- Kannada News Photo gallery Cricket photos MS Dhoni Dresses Up As a Traffic Policeman for Latest Ad Shoot
MS Dhoni: ಆರ್ಮಿ ಬಳಿಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡ್ರ ಧೋನಿ? ಫೋಟೋ ನೋಡಿ
MS Dhoni: ಧೋನಿಗೆ ಭಾರತೀಯ ಸೈನ್ಯದ ಪ್ಯಾರಾ ಫೋರ್ಸ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಮಾಣಿತ ಶ್ರೇಣಿಯನ್ನು ನೀಡಲಾಗಿದೆ.
Updated on:Sep 11, 2022 | 6:30 PM

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಖಾಡದಿಂದ ದೂರವಿರಬಹುದು ಆದರೆ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಾರಿ ಧೋನಿ ಹೊಸ ಲುಕ್‌ನಿಂದ ಟ್ರೆಂಡಿಂಗ್ ಆಗಿದ್ದು ಅವರ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ಧೋನಿ ಫೋಟೋದಲ್ಲಿ, ಅವರು ಟ್ರಾಫಿಕ್ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ. ಬಿಳಿ ಅಂಗಿಯಲ್ಲಿ ಧೋನಿ ಕಾಣಿಸಿಕೊಂಡಿದ್ದು, ಅವರ ಭುಜಗಳ ಮೇಲೆ ಸ್ಟಾರ್ಗಳನ್ನು ಕಾಣಬಹುದಾಗಿದೆ.

ಈಗ ಧೋನಿಯವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮಹಿ ಯಾವಾಗ ಪೊಲೀಸ್ ಆದರು ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ. ಆದರೆ ಈ ಫೋಟೋದ ಹಿಂದಿನ ಕಹಾನಿ ಏನೆಂದರೆ, ಧೋನಿ ಒಂದು ಜಾಹೀರಾತು ಶೂಟ್‌ಗಾಗಿ ಪೊಲೀಸ್ ವೇಶದಲ್ಲಿ ಕಾಣಿಸಿಕೊಂಡಿದ್ದಾರೆ.

ಎಂಎಸ್ ಧೋನಿ- ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾಕ್ಕೆ ಗೆಲ್ಲಿಸಿಕೊಟ್ಟಿರುವ ಐಸಿಸಿ ಪ್ರಶಸ್ತಿಗಳನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇಂತಹ ಧೋನಿ, ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡಿದ್ದಾರೆ.

ಧೋನಿ 2020 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಅಂದಿನಿಂದ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುತ್ತಿದ್ದಾರೆ. ಕಳೆದ ವರ್ಷ ಐಪಿಎಲ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಆದಾಗ್ಯೂ ಸೀಸನ್ ಮಧ್ಯದಲ್ಲಿ, ಅವರು ಮತ್ತೊಮ್ಮೆ ನಾಯಕತ್ವವಹಿಸಿಕೊಳ್ಳಬೇಕಾಯಿತು. ವರದಿಗಳ ಪ್ರಕಾರ ಧೋನಿ 2023 ರ ಆವೃತ್ತಿಯಲ್ಲೂ ಸಿಎಸ್ಕೆ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ.
Published On - 6:30 pm, Sun, 11 September 22




