BBL 11: ಬಿಬಿಎಲ್​ನಲ್ಲಿ ಹೊಸ ಇತಿಹಾಸ ಬರೆದ ಆಸೀಸ್​ ವೇಗಿ

| Updated By: ಝಾಹಿರ್ ಯೂಸುಫ್

Updated on: Jan 05, 2022 | 5:46 PM

Big Bash League: ಈ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿಕೊಂಡ ಪೀಟರ್ ಸಿಡ್ಲ್ ಬಿಗ್ ಬ್ಯಾಷ್ ಲೀಗ್​ನಲ್ಲಿ ಹೊಸ ದಾಖಲೆ ಬರೆದರು.

1 / 5
ಬಿಗ್ ಬ್ಯಾಷ್ ಲೀಗ್‌ನ 11 ನೇ ಸೀಸನ್​ನ 35ನೇ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಹೋಬರ್ಟ್ ಹರಿಕೇನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ತಂಡವು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಅಡಿಲೇಡ್ ತಂಡದ ನಾಯಕ ಪೀಟರ್ ಸಿಡ್ಲ್​ ಅವರ ಮಾರಕ ಬೌಲಿಂಗ್​ಗೆ ತತ್ತರಿಸಿದ ಹೋಬಾರ್ಟ್​  19 ಓವರ್‌ಗಳಲ್ಲಿ ಕೇವಲ 126 ರನ್‌ಗಳಿಗೆ ಆಲೌಟ್ ಆಯಿತು.

2 / 5
3.5 ಓವರ್ ಮಾಡಿದ ಪೀಟರ್ ಸಿಡ್ಲ್​ ಕೇವಲ 23 ರನ್​ ನೀಡಿ ಐದು ವಿಕೆಟ್ ಕಬಳಿಸಿದರು. ಇನ್ನು 127 ರನ್​ಗಳ ಸಾಧಾರಣ ಗುರಿ ಪಡೆದ ಅಡಿಲೇಡ್ ಸ್ಟ್ರೈಕರ್ಸ್ ತಂಡವು  ಮ್ಯಾಥ್ಯೂ ಶಾರ್ಟ್ ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

3 / 5
 ಈ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿಕೊಂಡ ಪೀಟರ್ ಸಿಡ್ಲ್ ಬಿಗ್ ಬ್ಯಾಷ್ ಲೀಗ್​ನಲ್ಲಿ ಹೊಸ ದಾಖಲೆ ಬರೆದರು. ಕಳೆದ 11 ಸೀಸನ್​ ಬಿಬಿಎಲ್​ನಲ್ಲಿ ಯಾವುದೇ ನಾಯಕ ಐದು ವಿಕೆಟ್ ಕಬಳಿಸಿರಲಿಲ್ಲ.

4 / 5
ಇದೀಗ ಅಡಿಲೇಡ್ ತಂಡದ ನಾಯಕ ಪೀಟರ್ ಸಿಡ್ಲ್​ ಹೋಬಾರ್ಟ್​ ತಂಡದ ಐದು ವಿಕೆಟ್ ಉರುಳಿಸಿ ಬಿಬಿಎಲ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡರು. ಈ ಮೂಲಕ ಬಿಬಿಎಲ್​ನಲ್ಲಿ ಚೊಚ್ಚಲ ಬಾರಿಗೆ 5 ವಿಕೆಟ್ ಕಬಳಿಸಿ ನಾಯಕ ಎಂಬ ಹೆಗ್ಗಳಿಕೆ ಪೀಟರ್ ಸಿಡ್ಲ್​ ಪಾಲಾಯಿತು.

5 / 5
ಇನ್ನು ಬಿಗ್ ಬ್ಯಾಷ್ ಲೀಗ್‌ನಲ್ಲಿ ಪೀಟರ್ ಸಿಡ್ಲ್​ ಎರಡನೇ ಬಾರಿಗೆ ಐದು ವಿಕೆಟ್ ಕಬಳಿಸಿರುವುದು ವಿಶೇಷ. 2020 ರಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡದ ವಿರುದ್ಧವೇ 16 ರನ್‌ಗಳಿಗೆ 5 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಮತ್ತೊಮ್ಮೆ ನಾಯಕನಾಗಿ 5 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದಾರೆ.

Published On - 5:45 pm, Wed, 5 January 22