
ಟೀಂ ಇಂಡಿಯಾದ ಇಬ್ಬರು ಸ್ಟಾರ್ ಕ್ರಿಕೆಟಿಗರು ಶೀಘ್ರದಲ್ಲೇ ಮದುಮಗರಾಗಲಿದ್ದಾರೆ. ಕಳೆದ ವರ್ಷದಿಂದಲೇ ಕನ್ನಡಿಗ ಕೆಎಲ್ ರಾಹುಲ್ ಅವರ ಮದುವೆ ಬಗ್ಗೆ ಸುದ್ದಿ ಕೇಳಿಬರುತ್ತಲೇ ಇದೆ. ಆದರೆ ಇದೀಗ ಮತ್ತೊಬ್ಬ ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಕೂಡ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಅಕ್ಷರ್ ಪಟೇಲ್ ತನ್ನ ಬಹುದಿನಗಳ ಗೆಳತಿ ಮೇಹಾ ಪಟೇಲ್ ಜೊತೆಗೆ ಈ ತಿಂಗಳು ಏಳು ಹೆಜ್ಜೆ ಇಡಲಿದ್ದಾರೆ. ಇದೇ ಕಾರಣಕ್ಕೆ ಬಿಸಿಸಿಐ ಅವರಿಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ವಿಶ್ರಾಂತಿ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ತಂಡವನ್ನು ಪ್ರಕಟಿಸಿದಾಗ ಕೌಟುಂಬಿಕ ಕಾರಣದಿಂದ ಅಕ್ಷರ್ ಸರಣಿಗೆ ಲಭ್ಯರಿಲ್ಲ ಎಂದು ಮಂಡಳಿ ತಿಳಿಸಿತ್ತು.

ಅಕ್ಷರ್ ಬಹಳ ದಿನಗಳಿಂದ ಮೇಹಾ ಜೊತೆ ಡೇಟಿಂಗ್ ಮಾಡುತ್ತಿದ್ದು, ಕಳೆದ ವರ್ಷ ತನ್ನ ಹುಟ್ಟುಹಬ್ಬದಂದು (ಜನವರಿ 20) ಮೇಹಾಗೆ ಅಕ್ಷರ್ ಪ್ರಪೋಸ್ ಮಾಡಿದ್ದರು. ನಂತರ ಈ ಇಬ್ಬರು ತಮ್ಮ ಪ್ರೀತಿ ವಿಚಾರವನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು.

ಅಕ್ಷರ್ ಪಟೇಲ್ ಅವರ ಪ್ರೇಯಸಿ ಮೇಹಾ ಅವರು ಡಯಟಿಷಿಯನ್ ಮತ್ತು ವೃತ್ತಿಯಲ್ಲಿ ಪೌಷ್ಟಿಕತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೇಹಾ ತಮ್ಮ ಕೈ ಮೇಲೆ 'AKSH' ಎಂದು ಹಚ್ಚೆ ಹಾಕಿಸಿಕೊಂಡಿದ್ದು, ಇದು ಅವರು ಅಕ್ಷರ್ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬ ಸೂಚಕವಾಗಿದೆ
Published On - 12:26 pm, Sun, 15 January 23