IND vs AUS: ಪರ್ತ್ ಟೆಸ್ಟ್ ಮುಗಿಯುವ ಮುನ್ನವೇ ತಂಡ ಸೇರಿಕೊಳ್ಳಲಿದ್ದಾರೆ ರೋಹಿತ್
Rohit Sharma: ಎರಡನೇ ಮಗುವಿನ ಜನನದ ಕಾರಣದಿಂದ ಪರ್ತ್‌ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ನವೆಂಬರ್ 24 ರಂದು ಆಸ್ಟ್ರೇಲಿಯಾ ತಲುಪುವ ನಿರೀಕ್ಷೆಯಿದೆ. ಇದರೊಂದಿಗೆ ಅವರು ಅಡಿಲೇಡ್‌ನಲ್ಲಿ ನಡೆಯುವ ಎರಡನೇ ಪಂದ್ಯಕ್ಕೆ ಸಿದ್ಧರಾಗಲಿದ್ದಾರೆ.
1 / 6
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ನಾಳೆಯಿಂದ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಡುತ್ತಿಲ್ಲ. ಎರಡನೇ ಮಗುವಿನ ಜನನದ ಕಾರಣದಿಂದ ಅವರು ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಹೋಗಲಿಲ್ಲ. ಇದೀಗ ಕುಟುಂಬದೊಂದಿಗೆ ಕಾಲ ಕಳೆದಿರುವ ರೋಹಿತ್ ಆಸ್ಟ್ರೇಲಿಯಾಕ್ಕೆ ಹಾರಲು ಸಜ್ಜಾಗಿದ್ದಾರೆ.
2 / 6
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ರೋಹಿತ್ ನವೆಂಬರ್ 24 ರಂದು ಆಸ್ಟ್ರೇಲಿಯಾಕ್ಕೆ ತಲುಪುವ ಸಾಧ್ಯತೆಗಳಿವೆ. ಅಂದರೆ ಪರ್ತ್‌ನಲ್ಲಿ ನಡೆಯಲ್ಲಿರುವ ಮೊದಲ ಟೆಸ್ಟ್‌ನ ಮೂರನೇ ದಿನದಂದು ರೋಹಿತ್ ಭಾರತ ತಂಡವನ್ನು ಸೇರಿಕೊಳ್ಳಬಹುದು. ಈ ಮೊದಲು, ಸರಣಿಯ ಆರಂಭಿಕ ಪಂದ್ಯಕ್ಕೂ ಮುಂಚೆಯೇ ರೋಹಿತ್ ತಂಡವನ್ನು ಸೇರಿಕೊಳ್ಳಬಹುದು ಎಂದು ವರದಿಯಾಗಿತ್ತು.
3 / 6
ಆದರೆ ಎರಡನೇ ಮಗುವಿನ ಜನನದ ನಂತರ ಮಡದಿ ಹಾಗೂ ಕುಟುಂಬದೊಂದಿಗೆ ಇನ್ನಷ್ಟು ಸಮಯ ಇರಬೇಕೆಂದು ರೋಹಿತ್ ಬಯಸಿದ್ದರು. ಹೀಗಾಗಿ ರೋಹಿತ್ ಅವರನ್ನು ಮೊದಲ ಟೆಸ್ಟ್ನಿಂದ ಹೊರಗಿಡಲಾಗಿತ್ತು. ಇದೀಗ ರೋಹಿತ್ ನವೆಂಬರ್ 22 ರ ಬೆಳಿಗ್ಗೆ ಆಸ್ಟ್ರೇಲಿಯಾವನ್ನು ತಲುಪುವ ಸಾಧ್ಯತೆಗಳಿದ್ದು, ಎರಡನೇ ಟೆಸ್ಟ್ನಲ್ಲಿ ಆಡುವುದನ್ನು ಕಾಣಬಹುದಾಗಿದೆ.
4 / 6
ಕ್ರಿಕ್‌ಬಜ್ ವರದಿಯ ಪ್ರಕಾರ, ರೋಹಿತ್ ಅವರು ಭಾನುವಾರ ತಂಡವನ್ನು ಸೇರಿಕೊಳ್ಳುವುದಾಗಿ ಬಿಸಿಸಿಐಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದರರ್ಥ, ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ನಡೆಯಲಿರುವ ಈ ಸರಣಿಯ ಎರಡನೇ ಪಂದ್ಯಕ್ಕೆ ರೋಹಿತ್ ಲಭ್ಯವಿರುತ್ತಾರೆ. ಪರ್ತ್ ಟೆಸ್ಟ್ ನಂತರ ಕ್ಯಾನ್‌ಬೆರಾದಲ್ಲಿ ಪ್ರೈಮ್ ಮಿನಿಸ್ಟರ್ 11ರ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಬೇಕಾಗಿದೆ. ಹೀಗಾಗಿ ರೋಹಿತ್ ಕೂಡ ಈ ಪಂದ್ಯದಲ್ಲಿ ಆಡುವುದನ್ನು ಕಾಣಬಹುದು.
5 / 6
ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೆ ಅವರು ನವೆಂಬರ್ 15 ರಂದು ತಡರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಮೊದಲ ಟೆಸ್ಟ್ಗೂ ಮುನ್ನ ರೋಹಿತ್ ತಂಡವನ್ನು ಸೇರಿಕೊಳ್ಳಬಹುದು ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಮಾಹಿತಿ ನೀಡಿದ್ದ ಕೋಚ್ ಗಂಭೀರ್, ರೋಹಿತ್ ಮೊದಲ ಟೆಸ್ಟ್‌ಗೆ ಅಲಭ್ಯರಾಗಲಿದ್ದು, ಅವರ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದಿದ್ದರು.
6 / 6
ಪರ್ತ್ ಟೆಸ್ಟ್‌ಗೆ ಟೀಂ ಇಂಡಿಯಾ: ಜಸ್ಪ್ರೀತ್ ಬುಮ್ರಾ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಸಿಡೇಜಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.