IND vs AUS: ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಆಸೀಸ್ ಸ್ಟಾರ್ ಆಲ್‌ರೌಂಡರ್ ಅನುಮಾನ

IND vs AUS: ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಮಧ್ಯಕ್ಕೆ ನಿಲ್ಲಿಸಿ ತಮ್ಮ ತವರಿಗೆ ವಾಪಸ್ಸಾಗಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಗ್ರೀನ್, ಆಸೀಸ್ ಕ್ರಿಕೆಟ್ ಮಂಡಳಿಯ ಆದೇಶದಂತೆ ಇದೀಗ ತವರಿಗೆ ವಾಪಸ್ಸಾಗಲಿದ್ದು, ಆ ನಂತರ ಚಿಕಿತ್ಸೆಗೆ ಒಳಗಾಗಲಿದ್ದಾರೆ.

|

Updated on: Sep 28, 2024 | 5:31 PM

ಒಂದೆಡೆ ಭಾರತ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ನಡೆಯುತ್ತಿದೆ. ಇದಾದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇದೇ ನವೆಂಬರ್​ನಿಂದ ನಡೆಯಲ್ಲಿರುವ 5 ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ.

1 / 7
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಲು ಈ ಸರಣಿ ಗೆಲ್ಲುವುದು ಉಭಯ ತಂಡಗಳಿಗೂ ಬಹಳ ಮುಖ್ಯವಾಗಿದೆ. ಹೀಗಾಗಿ ಎರಡೂ ತಂಡಗಳು ಬಲಿಷ್ಠ ಪಡೆಯನ್ನು ಕಟ್ಟಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿವೆ. ಈ ಸರಣಿ ಆರಂಭವಾಗಲು ಇನ್ನು ಸಾಕಷ್ಟು ಸಮಯವಿದ್ದರೂ, ಆಸೀಸ್ ಪಾಳಯಕ್ಕೆ ಆಘಾತ ನೀಡುವ ಸುದ್ದಿಯೊಂದು ಹೊರಬಿದ್ದಿದೆ.

2 / 7
ಅದೆನೆಂದರೆ ತಂಡದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಮಧ್ಯಕ್ಕೆ ನಿಲ್ಲಿಸಿ ತಮ್ಮ ತವರಿಗೆ ವಾಪಸ್ಸಾಗಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಗ್ರೀನ್, ಆಸೀಸ್ ಕ್ರಿಕೆಟ್ ಮಂಡಳಿಯ ಆದೇಶದಂತೆ ಇದೀಗ ತವರಿಗೆ ವಾಪಸ್ಸಾಗಲಿದ್ದು, ಆ ನಂತರ ಚಿಕಿತ್ಸೆಗೆ ಒಳಗಾಗಲಿದ್ದಾರೆ.

3 / 7
ಇಂಜುರಿಯಿಂದ ಬಳಲುತ್ತಿರುವ ಗ್ರೀನ್ ಯಾವಾಗ ಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂಬುದು ಚಿಕಿತ್ಸೆಯ ಬಳಿಕವಷ್ಟೇ ತಿಳಿಯಲಿದೆ. ಆದರೆ ಅವರ ಗಾಯವನ್ನು ಗಮನಿಸಿದರೆ, ಅವರ ಚೇತರಿಕೆ ಸಾಕಷ್ಟು ಸಮಯ ಹಿಡಿಯಬಹುದು ಎನ್ನಲಾಗುತ್ತಿದೆ. ಇದರರ್ಥ ಅವರು ನವೆಂಬರ್​ನಿಂದ ತವರಿನಲ್ಲಿ ಆರಂಭವಾಗಲಿರುವ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೆ ಲಭ್ಯವಾಗುವ ಸಾಧ್ಯತೆಗಳು ದಟ್ಟವಾಗಿವೆ.

4 / 7
ಇದು ಆಸೀಸ್ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಏಕೆಂದರೆ ಈ ಹಿಂದೆ ನಡೆದಿದ್ದ ಬಾರ್ಡರ್ ಗವಾಸ್ಕರ್‌ ಟ್ರೋಫಿಯ ಎರಡು ಆವೃತ್ತಿಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಹೀನಾಯವಾಗಿ ಮಣಿಸಿತ್ತು. ಹೀಗಾಗಿ ಈ ಬಾರಿಯಾದರೂ ಈ ಸರಣಿಯನ್ನು ಗೆಲ್ಲಬೇಕು ಎಂದುಕೊಂಡಿರುವ ಆಸೀಸ್ ಆಟಗಾರರು ಈಗಾಗಲೇ ತಮ್ಮ ಮೈಂಡ್ ಗೇಮ್ ಅನ್ನು ಶುರು ಮಾಡಿದ್ದಾರೆ. ಆದರೀಗ ತಂಡದ ಪ್ರಮುಖ ಆಟಗಾರ ಇಂಜುರಿಗೊಳಗಾಗಿರುವುದು ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

5 / 7
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಗ್ರೀನ್‌ನ ಅವರ ತವರು ಮೈದಾನ ಪರ್ತ್‌ನಿಂದ ಪ್ರಾರಂಭವಾಗಲಿದ್ದು, 2025 ರ ಜನವರಿ ಮೊದಲ ವಾರದಲ್ಲಿ ಸಿಡ್ನಿ ಟೆಸ್ಟ್‌ನೊಂದಿಗೆ ಕೊನೆಗೊಳ್ಳುತ್ತದೆ. ಈ ಐದು ಟೆಸ್ಟ್ ಪಂದ್ಯಗಳಲ್ಲಿ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯ ಕೂಡ ಸೇರಿದೆ.

6 / 7
ಕಳೆದ ವರ್ಷ ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸದ ವೇಳೆ ಗ್ರೀನ್ ಅಹಮದಾಬಾದ್‌ನಲ್ಲಿ ಅದ್ಭುತ ಶತಕ ಬಾರಿಸಿದ್ದರು. ಅದೇ ವರ್ಷದಲ್ಲಿ, ಅವರು ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 174 ರನ್‌ಗಳ ಇನ್ನಿಂಗ್ಸ್‌ ಕೂಡ ಆಡಿದರು. ಇಲ್ಲಿಯವರೆಗೆ, ಗ್ರೀನ್ ಅವರು 28 ಟೆಸ್ಟ್‌ಗಳಲ್ಲಿ 36 ರ ಸರಾಸರಿಯಲ್ಲಿ 1377 ರನ್ ಗಳಿಸಿದ್ದಾರೆ ಮತ್ತು 35 ರ ಸರಾಸರಿಯಲ್ಲಿ 35 ವಿಕೆಟ್‌ಗಳನ್ನು ಪಡೆದಿದ್ದಾರೆ.

7 / 7
Follow us