AUS vs WI: ವಿಂಡೀಸ್ ವಿರುದ್ಧ ಅದ್ಭುತ ಶತಕ; ಟೆಸ್ಟ್ ಕ್ರಿಕೆಟ್ನಲ್ಲಿ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಸ್ಟೀವ್ ಸ್ಮಿತ್
TV9 Web | Updated By: ಪೃಥ್ವಿಶಂಕರ
Updated on:
Dec 01, 2022 | 12:11 PM
AUS vs WI: ತಮ್ಮ 155ನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 29ನೇ ಶತಕ ಬಾರಿಸಿರುವ ಸ್ಮಿತ್, ಈ ಶತಕದೊಂದಿಗೆ ಬ್ರಾಡ್‌ಮನ್ ನಂತರ ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 29 ಶತಕಗಳನ್ನು ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1 / 5
ವೆಸ್ಟ್ ಇಂಡೀಸ್ ವಿರುದ್ಧ ಪರ್ತ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ ಸ್ಟೀವ್ ಸ್ಮಿತ್ ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಸ್ಮಿತ್ ಅವರ ಟೆಸ್ಟ್ ವೃತ್ತಿ ಬದುಕಿನ 29ನೇ ಶತಕವಾಗಿದ್ದು, ಇದರೊಂದಿಗೆ ಅವರು ಡಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.
2 / 5
ತಮ್ಮ 155ನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 29ನೇ ಶತಕ ಬಾರಿಸಿರುವ ಸ್ಮಿತ್, ಈ ಶತಕದೊಂದಿಗೆ ಬ್ರಾಡ್‌ಮನ್ ನಂತರ ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 29 ಶತಕಗಳನ್ನು ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
3 / 5
ತವರು ನೆಲದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸುವ ಮೂಲಕ 4000 ರನ್ ಪೂರೈಸಿದ ದಾಖಲೆಯೂ ಸ್ಟೀವ್ ಸ್ಮಿತ್ ಪಾಲಾಗಿದೆ.
4 / 5
ದೇಶೀಯ ಟೆಸ್ಟ್‌ಗಳಲ್ಲಿ 4000 ಕ್ಕಿಂತ ಹೆಚ್ಚು ರನ್ ಗಳಿಸುವಲ್ಲಿ ಸ್ಮಿತ್ ಸರಾಸರಿ ಸಚಿನ್ ತೆಂಡೂಲ್ಕರ್ ಅವರ 52.67 ಗಿಂತ ಉತ್ತಮವಾಗಿದೆ. ಸಚಿನ್ ದೇಶೀಯ ಟೆಸ್ಟ್‌ಗಳಲ್ಲಿ 7216 ರನ್ ಗಳಿಸಿದ್ದಾರೆ. ಸಚಿನ್ರನ್ನು ಹೊರತುಪಡಿಸಿ ದೇಶೀಯ ಟೆಸ್ಟ್‌ನಲ್ಲಿ 7578 ರನ್ ಬಾರಿಸಿರುವ ದಾಖಲೆ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ.
5 / 5
ತವರಿನ ಟೆಸ್ಟ್‌ಗಳಲ್ಲಿ 4000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಡಾನ್ ಬ್ರಾಡ್‌ಮನ್ (98.22) ಮತ್ತು ಗ್ಯಾರಿ ಸೋಬರ್ಸ್ (66.80) ಮಾತ್ರ ಸ್ಮಿತ್‌ಗಿಂತ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
Published On - 12:06 pm, Thu, 1 December 22