- Kannada News Photo gallery Cricket photos Babar Azam Breaks Kohli's T20 Record Despite Pakistan Whitewash
ಕಿಂಗ್ ಕೊಹ್ಲಿಯ ಶ್ರೇಷ್ಠ ದಾಖಲೆ ಮುರಿದ ಬಾಬರ್ ಆಝಂ; ಮುಂದಿನ ಟಾರ್ಗೆಟ್ ರೋಹಿತ್ ಶರ್ಮಾ
Babar Azam Breaks Kohli's T20 Record: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಪಾಕಿಸ್ತಾನ ಸೋಲುಂಡರೂ,ತಂಡದ ಮಾಜಿ ನಾಯಕ ಬಾಬರ್ ಆಝಂ, ವಿರಾಟ್ ಕೊಹ್ಲಿಯ ಅಂತರರಾಷ್ಟ್ರೀಯ ಟಿ20 ರನ್ ದಾಖಲೆಯನ್ನು ಮುರಿದರು. ಮೂರನೇ ಟಿ20 ಪಂದ್ಯದಲ್ಲಿ 41 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಬಾಬರ್, ಕೊಹ್ಲಿಯ ದಾಖಲೆ ಮುರಿದರು. ಈಗ ಅವರು ರೋಹಿತ್ ಶರ್ಮಾ ಅವರ ದಾಖಲೆಯತ್ತ ಕಣ್ಣಿಟ್ಟಿದ್ದಾರೆ.
Updated on: Nov 18, 2024 | 6:36 PM

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ನಡುವೆ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ತಂಡ ವೈಟ್ ವಾಶ್ ಮುಖಭಂಗಕ್ಕೀಡಾಗಿದೆ. ಇಂದು ನಡೆದ ಮೂರನೇ ಪಂದ್ಯದಲ್ಲಿ ಪಾಕ್ ತಂಡವನ್ನು ಹೀನಾಯವಾಗಿ ಮಣಿಸುವ ಮೂಲಕ ಆಸೀಸ್ ಪಡೆ, ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ಆದರೆ ಸರಣಿ ಸೋಲಿನ ನಡುವೆಯೂ ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂ, ಕಿಂಗ್ ಕೊಹ್ಲಿಯ ಅಪರೂಪದ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಉಭಯ ತಂಡಗಳ ನಡುವೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಬಾಬರ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಕೇವಲ 28 ಎಸೆತಗಳಲ್ಲಿ 41 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮೈದಾನಕ್ಕಿಳಿದ ಬಾಬರ್ ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಈ ಇನ್ನಿಂಗ್ಸ್ನಿಂದಾಗಿ ಇಷ್ಟು ದಿನ ಕೊಹ್ಲಿ ಹೆಸರಿನಲ್ಲಿದ್ದ ಈ ದಾಖಲೆ ಇದೀಗ ಬಾಬರ್ ಪಾಲಾಗಿದೆ.

ಆಸೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 41 ರನ್‌ಗಳ ಇನ್ನಿಂಗ್ಸ್ ಆಡಿದ ಬಾಬರ್, ಇದೀಗ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಕ್ರಿಕೆಟ್‌ನ ಅತ್ಯಂತ ಕಡಿಮೆ ಸ್ವರೂಪದಲ್ಲಿ ಬಾಬರ್ ಇದುವರೆಗೆ 4192 ರನ್ ಆಗಿದ್ದು, ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದೆ ಹಾಕಿದ್ದಾರೆ. ಕೊಹ್ಲಿ ಟಿ20ಯಲ್ಲಿ ಒಟ್ಟು 4188 ರನ್ ಗಳಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮೈದಾನಕ್ಕಿಳಿದ ಬಾಬರ್ ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿ ಪವರ್‌ಪ್ಲೇಯ ಸಂಪೂರ್ಣ ಲಾಭ ಪಡೆದರು. 146 ಸ್ಟ್ರೈಕ್ ರೇಟ್‌ನಲ್ಲಿ ಆಡಿದ ಬಾಬರ್ 28 ಎಸೆತಗಳಲ್ಲಿ 41 ರನ್ ಗಳಿಸಿದರು. ಆದಾಗ್ಯೂ, ಬಾಬರ್ ಮತ್ತೊಮ್ಮೆ ಆಡಮ್ ಝಂಪಾಗೆ ಬಲಿಯಾದರು.

ಸದ್ಯ ವಿರಾಟ್ ಕೊಹ್ಲಿಯ ದಾಖಲೆ ಮುರಿದಿರುವ ಬಾಬರ್, ಈಗ ರೋಹಿತ್ ಶರ್ಮಾ ಅವರ ಸಾರ್ವಕಾಲಿಕ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ವಾಸ್ತವವಾಗಿ, ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ ಅತಿ ಕಡಿಮೆ ಕ್ರಿಕೆಟ್‌ನಲ್ಲಿ 4231 ರನ್ ಗಳಿಸಿದ್ದಾರೆ.

ಇದೀಗ ಮುಂದಿನ ಸರಣಿಯಲ್ಲಿ ಬಾಬರ್ ಕೇವಲ 40 ರನ್ ಗಳಿಸಿದರೆ, ಟಿ20 ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗಾಗಲೇ ಈ ಸ್ವರೂಪದಿಂದ ನಿವೃತ್ತರಾಗಿರುವ ಕಾರಣ, ಬಾಬರ್ಗೆ ಈ ದಾಖಲೆಯನ್ನು ಮುರಿಯುವುದು ಅಷ್ಟು ಕಷ್ಟವಾಗಲಾರದು.
