
ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಹೀನಾಯ ದಾಖಲೆ ಬರೆದಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿಯ (Virat Kohli) ಅನಗತ್ಯ ದಾಖಲೆಯನ್ನು ಸರಿಗಟ್ಟುವ ಮೂಲಕ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸದೇ ಅತ್ಯಧಿಕ ಇನಿಂಗ್ಸ್ ಆಡಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ರಾವಲ್ಪಿಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ 51 ಎಸೆತಗಳಲ್ಲಿ ಕೇವಲ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಇದರೊಂದಿಗೆ ಪಾಕಿಸ್ತಾನ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸದೇ ಅತ್ಯಧಿಕ ಇನಿಂಗ್ಸ್ ಆಡಿದ ಟಾಪ್ ಆರ್ಡರ್ ಬ್ಯಾಟರ್ ಎಂಬ ಹೀನಾಯ ದಾಖಲೆಯೊಂದು ಬಾಬರ್ ಆಝಂ ಪಾಲಾಯಿತು.

ಅಷ್ಟೇ ಅಲ್ಲದೆ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಶತಕ ಸಿಡಿಸದೇ 83 ಇನಿಂಗ್ಸ್ ಆಡಿದ ವಿರಾಟ್ ಕೊಹ್ಲಿಯ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ. ಕಿಂಗ್ ಕೊಹ್ಲಿ 2019 ರಿಂದ 2022 ರ ನಡುವೆ ಶತಕ ಸಿಡಿಸದೇ ಬರೋಬ್ಬರಿ 83 ಇನಿಂಗ್ಸ್ ಆಡಿದ್ದರು. ಇದೀಗ ಈ ಅನಗತ್ಯ ದಾಖಲೆಯನ್ನು ಬಾಬರ್ ಆಝಂ ಸರಿಗಟ್ಟಿದ್ದಾರೆ.

ಬಾಬರ್ ಆಝಂ ಕಳೆದ 83 ಇನಿಂಗ್ಸ್ಗಳಿಂದ ಒಂದೇ ಒಂದು ಶತಕ ಬಾರಿಸಿಲ್ಲ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕದ ಬರ ಎದುರಿಸಿ ಅತ್ಯಧಿಕ ಇನಿಂಗ್ಸ್ ಆಡಿದ ಪಾಕ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶತಕ ಬಾರಿಸಿದೇ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಇನಿಂಗ್ಸ್ ಆಡಿದ ವಿಶ್ವದ 2ನೇ ಬ್ಯಾಟರ್ ಎಂಬ ಅನಗತ್ಯ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಬಾಬರ್ ಆಝಂ ಕೊನೆಯ ಬಾರಿ ಶತಕ ಬಾರಿಸಿದ್ದು 2023 ರಲ್ಲಿ. ಮುಲ್ತಾನ್ನಲ್ಲಿ ನಡೆದ ನೇಪಾಳ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ 151 ರನ್ ಬಾರಿಸಿದ್ದೇ ಕೊನೆ. ಇದಾದ ಬಳಿಕ 83 ಇನಿಂಗ್ಸ್ ಆಡಿರುವ ಬಾಬರ್ ಆಝಂಗೆ ಮೂರಂಕಿ ಮೊತ್ತಗಳಿಸಲು ಸಾಧ್ಯವಾಗಿಲ್ಲ. ಈ ಮೂಲಕ ಶತಕ ಸಿಡಿಸದೇ ಪಾಕ್ ಪರ ಅತ್ಯಧಿಕ ಇನಿಂಗ್ಸ್ ಆಡಿದ ಬ್ಯಾಟರ್ ಎಂಬ ಎನಿಸಿಕೊಂಡಿದ್ದಾರೆ.
Published On - 7:09 am, Wed, 12 November 25