Tim David IPL Auction 2025: ಕಡಿಮೆ ಮೊತ್ತಕ್ಕೆ ಆರ್​ಸಿಬಿ ಸೇರಿದ ಟಿಮ್ ಡೇವಿಡ್

Tim David Auction Price: ಪ್ರಾಸಂಗಿಕವಾಗಿ, ಡೇವಿಡ್ ಅವರು ಮುಂಬೈ ಇಂಡಿಯನ್ಸ್‌ಗೆ ಸೇರುವ ಮೊದಲು 2021 ರಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಳ್ಳುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ್ದರು. ಪ್ರಸ್ತುತ ವಿಶ್ವದ ಹಲವು ಟಿ20 ಲೀಗ್​ಗಳಲ್ಲಿ ಆಡುತ್ತಿರುವ ಅವರು ಇದುವರೆಗೆ ಆಡಿರುವ 254 ಪಂದ್ಯಗಳಿಂದ 159.79 ರ ಸ್ಪಾರ್ಕ್ಲಿಂಗ್ ಸ್ಟ್ರೈಕ್ ರೇಟ್‌ನಲ್ಲಿ 4872 ರನ್ ಗಳಿಸಿದ್ದಾರೆ.

ಪೃಥ್ವಿಶಂಕರ
|

Updated on: Nov 25, 2024 | 7:12 PM

2 ಕೋಟಿಯ ಮೂಲ ಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಟಿಮ್ ಡೇವಿಡ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 3 ಕೋಟಿ ರೂ.ಗೆ ಖರೀದಿ ಮಾಡಿದೆ.

1 / 5
ಈ ಹರಾಜಿನಲ್ಲಿ ಟಿಮ್ ಡೇವಿಡ್ ಅವರನ್ನು ಖರೀದಿಸಲು ಸನ್‌ರೈಸರ್ಸ್ ಹೈದರಾಬಾದ್ ಆರಂಭದಲ್ಲಿ ಉತ್ಸಾಹ ತೊರಿತು. ಆದರೆ ಈ ವೇಳೆ ಡೇವಿಡ್​ ಖರೀದಿಗೆ ಮುಂದಾದ ಆರ್​ಸಿಬಿ, ಡೇವಿಡ್‌ ಅವರನ್ನು 3 ಕೋಟಿ ರೂ.ಗೆ ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು. ಈ ವರ್ಷದ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಡೇವಿಡ್ ಅವರನ್ನು ಬಿಡುಗಡೆಗೊಳಿಸಿತ್ತು.

2 / 5
ಪ್ರಾಸಂಗಿಕವಾಗಿ, ಡೇವಿಡ್ ಅವರು ಮುಂಬೈ ಇಂಡಿಯನ್ಸ್‌ಗೆ ಸೇರುವ ಮೊದಲು 2021 ರಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಳ್ಳುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ್ದರು. ಪ್ರಸ್ತುತ ವಿಶ್ವದ ಹಲವು ಟಿ20 ಲೀಗ್​ಗಳಲ್ಲಿ ಆಡುತ್ತಿರುವ ಅವರು ಇದುವರೆಗೆ ಆಡಿರುವ 254 ಪಂದ್ಯಗಳಿಂದ 159.79 ರ ಸ್ಪಾರ್ಕ್ಲಿಂಗ್ ಸ್ಟ್ರೈಕ್ ರೇಟ್‌ನಲ್ಲಿ 4872 ರನ್ ಗಳಿಸಿದ್ದಾರೆ.

3 / 5
ಐಪಿಎಲ್‌ನ ಕೊನೆಯ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಟಿಮ್ ಡೇವಿಡ್​ಗೆ ಅಂಬಾನಿ ತಂಡ 8.25 ಕೋಟಿ ವೇತನ ನೀಡುತ್ತಿತ್ತು. 2023 ರಲ್ಲಿ 16 ಪಂದ್ಯಗಳನ್ನು ಆಡಿದ್ದ ಡೇವಿಡ್ ಸುಮಾರು 160 ರ ಸ್ಟ್ರೈಕ್ ರೇಟ್‌ನಲ್ಲಿ 231 ರನ್ ಗಳಿಸಿದ್ದರು.

4 / 5
ಇನ್ನು ಐಪಿಎಲ್‌ನ ಕೊನೆಯ ಆವೃತ್ತಿಯಲ್ಲಿ, ಅವರು 13 ಪಂದ್ಯಗಳನ್ನು ಆಡಿ 155 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 241 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಇದುವರೆಗೆ 38 ಪಂದ್ಯಗಳನ್ನು ಆಡಿದ್ದು, 659 ರನ್ ಗಳಿಸಿದ್ದಾರೆ.

5 / 5
Follow us