕಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗೆದ್ದ ಖುಷಿಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು.
1 / 9
ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ತೆರೆಬಿದ್ದಿದ್ದು ಶ್ರೀಲಂಕಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಲಂಕಾ 23 ರನ್ ಗಳ ಗೆಲುವು ಸಾಧಿಸಿತು.
2 / 9
ತೀವ್ರ ಆರ್ಥಿಕ ಬಿಕ್ಕಟ್ಟು, ರಾಜಕೀಯ ಪ್ರಕ್ಷುಬ್ದತೆಯ ನಡುವೆಯೂ ಏಷ್ಯಾಕಪ್ ನಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಸಿಂಹಳೀಯರು 2014ರ ನಂತರ ಪ್ರತಿಷ್ಟಿತ ಪ್ರಶಸ್ತಿ ಬಾಜಿಕೊಂಡಿತು.
3 / 9
ಈ ಮೂಲಕ ಒಟ್ಟು 6ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 10 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಪಾಕ್ ಬಯಕೆ ಈ ಬಾರಿ ಕೂಡ ಈಡೇರಲಿಲ್ಲ. ಗೆದ್ದ ಖುಷಿಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು.
4 / 9
ಫೈನಲ್ ಕಾದಾಟದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಗೆ ಇಳಿದ ಶ್ರೀಲಂಕಾ ಪವರ್ ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್ನ ಮೊದಲ ಓವರ್ ನಲ್ಲಿ ಕುಸಲ್ ಮೆಂಡಿಸ್ (0) ಔಟಾದರೆ, ಪಥುಮ್ ನಿಸ್ಸಂಕಾ (8) ಹಾಗೂ ಗುಣತಿಲಕ (1) ಅವರನ್ನು ಹ್ಯಾರಿಸ್ ರೌಫ್ ಪೆವಿಲಿಯನ್ ಗೆ ಅಟ್ಟಿದರು.
5 / 9
ನಂತರ ಪಾಕಿಸ್ತಾನ ಬೌಲರ್ ಗಳನ್ನು ಸುಲಭವಾಗಿ ದಂಡಿಸಿದ ರಾಜಪಕ್ಷ ಕೇವಲ 45 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಬಾರಿಸಿ ಅಜೇಯ 71 ರನ್ ಚಚ್ಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹಸರಂಗ 21 ಎಸೆತಗಳಲ್ಲಿ 36 ರನ್ ಬಾರಿಸಿದರು.
6 / 9
ಶ್ರೀಲಂಕಾ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಸೇರಿಸಿತು. ಪಾಕ್ ಪರ ಹ್ಯಾರಿಸ್ ರೌಫ್ 3 ವಿಕೆಟ್, ನಸೀಂ, ಶಬ್ದಾದ್ ಖಾನ್ ಹಾಗೂ ಅಹ್ಮದ್ ತಲಾ 1 ವಿಕೆಟ್ ಪಡೆದರು.
7 / 9
171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಬೇಗನೆ ನಾಯಕ 2 ವಿಕೆಟ್ ಕಳೆದುಕೊಂಡಿತು. ಈ ವೇಳೆ ಮೊಹಮ್ಮದ್ ರಿಜ್ವಾನ್ (55) ಮತ್ತು ಇಫ್ತಿಕರ್ ಅಹ್ಮದ್ (32) ಕುಸಿದಿದ್ದ ತಂಡಕ್ಕೆ ಆಸರೆಯಾದರು. ಇವರಿಬ್ಬರು 71 ರನ್‌ಗಳ ಜೊತೆಯಾಟ ಆಡಿದರು. ನಂತರ ಬಂದ ಪಾಕ್ ಬ್ಯಾಟರ್ಗಳೆಲ್ಲ ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಪಾಕಿಸ್ತಾನ 20 ಓವರ್ನಲ್ಲಿಯೇ 147 ರನ್ಗೆ ಆಲೌಟ್ ಆಗಿ ಸೋಲುಂಡಿತು.
8 / 9
ಲಂಕಾ ಪರ ಪ್ರಮೋದ್ 4 ವಿಕೆಟ್ ಪಡೆದರೆ, ಹಸರಂಗ 3, ಕರುಣರತ್ನೆ 2 ಹಾಗೂ ತಿಕ್ಷಣ್ 1 ವಿಕೆಟ್ ತಮ್ಮದಾಗಿಸಿದರು. ಹಸರಂಗ ಸರಣಿಶ್ರೇಷ್ಠ ಮತ್ತು ರಾಜಪಕ್ಷ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
9 / 9
ಶ್ರೀಲಂಕಾ ಗೆದ್ದಾಗ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಒಂದು ನೋಟ
Published On - 11:05 am, Mon, 12 September 22