AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI: ಟೀಮ್ ಇಂಡಿಯಾ ನಾಯಕತ್ವದಲ್ಲಿ ಮತ್ತೊಂದು ಸಂಚಲನ: ಬಿಸಿಸಿಐಯಿಂದ ಮಹತ್ವದ ನಿರ್ಧಾರ

Rohit Sharma Captaincy: ಬಿಸಿಸಿಐ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ. ಇದರ ಬೆನ್ನಲ್ಲೇ ಟಿ20, ಏಕದಿನ ಮತ್ತು ಟೆಸ್ಟ್ ಹೀಗೆ ಮೂರು ಮಾದರಿಯ ಕ್ರಿಕೆಟ್​ಗೆ ಮೂವರು ನಾಯಕರನ್ನು ನೇಮಿಸಲು ಬಿಸಿಸಿಐ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.

TV9 Web
| Updated By: Vinay Bhat|

Updated on: Nov 19, 2022 | 11:45 AM

Share
ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಭಾರತೀಯ ಕ್ರಿಕೆಟ್​ನಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಚುಟುಕು ವಿಶ್ವಕಪ್​ಗಾಗಿ ಕಳೆದ ಒಂದು ವರ್ಷದಿಂದ ಮಾಡಿದ ಅನೇಕ ಪ್ರಯೋಜನ ಸೆಮೀಸ್ ವರೆಗೆ ತಲುಪಲು ಮಾತ್ರ ಸೀಮಿತವಾಯಿತು. ಇದರಿಂದ ಕೋಪಗೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಠಿಣ ಕ್ರಮ ಕೈಗೊಳ್ಳುತ್ತಿದೆ.

1 / 8
ಬಿಸಿಸಿಐ ಈಗಾಗಲೇ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ.  ಪ್ರತಿ ಬಾರಿ ತಂಡ ಸೋತಾಗಲೂ ಆಯ್ಕೆ ಪ್ರಕ್ರಿಯೆಗಳ ಕುರಿತು ಟೀಕೆಗಳು ಕೇಳಿಬಂದಿದ್ದವು. ಹೀಗಾಗಿ ಚೇತನ್ ಸೇರಿದಂತೆ ನಾಲ್ವರು ಇದ್ದ ಸಮಿತಿಯನ್ನು ಕಿತ್ತೆಸೆದಿದೆ.

2 / 8
ಇದರ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಬಿಸಿಸಿಐ ಮುಂದಾಗಿದೆ. ಟಿ20, ಏಕದಿನ ಮತ್ತು ಟೆಸ್ಟ್ ಹೀಗೆ ಮೂರು ಮಾದರಿಯ ಕ್ರಿಕೆಟ್​ಗೆ ಮೂವರು ನಾಯಕರನ್ನು ನೇಮಿಸಲು ಬಿಸಿಸಿಐ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.

3 / 8
ಸದ್ಯದಲ್ಲೇ ಬಿಸಿಸಿಐ ಹೊಸ ಆಯ್ಕೆ ಸಮಿತಿಯನ್ನು ರಚಿಸಿ ನೂತನ ನಾಯಕತ್ವದ ಜವಾಬ್ದಾರಿ ಯಾರಿಗೆ ವಹಿಸಬೇಕೆಂದು ಚರ್ಚೆ ನಡೆಸಲಿದೆ. ಪ್ರಸ್ತುತ, ರೋಹಿತ್ ಶರ್ಮಾ ಎಲ್ಲಾ ಫಾರ್ಮಾಟ್‌ ಗಳಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

4 / 8
ಸೀನಿಯರ್ ಪುರುಷರ ತಂಡದ ಆಯ್ಕೆ ಸಮಿತಿಯ ಸದಸ್ಯರ ನೇಮಕಕ್ಕಾಗಿ ಶುಕ್ರವಾರ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 28 ಕೊನೆಯ ದಿನವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ನೂತನ ನಾಯಕನ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ.

5 / 8
ಹಾರ್ದಿಕ್ ಪಾಂಡ್ಯ ಸದ್ಯ ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್ ಪ್ರವಾಸಕ್ಕೆ ಭಾರತ ತಂಡದ ನಾಯಕರಾಗಿದ್ದಾರೆ. ಮುಂದಿನ ಟಿ20 ತಂಡದ ನಾಯಕತ್ವ ಪಾಂಡ್ಯ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಿ ಚಾಂಪಿಯನ್ ಮಾಡಿದ ಅನುಭವ ಹಾರ್ದಿಕ್​ಗಿದೆ.

6 / 8
ಪಾಂಡ್ಯ ಜೊತೆಗೆ ಕೆಎಲ್ ರಾಹುಲ್ ಹೆಸರು ಕೂಡ ಕೇಳಿಬರುತ್ತಿದೆ. ರಾಹುಲ್ ಸದ್ಯ ಭಾರತ ವೈಟ್-ಬಾಲ್ ಕ್ರಿಕೆಟ್​ನ ಉಪ ನಾಯಕರಾಗಿದ್ದಾರೆ. ಈ ಜವಾಬ್ದಾರಿ ಹೊತ್ತು ಸುಮಾರು ಒಂದು ವರ್ಷ ಅಗಿದೆ. ಹೀಗಾಗಿ ರೋಹಿತ್ ಜಾಗಕ್ಕೆ ನಾಯಕನಾಗಲು ರಾಹುಲ್ ಕೂಡ ಸಾಲಿನಲ್ಲಿದ್ದಾರೆ.

7 / 8
ಟೀಮ್ ಇಂಡಿಯಾ ಮಾಜಿ ಕೊಚ್ ರವಿ ಶಾಸ್ತ್ರಿ ಕೂಡ ಹಾರ್ದಿಕ್ ಅವರನ್ನು ಭಾರತ ಟಿ20 ಮಾದರಿಯ ಕ್ರಿಕೆಟ್​ಗೆ ನಾಯಕನನ್ನಾಗಿ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಅವರನ್ನು ಭಾರತದ ಮುಂದಿನ ನಾಯಕ ಎಂದು ಆಯ್ಕೆ ಮಾಡಿಟ್ಟುಕೊಂಡರೆ ತಪ್ಪೇನಿಲ್ಲ ಎಂಬುದು ಶಾಸ್ತ್ರಿ ಮಾತು.

8 / 8