- Kannada News Photo gallery Cricket photos BCCI provides big updates on Bumrah Rahul Iyer and Pant ahead of Asia Cup 2023
ಹೊರಬಿತ್ತು ಐವರು ಆಟಗಾರರ ಹೆಲ್ತ್ ರಿಪೋರ್ಟ್; ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾಕ್ಕೆ ಬಂತು ಆನೆಬಲ
Team India: ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಟೀಂ ಇಂಡಿಯಾಕ್ಕೆ ಶುಭ ಸುದ್ದಿಯೊಂದು ಸಿಕ್ಕಿದ್ದು, ಗಾಯಾಳು ಆಟಗಾರರ ಫಿಟ್ನೆಸ್ ಸಂಬಂಧಿಸಿದಂತೆ ಬಿಸಿಸಿಐ ಗುಡ್ ನ್ಯೂಸ್ವೊಂದನ್ನು ನೀಡಿದೆ.
Updated on:Jul 22, 2023 | 12:54 PM

ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಟೀಂ ಇಂಡಿಯಾಕ್ಕೆ ಶುಭ ಸುದ್ದಿಯೊಂದು ಸಿಕ್ಕಿದ್ದು, ಗಾಯಾಳು ಆಟಗಾರರ ಫಿಟ್ನೆಸ್ ಸಂಬಂಧಿಸಿದಂತೆ ಬಿಸಿಸಿಐ ಗುಡ್ ನ್ಯೂಸ್ವೊಂದನ್ನು ನೀಡಿದೆ.

ಇಂಜುರಿ ಸಮಸ್ಯೆಯಿಂದಾಗಿ ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದಿಂದ ಹೊರಗಿರುವ ತಂಡದ ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ರಿಷಬ್ ಪಂತ್ ಸೇರಿದಂತೆ 5 ಆಟಗಾರರ ಫಿಟ್ನೆಸ್ ರಿಪೋರ್ಟ್ ಅನ್ನು ಬಿಸಿಸಿಐ ಹಂಚಿಕೊಂಡಿದೆ.

ಪ್ರಸ್ತುತ ಈ ಎಲ್ಲಾ ಐವರು ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್‌ನಲ್ಲಿದ್ದು, ಈ ಐದು ಆಟಗಾರರು ಪಂದ್ಯಕ್ಕೆ ಎಷ್ಟು ಫಿಟ್ ಆಗಿದ್ದಾರೆ. ಅವರು ಯಾವಾಗ ಮೈದಾನಕ್ಕೆ ಮರಳಲಿದ್ದಾರೆ ಎಂಬುದರ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ.

ಬಿಸಿಸಿಐ ನೀಡಿರುವ ಮಾಹಿತಿ ಪ್ರಕಾರ ಭಾರತದ ಇಬ್ಬರು ಸ್ಟಾರ್ ವೇಗದ ಬೌಲರ್‌ಗಳಾದ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ತಮ್ಮ ರಿಹ್ಯಾಬ್ನ ಅಂತಿಮ ಹಂತದಲ್ಲಿದ್ದು, ಎನ್ಸಿಎ ನಡೆಸಲ್ಲಿರುವ ಅಭ್ಯಾಸ ಪಂದ್ಯದಲ್ಲಿ ಈ ಇಬ್ಬರು ಕಣಕ್ಕಿಳಿಯಲ್ಲಿದ್ದಾರೆ. ಅದರಲ್ಲಿ ಈ ಇಬ್ಬರ ಫಿಟ್ನೆಸ್ ಗಮನಿಸಿದ ಬಳಿಕ ವೈದ್ಯಕೀಯ ತಂಡ ಇವರ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲ್ಲಿದೆ.

ಹಾಗೆಯೇ ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಬಗ್ಗೆಯೂ ಮಾಹಿತಿ ನೀಡಿದ್ದು, ಈ ಇಬ್ಬರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಪ್ರಸ್ತುತ ಸ್ಟ್ರೆಂಥ್ ಮತ್ತು ಫಿಟ್‌ನೆಸ್ ವ್ಯಾಯಾಮ ಮಾಡುತ್ತಿರುವ ಈ ಇಬ್ಬರು ಬ್ಯಾಟರ್ಗಳ ಪ್ರಗತಿ ಬಿಸಿಸಿಐ ವೈದ್ಯಕೀಯ ತಂಡಕ್ಕೆ ಸಂತಸ ತಂದಿದೆ.

ಅದೇ ಸಮಯದಲ್ಲಿ, ಕಳೆದ ವರ್ಷಾಂತ್ಯದಲ್ಲಿ ರಸ್ತೆ ಅಪಘಾತದಿಂದಾಗಿ ಕ್ರಿಕೆಟ್‌ನಿಂದ ದೂರವಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೂಡ ಚೇತರಿಕೆಯ ಹಾದಿಯಲ್ಲಿದ್ದಾರೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಪಂತ್, ನೆಟ್ಸ್‌ನಲ್ಲಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಅಭ್ಯಾಸವನ್ನೂ ಆರಂಭಿಸಿದ್ದಾರೆ.
Published On - 12:54 pm, Sat, 22 July 23




