ಭರ್ಜರಿ ಸೆಂಚುರಿಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಬಾಬರ್ ಆಝಂ
TV9 Web | Updated By: ಝಾಹಿರ್ ಯೂಸುಫ್
Updated on:
Aug 30, 2023 | 10:56 PM
Babar Azam Records: ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ 131 ಎಸೆತಗಳನ್ನು ಎದುರಿಸಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 151 ರನ್ ಚಚ್ಚಿದರು. ಈ ಶತಕದೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 19 ಶತಕಗಳನ್ನು ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಬಾಬರ್ ಪಾಲಾಯಿತು.
1 / 7
ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಬಾಬರ್ ಆಝಂ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದಿಗ್ಗಜರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.
2 / 7
ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ 131 ಎಸೆತಗಳನ್ನು ಎದುರಿಸಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 151 ರನ್ ಚಚ್ಚಿದರು. ಈ ಶತಕದೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 19 ಶತಕಗಳನ್ನು ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಬಾಬರ್ ಪಾಲಾಯಿತು.
3 / 7
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಸೌತ್ ಆಫ್ರಿಕಾದ ಹಾಶಿಮ್ ಆಮ್ಲ ಹೆಸರಿನಲ್ಲಿತ್ತು. ಆಮ್ಲ 104 ಏಕದಿನ ಇನಿಂಗ್ಸ್ಗಳಲ್ಲಿ 19 ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು.
4 / 7
ಇನ್ನು ವಿರಾಟ್ ಕೊಹ್ಲಿ 124 ಇನಿಂಗ್ಸ್ಗಳ ಮೂಲಕ ಏಕದಿನ ಕ್ರಿಕೆಟ್ನಲ್ಲಿ 19 ಶತಕಗಳನ್ನು ಪೂರೈಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ ಅತ್ಯಂತ ವೇಗವಾಗಿ 19 ಏಕದಿನ ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದ್ದರು.
5 / 7
ಹಾಗೆಯೇ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 139 ಏಕದಿನ ಇನಿಂಗ್ಸ್ಗಳ ಮೂಲಕ 19 ಸೆಂಚುರಿ ಪೂರೈಸಿದ್ದರು. ಇದೀಗ ಈ ಎಲ್ಲಾ ದಾಖಲೆಗಳನ್ನು ಮುರಿದು ಬಾಬರ್ ಆಝಂ ಹೊಸ ಇತಿಹಾಸ ನಿರ್ಮಿಸಿದ್ದಾರೆ.
6 / 7
ನೇಪಾಳ ವಿರುದ್ಧ ಕೇವಲ 109 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗದಲ್ಲಿ 19 ಸೆಂಚುರಿ ಸಿಡಿಸಿ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಲು ಬಾಬರ್ ಆಝಂ ತೆಗೆದುಕೊಂಡಿರುವುದು ಕೇವಲ 102 ಇನಿಂಗ್ಸ್ಗಳು ಮಾತ್ರ.
7 / 7
ಈ ಮೂಲಕ ಹಾಶಿಮ್ ಆಮ್ಲ (104 ಇನಿಂಗ್ಸ್) ಹೆಸರಿನಲ್ಲಿದ್ದ ಅತ್ಯಂತ ವೇಗದ 19 ಶತಕಗಳ ವಿಶ್ವ ದಾಖಲೆಯನ್ನು ಬಾಬರ್ ಆಝಂ (102 ಇನಿಂಗ್ಸ್) ತಮ್ಮದಾಗಿಸಿಕೊಂಡಿದ್ದಾರೆ.