ಅದರಲ್ಲೂ ನ್ತಾಬಿಸೆಂಗ್ ನೀನಿ ಎಸೆದ ಪಂದ್ಯದ 6ನೇ ಓವರ್ನಲ್ಲಿ ಅಬ್ಬರಿಸಿದ ಮೊದಲ 5 ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 5 ಫೋರ್ಗಳನ್ನು ಬಾರಿಸಿದರು. ಇನ್ನು 6ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಒಟ್ಟು 26 ರನ್ ಕಲೆಹಾಕಿದರು. ಈ ಮೂಲಕ ಮಹಿಳಾ ಅಂಡರ್-19 ಪಂದ್ಯದಲ್ಲಿ ಒಂದೇ ಓವರ್ನ ಎಲ್ಲಾ ಎಸೆತಗಳಲ್ಲಿ ಬೌಂಡರಿ ಬಾರಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ಶಫಾಲಿ ವರ್ಮಾ ತಮ್ಮದಾಗಿಸಿಕೊಂಡರು.