BCCI Central Contract: ‘ಎ’ ಗ್ರೇಡ್​ನಲ್ಲಿ ಮೂವರಿಗೆ ಅವಕಾಶ; ಜಾರಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್

|

Updated on: Apr 27, 2023 | 4:18 PM

BCCI Central Contract: ಕಳೆದ ಬಾರಿ ಎ ಕೆಟಗರಿಯಲ್ಲಿದ್ದ ಪೂನಂ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಗಾಯಕ್ವಾಡ್ ಎ ಕೆಟಗರಿಯಿಂದ ಬಿಗೆ ಕುಸಿದಿದ್ದರೆ, ಪೂನಂ ಒಪ್ಪಂದದಿಂದಲೇ ಹೊರಬಿದ್ದಿದ್ದಾರೆ.

1 / 7
ಕಳೆದ ತಿಂಗಳಲ್ಲಿ ಪುರುಷರ ಕ್ರಿಕೆಟ್​ನ ವಾರ್ಷಿಕ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಭಾರತ  ಮಹಿಳಾ ತಂಡದ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ವಾರ್ಷಿಕ ಒಪ್ಪಂದವನ್ನು 3 ಗ್ರೇಡ್​​ಗಳಾಗಿ ವಿಭಾಗಿಸಲಾಗಿದ್ದು, ಇದರಲ್ಲಿ ಎ ಗ್ರೇಡ್​​, ಬಿ ಗ್ರೇಡ್​ ಹಾಗೂ ಸಿ ಗ್ರೇಡ್ ಎಂದು ವಿಭಾಗಿಸಲಾಗಿದೆ.

2 / 7
ವಾರ್ಷಿಕ ಒಪ್ಪಂದದ ಪ್ರಕಾರ ಎ ಗ್ರೇಡ್​​ನಲ್ಲಿರುವ ಆಟಗಾರ್ತಿಯರು ವರ್ಷಕ್ಕೆ ಅತ್ಯಧಿಕ ಅಂದರೆ ತಲಾ 50 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ಹಾಗೆಯೇ ಬಿ ಗ್ರೇಡ್​​ನಲ್ಲಿರುವ ಆಟಗಾರ್ತಿಯರು 30 ಲಕ್ಷ ಸಂಬಳ ಪಡೆದರೆ, ಸಿ ಕ್ಯಾಟಗರಿಯ ಆಟಗಾರ್ತಿಯರು ತಲಾ 10 ಲಕ್ಷ ರೂ. ವಾರ್ಷಿಕ ವೇತನ ಪಡೆಯಲ್ಲಿದ್ದಾರೆ.

3 / 7
ವಾಸ್ತವವಾಗಿ ಪ್ರತಿ ಬಾರಿಯೂ ಎ ಕೆಟಗರಿಯಲ್ಲಿ ಐವರು ಆಟಗಾರ್ತಿಯರು ಇರುತ್ತಿದ್ದರು. ಆದರೆ ಈ ಬಾರಿ ಮಂಡಳಿ ಕೇವಲ 3 ಆಟಗಾರ್ತಿಯರನ್ನು ಎ ಕೆಟಗರಿಯಲ್ಲಿ ಉಳಿಸಿಕೊಂಡಿದೆ. ಇದರಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಹಾಗೂ ದೀಪ್ತಿ ಶರ್ಮಾ ಸೇರಿದ್ದಾರೆ. ಈ ಮೂವರು ಆಟಗಾರ್ತಿಯರು ವರ್ಷಕ್ಕೆ ತಲಾ 50 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ.

4 / 7
ಬಿ ಕೆಟಗರಿಯಲ್ಲಿ ಐವರು ಆಟಗಾರ್ತಿಯರಿದ್ದು, ಇದರಲ್ಲಿ ರೇಣುಕಾ ಸಿಂಗ್ ಠಾಕೂರ್, ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಸೇರಿದ್ದಾರೆ. ಈ ಐವರು ವರ್ಷಕ್ಕೆ 30 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ.

5 / 7
ಹಾಗೆಯೇ ಸಿ ಕೆಟಗರಿಯಲ್ಲಿ 9 ಆಟಗಾರ್ತಿಯರಿದ್ದು, ಮೇಘನಾ ಸಿಂಗ್, ದೇವಿಕಾ ವೈದ್ಯ, ಸಬ್ಬಿನೇನಿ ಮೇಘನಾ, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ರಾಧಾ ಯಾದವ್, ಹರ್ಲೀನ್ ಡಿಯೋಲ್ ಮತ್ತು ಯಾಸ್ತಿಕಾ ಭಾಟಿಯಾ ಸೇರಿದ್ದಾರೆ. ಇವರು ವರ್ಷಕ್ಕೆ ತಲಾ 10 ಲಕ್ಷ ರೂ ವೇತನ ಪಡೆಯಲ್ಲಿದ್ದಾರೆ.

6 / 7
ಇನ್ನು ಈ ವಾರ್ಷಿಕ ಒಪ್ಪಂದದಲ್ಲಿ ಕೆಟಗರಿಯಿಂದ ಕೆಳಗೆ ಜಾರಿದ ಆಟಗಾರ್ತಿಯರನ್ನು ನೋಡುವುದಾದರೆ, ಕಳೆದ ಬಾರಿ ಎ ಕೆಟಗರಿಯಲ್ಲಿದ್ದ ಪೂನಂ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಗಾಯಕ್ವಾಡ್ ಎ ಕೆಟಗರಿಯಿಂದ ಬಿಗೆ ಕುಸಿದಿದ್ದರೆ, ಪೂನಂ ಒಪ್ಪಂದದಿಂದಲೇ ಹೊರಬಿದ್ದಿದ್ದಾರೆ.

7 / 7
ಬಿ ಕೆಟಗರಿಯಲ್ಲಿ ಶೆಫಾಲಿ ಮಾತ್ರ ಹಾಗೇ ಉಳಿದಿದ್ದರೆ, ಜೆಮಿಮಾ ಮತ್ತು ರಿಚಾ ಬಡ್ತಿ ಪಡೆದಿದ್ದಾರೆ. ಹಿಂದಿನ ಒಪ್ಪಂದದಲ್ಲಿ ಈ ಇಬ್ಬರು ಸಿ ಕೆಟಗರಿಯಲ್ಲಿ ಸ್ಥಾನ ಪಡೆದಿದ್ದರು. ಇನ್ನು ರೇಣುಕಾ ಸಿಂಗ್ ಮೊದಲ ಬಾರಿಗೆ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದು, ಪೂಜಾ ಬಿಯಿಂದ ಸಿಗೆ ಜಾರಿದ್ದಾರೆ.

Published On - 4:18 pm, Thu, 27 April 23