- Kannada News Photo gallery Cricket photos BCCI Central Contract Which state players get maximum places in Contract here is the details
BCCI Central Contract: ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಈ ರಾಜ್ಯದ ಆಟಗಾರರದ್ದೇ ಪಾರುಪತ್ಯ
BCCI Central Contract: ಫೆಬ್ರವರಿ 28 ರಂದು ಬಿಡುಗಡೆಯಾದ ಬಿಸಿಸಿಐ ನೂತನ ಕೇಂದ್ರ ಒಪ್ಪಂದದ ಪಟ್ಟಿಯಲ್ಲಿ 30 ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲಿ 11 ಆಟಗಾರರು ಹೊಸಬರೆ ಸೇರಿದ್ದಾರೆ. ಈ ನಡುವೆ ಈ ಪಟ್ಟಿಯಲ್ಲಿ ಯಾವ ರಾಜ್ಯದ ಆಟಗಾರರು ಹೆಚ್ಚು ಸ್ಥಾನ ಪಡೆದಿದ್ದಾರೆ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ಅದರ ವಿವರ ಇಲ್ಲಿದೆ.
Updated on:Feb 29, 2024 | 6:03 PM

ಫೆಬ್ರವರಿ 28 ರಂದು ಬಿಡುಗಡೆಯಾದ ಬಿಸಿಸಿಐ ನೂತನ ಕೇಂದ್ರ ಒಪ್ಪಂದದ ಪಟ್ಟಿಯಲ್ಲಿ 30 ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲಿ 11 ಆಟಗಾರರು ಹೊಸಬರೆ ಸೇರಿದ್ದಾರೆ. ಉಳಿದಂತೆ ನಿರೀಕ್ಷಿತ ಹೆಸರುಗಳೆ ಪಟ್ಟಿಯಲ್ಲಿವೆ. ಈ ನಡುವೆ ಈ ಪಟ್ಟಿಯಲ್ಲಿ ಯಾವ ರಾಜ್ಯದ ಆಟಗಾರರು ಹೆಚ್ಚು ಸ್ಥಾನ ಪಡೆದಿದ್ದಾರೆ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ಅದರ ವಿವರ ಇಲ್ಲಿದೆ.

ಮಹಾರಾಷ್ಟ್ರ ರಾಜ್ಯದ ಆಟಗಾರರು ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಗರಿಷ್ಠ ಸ್ಥಾನಗಳನ್ನು ಪಡೆದಿದ್ದು, ಇದರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ಜಿತೇಶ್ ಶರ್ಮಾ ಸೇರಿದ್ದಾರೆ

ಎರಡನೇ ಸ್ಥಾನದಲ್ಲಿ ಗುಜರಾತ್ ರಾಜ್ಯವಿದ್ದು, ಅಕ್ಸರ್ ಪಟೇಲ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಈ ರಾಜ್ಯದಿಂದ ಆಯ್ಕೆಯಾಗಿದ್ದಾರೆ.

ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶ ರಾಜ್ಯವಿದ್ದು, ಈ ರಾಜ್ಯದಿಂದ ರಿಂಕು ಸಿಂಗ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಶಮಿ ಆಯ್ಕೆಯಾಗಿದ್ದಾರೆ.

ಕರ್ನಾಟಕದಿಂದ ಎ ಗ್ರೇಡ್ನಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ ಹಾಗೂ ಸಿ ಗ್ರೇಡ್ನಲ್ಲಿರುವ ವೇಗಿ ಪ್ರಸಿದ್ಧ್ ಕೃಷ್ಣ ಆಯ್ಕೆಯಾಗಿದ್ದಾರೆ.

ತಮಿಳುನಾಡು ರಾಜ್ಯದಿಂದ ಎ ಗ್ರೇಡ್ನಲ್ಲಿರುವ ಆರ್. ಅಶ್ವಿನ್ ಹಾಗೂ ಸಿ ಗ್ರೇಡ್ನಲ್ಲಿರುವ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆದಿದ್ದಾರೆ.

ಮಧ್ಯಪ್ರದೇಶದಿಂದ ಇಬ್ಬರು ಆಟಗಾರರು ಆಯ್ಕೆಯಾಗಿದ್ದು, ಆವೇಶ್ ಖಾನ್ ಮತ್ತು ರಜತ್ ಪಾಟಿದಾರ್ ಸಿ ಗ್ರೇಡ್ನಲ್ಲಿ ಸ್ಥಾನ ಪಡೆದಿದ್ದಾರೆ.

ಪಂಜಾಬ್ ರಾಜ್ಯದಿಂದಲೂ ಇಬ್ಬರು ಆಟಗಾರರು ಆಯ್ಕೆಯಾಗಿದ್ದು, ಶುಭ್ಮನ್ ಗಿಲ್ ಎ ಗ್ರೇಡ್ನಲ್ಲಿ ಸ್ಥಾನ ಪಡೆದಿದ್ದರೆ, ಅರ್ಷದೀಪ್ ಸಿಂಗ್ ಸಿ ಗ್ರೇಡ್ನಲ್ಲಿದ್ದಾರೆ.

ಉಳಿದಂತೆ ರಾಜಸ್ಥಾನದಿಂದ ರವಿ ಬಿಷ್ಣೋಯ್, ಬಿಹಾರದಿಂದ ಮುಖೇಶ್ ಕುಮಾರ್, ಕೇರಳದಿಂದ ಸಂಜು ಸ್ಯಾಮ್ಸನ್, ಪಂಜಾಬ್ನಿಂದ ಅರ್ಷದೀಪ್ ಸಿಂಗ್, ಆಂಧ್ರಪ್ರದೇಶದಿಂದ ಕೆಎಸ್ ಭರತ್, ಉತ್ತರಾಖಂಡದಿಂದ ರಿಷಬ್ ಪಂತ್, ತೆಲಂಗಾಣದಿಂದ ಮೊಹಮ್ಮದ್ ಸಿರಾಜ್ ಹಾಗೂ ದೆಹಲಿಯಿಂದ ವಿರಾಟ್ ಕೊಹ್ಲಿ ಸೇರಿದಂತೆ ತಲಾ ಒಬ್ಬೊಬ್ಬರು ಆಟಗಾರರು ಆಯ್ಕೆಯಾಗಿದ್ದಾರೆ.
Published On - 6:02 pm, Thu, 29 February 24




