Bhuvneshwar Kumar IPL Auction 2025: 14 ವರ್ಷಗಳ ಬಳಿಕ ಮತ್ತೆ ಆರ್ಸಿಬಿ ಸೇರಿಕೊಂಡ ಭುವನೇಶ್ವರ್
Bhuvneshwar Kumar Auction Price: ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಈ ಮೂಲಕ ಅವರು 14 ವರ್ಷಗಳ ಬಳಿಕ ಮತ್ತೊಮ್ಮೆ ಆರ್ಸಿಬಿ ತಂಡವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಭುವಿಯನ್ನು ಆರ್ಸಿಬಿ 10.75 ಕೋಟಿ ರೂ. ನೀಡಿ ಖರೀದಿಸಿತು.
1 / 5
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನ ಎರಡನೇ ದಿನವಾದು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡ ತನ್ನ ಎರಡನೇ ಖರೀದಿಯಾಗಿ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ರೂ.ಗೆ ಖರೀದಿ ಮಾಡಿದೆ.
2 / 5
ವಾಸ್ತವವಾಗಿ 2009 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿಯೇ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ್ದ ಭುವನೇಶ್ವರ್ ಕುಮಾರ್, ಎರಡನೇ ಸೀಸನ್ ತಂಡದಲ್ಲಿದ್ದರೂ ಅವರಿಗೆ ಹೆಚ್ಚಾಗಿ ಆಡುವ ಅವಕಾಶ ಸಿಗಲಿಲ್ಲ. ಆ ನಂತರ ಅವರು ಪುಣೆ ವಾರಿಯರ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
3 / 5
ಆ ತಂಡದಲ್ಲಿ ಮೂರು ಸೀಸನ್ ಆಡಿದ ಬಳಿಕ 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಸೇರ್ಪಡೆಗೊಂಡ ಭುವನೇಶ್ವರ್ ಅವರ ಅದೃಷ್ಟ ಬದಲಾಯಿತು. ಎಸ್ಆರ್ಹೆಚ್ ಪರ ಸತತ ನಾಲ್ಕು ಸೀಸನ್ಗಳಲ್ಲಿ ಸತತವಾಗಿ 18 ವಿಕೆಟ್‌ಗಳನ್ನು ಪಡೆದು ಭುವಿ ಅಬ್ಬರಿಸಿದ್ದರು.
4 / 5
ಇದರ ಫಲವಾಗಿ 2016 ಮತ್ತು 2017 ರ ಸೀಸನ್ನ ಸತತ ಎರಡು ಆವೃತ್ತಿಗಳಲ್ಲಿ ಭುವಿ ಪರ್ಪಲ್ ಕ್ಯಾಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದರ ಜೊತೆಗೆ 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತನ್ನ ಮೊದಲ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಭುವಿ ಪ್ರಮುಖ ಪಾತ್ರ ವಹಿಸಿದ್ದರು.
5 / 5
ಐಪಿಎಲ್‌ನಲ್ಲಿ ಸಕ್ರಿಯರಾಗಿರುವ ಭುವಿಗೆ 2022 ರ ಟಿ20 ವಿಶ್ವಕಪ್ ಬಳಿಕ ಮತ್ತೆ ಟೀಂ ಇಂಡಿಯಾ ಕದ ತೆರೆದಿಲ್ಲ. ಆದಾಗ್ಯೂ ಭುವಿ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅಧಿಕ ವಿಕೆಟ್ ಪಡೆದ 3 ನೇ ಬೌಲರ್ ಎನಿಸಿಕೊಂಡಿದ್ದಾರೆ. ಇದುವರೆಗೆ ಭಾರತದ ಪರ 87 ಟಿ20 ಪಂದ್ಯಗಳನ್ನಾಡಿರುವ ಭುವಿ 90 ವಿಕೆಟ್ಗಳನ್ನು ಪಡೆದಿದ್ದಾರೆ.