T20 Records: ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಶತಕದ ಸರದಾರ ಯಾರು ಗೊತ್ತಾ?
Most T20 Centuries By Indians: ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಆಟಗಾರರು ಯಾರೆಲ್ಲಾ ಎಂಬ ಈ ಪಟ್ಟಿ ಈ ಕೆಳಗಿನಂತಿದೆ.
Updated on: Sep 11, 2022 | 5:31 PM

ಏಷ್ಯಾಕಪ್ನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ದ ಭರ್ಜರಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕೆರಿಯರ್ನಲ್ಲೂ ಸೆಂಚುರಿ ಖಾತೆ ತೆರೆದಿದ್ದಾರೆ. ವಿಶೇಷ ಎಂದರೆ ಈ ಶತಕದೊಂದಿಗೆ ಕೊಹ್ಲಿ ಶತಕದ ಸರದಾರರ ದಾಖಲೆಯನ್ನು ಕೂಡ ಸರಿಗಟ್ಟಿದ್ದಾರೆ.

ಅಂದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಇದು ವಿರಾಟ್ ಕೊಹ್ಲಿಗೆ ಮೊದಲ ಶತಕವಾದರೆ, ಇದಕ್ಕೂ ಮುನ್ನ ಕೆಎಲ್ ರಾಹುಲ್, ರೋಹಿತ್ ಶರ್ಮಾ, ದೀಪಕ್ ಹೂಡಾ ಹಾಗೂ ಸೂರ್ಯಕುಮಾರ್ ಯಾದವ್ ಶತಕ ಸಿಡಿಸಿದ್ದರು. ಹಾಗೆಯೇ ಐಪಿಎಲ್ನಲ್ಲೂ ಈ ಆಟಗಾರರು ಶತಕ ಸಿಡಿಸಿದ್ದರು.

ಇದೀಗ ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಶತಕದ ಪಟ್ಟಿಯಲ್ಲಿ ಕೆಎಲ್ ರಾಹುಲ್ ಜೊತೆ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹಾಗಿದ್ರೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಆಟಗಾರರು ಯಾರೆಲ್ಲಾ ಎಂಬ ಈ ಪಟ್ಟಿ ಈ ಕೆಳಗಿನಂತಿದೆ.

ರೋಹಿತ್ ಶರ್ಮಾ: ಹಿಟ್ಮ್ಯಾನ್ ಟಿ20 ಕ್ರಿಕೆಟ್ನಲ್ಲಿ 5 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಒಂದು ಐಪಿಎಲ್ ಶತಕವಾದರೆ, ಮಿಕ್ಕವು ಟೀಮ್ ಇಂಡಿಯಾ ಪರ ಸಿಡಿಸಿದ ಶತಕಗಳು ಎಂಬುದು ವಿಶೇಷ. ಹಾಗೆಯೇ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 4 ಶತಕ ಬಾರಿಸಿದ ವಿಶೇಷ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿದೆ.

ಕೆಎಲ್ ರಾಹುಲ್: ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಟಿ20ಯಲ್ಲಿ 2 ಶತಕ ಬಾರಿಸಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ 4 ಶತಕ ಸಿಡಿಸಿ ಮಿಂಚಿದ್ದಾರೆ. ಅಂದರೆ ಕೆಎಲ್ ರಾಹುಲ್ ಹೆಸರಿನಲ್ಲಿ ಒಟ್ಟು 6 ಟಿ20 ಶತಕಗಳಿವೆ.

ವಿರಾಟ್ ಕೊಹ್ಲಿ: ಟೀಮ್ ಇಂಡಿಯಾ ಪರ ಚೊಚ್ಚಲ ಟಿ20 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಈ ಹಿಂದೆ ಐಪಿಎಲ್ನಲ್ಲಿ 5 ಭರ್ಜರಿ ಶತಕಗಳನ್ನು ಬಾರಿಸಿದ್ದರು. ಇದೀಗ ಅಫ್ಘಾನ್ ವಿರುದ್ಧ ಸೆಂಚುರಿ ಸಿಡಿಸಿ ಒಟ್ಟು ಟಿ20 ಶತಕಗಳ ಸಂಖ್ಯೆಯನ್ನು 6 ಕ್ಕೇರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಜೊತೆ ಅಗ್ರಸ್ಥಾನ ಅಲಂಕರಿಸಿದ್ದಾರೆ.
