- Kannada News Photo gallery Cricket photos IPL Auction 2025 top 5 Most Expensive players in day 2 Auction
IPL Auction 2025: ಎರಡನೇ ದಿನ ಅತ್ಯಧಿಕ ಬೆಲೆಗೆ ಮಾರಾಟವಾದ ಟಾಪ್ 5 ಆಟಗಾರರಿವರು
IPL Auction 2025: ಐಪಿಎಲ್ ಮೆಗಾ ಹರಾಜಿಗೆ ಅದ್ದೂರಿ ತೆರೆ ಬಿದ್ದಿದೆ. ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವುಲ್ಲಿ ಯಶಸ್ವಿಯಾಗಿದೆ. ಹರಾಜಿನ ಮೊದಲ ದಿನ ಕೆಲವು ಆಟಗಾರರಿಗೆ 20 ಕೋಟಿ ಗೂ ಅಧಿಕ ಮೊತ್ತ ನೀಡಲಾಗಿತ್ತು. ಆದರೆ ಎರಡನೇ ದಿನ ಆ ಅಬ್ಬರ ಕಾಣಲಿಲ್ಲ. ಹಾಗಿದ್ದರೆ, ಎರಡನೇ ದಿನ ಅಧಿಕ ಮೊತ್ತ ಪಡೆದ ಟಾಪ್ 5 ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..
Updated on: Nov 25, 2024 | 10:29 PM

ಐಪಿಎಲ್ ಮೆಗಾ ಹರಾಜಿಗೆ ಅದ್ದೂರಿ ತೆರೆ ಬಿದ್ದಿದೆ. ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವುಲ್ಲಿ ಯಶಸ್ವಿಯಾಗಿದೆ. ಹರಾಜಿನ ಮೊದಲ ದಿನ ಕೆಲವು ಆಟಗಾರರಿಗೆ 20 ಕೋಟಿ ಗೂ ಅಧಿಕ ಮೊತ್ತ ನೀಡಲಾಗಿತ್ತು. ಆದರೆ ಎರಡನೇ ದಿನ ಆ ಅಬ್ಬರ ಕಾಣಲಿಲ್ಲ. ಹಾಗಿದ್ದರೆ, ಎರಡನೇ ದಿನ ಅಧಿಕ ಮೊತ್ತ ಪಡೆದ ಟಾಪ್ 5 ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..

ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಎರಡನೇ ದಿನ ಅಧಿಕ ಮೊತ್ತ ಪಡೆದ ಆಟಗಾರನಾಗಿದ್ದಾರೆ. ಈ ಅನುಭವಿ ವೇಗಿಗೆ ಆರ್ಸಿಬಿ ಫ್ರಾಂಚೈಸಿ 10.75 ಕೋಟಿ ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿತು.

ಕಳೆದ ಬಾರಿ ಚೆನ್ನೈ ಸೂಪರ್ಕಿಂಗ್ಸ್ ತಂಡದ ಪರ ಆಡಿದ್ದ ಆಲ್‌ರೌಂಡರ್ ದೀಪಕ್ ಚಹಾರ್, ಮುಂದಿನ ಆವೃತ್ತಿಯಿಂದ ಮುಂಬೈ ಇಂಡಿಯನ್ಸ್ ತಂಡದ ಪರ ಆಡಲಿದ್ದು, ಅವರಿಗೆ 9.25 ಕೋಟಿ ರೂ. ನೀಡಿ ಖರೀದಿಸುವಲ್ಲಿ ಮುಂಬೈ ಯಶಸ್ವಿಯಾಯಿತು.

ಎರಡನೇ ದಿನ ಅಧಿಕ ಮೊತ್ತಕ್ಕೆ ಸೇಲ್ ಆದ ಮೂರನೇ ಆಟಗಾರನಾಗಿ ಪೈಕಿ ಟೀಂ ಇಂಡಿಯಾದ ಮತ್ತೊಬ್ಬ ಯುವ ಬೌಲರ್ ಆಕಾಶ್ ದೀಪ್ ಸೇರಿದ್ದಾರೆ. ಕಳೆದ ಬಾರಿ ಆರ್ಸಿಬಿ ಪರ ಆಡಿದ್ದ ಆಕಾಶ್ರನ್ನು ಲಕ್ನೋ ಸೂಪರ್ಜೈಂಟ್ಸ್ 8 ಕೋಟಿ ರೂ. ನೀಡಿ ಖರೀದಿಸಿತು.

ಟೀಂ ಇಂಡಿಯಾದ ಮತ್ತೊಬ್ಬ ವೇಗದ ಬೌಲರ್ ಮುಖೇಶ್ ಕುಮಾರ್ ಅವರನ್ನು 8 ಕೋಟಿ ರೂ,ಗೆ ಆರ್ಟಿಎಮ್ ಕಾರ್ಡ್ ಬಳಸಿ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಮುಂಬೈ ಯಶಸ್ವಿಯಾಯಿತು.

ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್‌ರೌಂಡರ್ ಮಾರ್ಕೋ ಯಾನ್ಸನ್ ಅವರನ್ನು 7 ಕೋಟಿ ರೂ. ನೀಡಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ತೆಕ್ಕೆಗೆ ಹಾಕಿಕೊಂಡಿತು.
