India Squad for WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಐಪಿಎಲ್​ನ ಈ 5 ಸ್ಟಾರ್ ಪ್ಲೇಯರ್ಸ್ ಆಯ್ಕೆ ಖಚಿತ

Updated on: Jun 20, 2023 | 6:58 AM

Team India: ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಲಿರುವ ಟೀಮ್ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಜೂನ್ 27ಕ್ಕೆ ಈ ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ.

1 / 7
ಭಾರತ ಕ್ರಿಕೆಟ್ ತಂಡ ಸದ್ಯ ವಿಶ್ರಾಂತಿಯಲ್ಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಸೋಲುಂಡ ಬಳಿಕ ತವರಿಗೆ ಮರಳಿರುವ ಟೀಮ್ ಇಂಡಿಯಾ ಆಟಗಾರರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ಭಾರತ ಕ್ರಿಕೆಟ್ ತಂಡ ಸದ್ಯ ವಿಶ್ರಾಂತಿಯಲ್ಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಸೋಲುಂಡ ಬಳಿಕ ತವರಿಗೆ ಮರಳಿರುವ ಟೀಮ್ ಇಂಡಿಯಾ ಆಟಗಾರರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

2 / 7

ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಲಿರುವ ಟೀಮ್ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಜೂನ್ 27ಕ್ಕೆ ಈ ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ. ಇದರಲ್ಲಿ ಟಿ20 ಸರಣಿಗೆ ಐಪಿಎಲ್ 2023 ರಲ್ಲಿ ಮಿಂಚಿದ ಆಟಗಾರರು ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

3 / 7

ಯಶಸ್ವಿ ಜೈಸ್ವಾಲ್: ಐಪಿಎಲ್ 2023 ರಲ್ಲಿ ಆರೆಂಜ್ ಕ್ಯಾಪ್ ಹತ್ತಿರವಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗುವುದು ಬಹುತೇಕ ಖಚಿತ. ಇವರು ಈ ಬಾರಿಯ ಐಪಿಎಲ್​ನಲ್ಲಿ ಆಡಿದ 14 ಪಂದ್ಯಗಳಲ್ಲಿ 625 ರನ್ ಸಿಡಿಸಿದ್ದರು. ಒಂದು ಶತಕ ಕೂಡ ಬಂದಿದೆ.

4 / 7

ರಿಂಕು ಸಿಂಗ್: ಈ ಬಾರಿಯ ಐಪಿಎಲ್​ನಲ್ಲಿ ಕ್ರಿಕೆಟ್ ಪಂಡಿತರ ಲೆಕ್ಕಚಾರವನ್ನೇ ತಲೆಕೆಳಗಾಗಿಸಿದ್ದು ರಿಂಕು ಸಿಂಗ್. 20ನೇ ಓವರ್​ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್ ತಂಡಕ್ಕೆ ಜಯ ತಂದುಕೊಟ್ಟ ರಿಂಕುಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಬೇಕು ಎಂಬ ಕೂಗು ಕೂಡ ಜೋರಾಗಿದೆ. ಹೀಗಾಗಿ ಇವರು ಫಿನಿಶರ್ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.

5 / 7

ಮೋಹಿತ್ ಶರ್ಮಾ: ಐಪಿಎಲ್ 2023 ರಲ್ಲಿ ಸದ್ದಿಲ್ಲದೆ ಭರ್ಜರಿ ಕಮ್​ಬ್ಯಾಕ್ ಮಾಡಿದ ಪ್ಲೇಯರ್ ಮೋಹಿತ್ ಶರ್ಮಾ. ಜಿಟಿ ತಂಡದ ಪರ ವಿಕೆಟ್ ಟೇಕರ್ ಬೌಲರ್ ಆಗಿ ಕಾಣಿಸಿಕೊಂಡ ಇವರು 14 ಪಂದ್ಯಗಳಿಂದ 27 ವಿಕೆಟ್ ಕಬಳಿಸಿದ್ದರು.

6 / 7

ವರುಣ್ ಚಕ್ರವರ್ತಿ: ಐಪಿಎಲ್ 2023 ರಲ್ಲಿ ಇಂಜುರಿಯಿಂದ ಭರ್ಜರಿ ಆಗಿ ಕಮ್​ಬ್ಯಾಕ್ ಮಾಡಿರುವ ವರುಣ್ ಚಕ್ರವರ್ತಿ 14 ಪಂದ್ಯಗಳಿಂದ 20 ವಿಕೆಟ್ ಕಿತ್ತಿದ್ದರು. ಈ ಮಿಸ್ಟ್ರಿ ಸ್ಪಿನ್ನರ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗಬಹುದು.

7 / 7

ತುಷಾರ್ ದೇಶಪಾಂಡೆ: ಧೋನಿ ಗರಡಿಯಲ್ಲಿ ಬೆಳೆದ ತುಷಾರ್ ದೇಶಪಾಂಡೆ ಈ ಬಾರಿಯ ಐಪಿಎಲ್​ನಲ್ಲಿ ಎಲ್ಲರ ಮೋಡಿ ಮಾಡಿದ್ದರು. 16 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದ ಇವರು ಮಧ್ಯಮ ಓವರ್​ನಲ್ಲಿ ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು.

Loading...
Unable to load recommendations.
Follow Us