Shakib Al Hasan: ದೃಷ್ಟಿ ಕಳೆದುಕೊಳ್ಳುವ ಭೀತಿಯಲ್ಲಿ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್..!

Shakib Al Hasan: ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಆದರೀಗ ಅದಕ್ಕೆ ಸಂಬಂಧಿಸಿದಂತೆ ಬಿಗ್ ಅಪ್​ಡೇಟ್ ಹೊರಬಿದ್ದಿದ್ದು, ಪ್ರಸ್ತುತ ವಿಶ್ವದ ನಂಬರ್ 1 ಆಲ್​ರೌಂಡರ್ ಶಾಶ್ವತ ಕುರುಡತನಕ್ಕೊಳಗಾಗುವ ಭೀತಿಯಲ್ಲಿದ್ದಾರೆ.

ಪೃಥ್ವಿಶಂಕರ
|

Updated on:Jan 25, 2024 | 4:05 PM

ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಆದರೀಗ ಅದಕ್ಕೆ ಸಂಬಂಧಿಸಿದಂತೆ ಬಿಗ್ ಅಪ್​ಡೇಟ್ ಹೊರಬಿದ್ದಿದ್ದು, ಪ್ರಸ್ತುತ ವಿಶ್ವದ ನಂಬರ್ 1 ಆಲ್​ರೌಂಡರ್ ಶಾಶ್ವತ ಕುರುಡತನಕ್ಕೊಳಗಾಗುವ ಭೀತಿಯಲ್ಲಿದ್ದಾರೆ.

1 / 7
ಬಾಂಗ್ಲಾ ನಾಯಕ ಶಕೀಬ್ ಅವರ ಎಡಗಣ್ಣಿನ ರೆಟಿನಾದಲ್ಲಿ ಸಮಸ್ಯೆ ಕಂಡುಬಂದಿದ್ದು, ಇದರಿಂದಾಗಿ ಅವರ ಎಡಗಣ್ಣಿನಲ್ಲಿ ದೃಷ್ಟಿ ದೋಷ ಕಂಡುಬಂದಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಾಹಿತಿ ಹಂಚಿಕೊಂಡಿದೆ.

2 / 7
2023ರ ಏಕದಿನ ವಿಶ್ವಕಪ್‌ನ ನಂತರ ಶಕೀಬ್, ಕಣ್ಣಿನಲ್ಲಿ ಸಮಸ್ಯೆ ಇರುವ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಅದನ್ನು ನೇತ್ರ ತಜ್ಞ ವೈದರ ಬಳಿ ತೊರಿಸಲಾಗಿ, ಶಕೀಬ್ ಅವರ ರೆಟಿನಾದಲ್ಲಿ ಸಮಸ್ಯೆ ಇದೆ ಎಂಬುದು ಬೆಳಕಿಗೆ ಬಂದಿದೆ.

3 / 7
ಈ ಕುರಿತು ಬಿಸಿಬಿಯ ಹಿರಿಯ ವೈದ್ಯ ದೇಬಾಶಿಶ್ ಚೌಧರಿ ಮಾಹಿತಿ ನೀಡಿದ್ದು, ಶಕೀಬ್ ಎಡಗಣ್ಣಿನ ಎಕ್ಸ್‌ಟ್ರಾಫೋವಲ್ ಸೆಂಟ್ರಲ್ ಸೆರೋಸ್ ಕೊರಿಯೊ ರೆಟಿನೋಪತಿ (ಸಿಎಸ್‌ಆರ್) ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

4 / 7
ಇನ್ನು ಈ ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿರುವ BCB ಯ ಹಿರಿಯ ವೈದ್ಯ ದೇಬಾಶಿಶ್ ಚೌಧರಿ, ಸೆಂಟ್ರಲ್ ಸೆರೋಸ್ ಕೊರಿಯೊ ರೆಟಿನೋಪತಿ ಸಮಸ್ಯೆಗೆ ತುತ್ತಾಗುವ ವ್ಯಕ್ತಿಯ ಕಣ್ಣುಗಳ ರೆಟಿನಾದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆ ವ್ಯಕ್ತಿಯ ದೃಷ್ಟಿ ಅಡಚಣೆಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.

5 / 7
ಇನ್ನು ಶಕೀಬ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡವು, ಶಕೀಬ್ಗೆ ಉತ್ತಮ ಚಿಕಿತ್ಸೆ ನೀಡುವ ಬಗ್ಗೆ ಭರವಸೆ ನೀಡಿದೆ. ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಶಕೀಬ್ ಸಿಂಗಾಪುರಕ್ಕೆ ತೆರಳುವ ಸಾಧ್ಯತೆ ಇದ್ದು, ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ.

6 / 7
ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವುದು ತಂಡಕ್ಕೆ ಆಘಾತ ತಂದೊಡ್ಡಿದೆ. ಏಕೆಂದರೆ ಇನ್ನೇನು ಕೆಲವೇ ತಿಂಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗುತ್ತಿದ್ದು, ತಂಡದಲ್ಲಿ ಶಕೀಬ್ ಅನುಪಸ್ಥಿತಿ ಕಾಡುವುದಂತೂ ಖಚಿತ.

7 / 7

Published On - 4:02 pm, Thu, 25 January 24

Follow us