IND vs AUS: ಆಸೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಎಡವಿದ್ದೇಲ್ಲಿ? ಸರಣಿ ಸೋಲಿಗೆ ಕಾರಣಗಳೇನು?

|

Updated on: Jan 05, 2025 | 5:37 PM

Team India's Australia Tour Debacle: ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ 1-3 ಅಂತರದಿಂದ ಸೋಲುಂಡಿದ್ದು, ಅದಕ್ಕೆ ಹಲವು ಕಾರಣಗಳಿವೆ. ಸಮತೋಲಿತ ತಂಡದ ಕೊರತೆ, ಅನುಭವಿ ಆಟಗಾರರ ನಿರಾಶಾದಾಯಕ ಪ್ರದರ್ಶನ, ಕಳಪೆ ನಾಯಕತ್ವ, ಜಸ್ಪ್ರೀತ್ ಬುಮ್ರಾ ಅವರ ಏಕಾಂಗಿ ಹೋರಾಟ, ಮತ್ತು ತಂಡದ ಸಂಯೋಜನೆಯಲ್ಲಿನ ಲೋಪಗಳು ಸೋಲಿಗೆ ಪ್ರಮುಖ ಕಾರಣಗಳಾಗಿವೆ.

1 / 6
ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಟೀಂ ಇಂಡಿಯಾ 1-3 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿದೆ. ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದ ತಂಡಕ್ಕೆ ಆ ಬಳಿಕ ಗೆಲುವು ಎಂಬುದು ಮರಿಚಿಕೆಯಾಯಿತು. ತಂಡದ ಈ ಹೀನಾಯ ಪ್ರದರ್ಶನಕ್ಕೆ ಹಲವು ಕಾರಣಗಳಿವೆ. ಅದರಲ್ಲೂ ಪ್ರಮುಖವಾಗಿ ಈ ಐದು ತಪ್ಪುಗಳು ತಂಡದ ಸರಣಿ ಸೋಲಿಗೆ ಕಾರಣವಾದವು.

2 / 6
ಸಮತೋಲಿತ ತಂಡ ಕಟ್ಟಲಿಲ್ಲ: ಸರಣಿ ಸೋಲಿಗೆ ಪ್ರಮುಖ ಕಾರಣ ಟೀಂ ಇಂಡಿಯಾ ಸಮತೋಲಿತವಾಗಿರಲಿಲ್ಲ. ಅದರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ಟೆಸ್ಟ್ ಸ್ಪೆಷಲಿಸ್ಟ್​ಗಳ ಕೊರತೆ ಎದ್ದು ಕಾಣುತ್ತಿತ್ತು. ತಂಡದಲ್ಲಿ ಆಡಿದವರಲ್ಲಿ ಯಾರೊಬ್ಬರು ಕ್ರೀಸ್​ನಲ್ಲಿ ಹೆಚ್ಚು ನಿಂತು ಬೌಲರ್​ಗಳನ್ನು ಸುಸ್ತು ಮಾಡುವ ಕೆಲಸವನ್ನು ಮಾಡಲಿಲ್ಲ. ಇದು ಎದುರಾಳಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಯಿತು.

3 / 6
ಅನುಭವಿಗಳ ಫ್ಲಾಪ್ ಶೋ: ಒಂದೆಡೆ ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್​ಗಳ ಕೊರತೆ ಇದ್ದರೆ, ಇನ್ನೊಂದೆಡೆ ಅನುಭವಿಗಳು ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್​ರಂತಹ ಬ್ಯಾಟ್ಸ್‌ಮನ್​ಗಳು ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಲಿಲ್ಲ. ಇತ್ತ ಕಳೆದ ಪ್ರವಾಸದಲ್ಲಿ ಮಿಂಚಿದ್ದ ರಿಷಬ್​ ಪಂತ್​ಗೂ ವಿಶೇಷವಾಗಿ ಏನನ್ನು ಮಾಡಲು ಸಾಧ್ಯವಾಗಲಿಲ್ಲ.

4 / 6
ಕಳಪೆ ನಾಯಕತ್ವ: ಬುಮ್ರಾ ನಾಯಕತ್ವದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಟೀಂ ಇಂಡಿಯಾದ ಬೃಹತ್ ಗೆಲುವು ದಾಖಲಿಸಿತ್ತು. ಆದರೆ ರೋಹಿತ್ ಶರ್ಮಾ ನಾಯಕತ್ವವಹಿಸಿಕೊಂಡ ನಂತರ ತಂಡ ಸೋಲಿಗೆ ಸುಳಿಗೆ ಸಿಲುಕಿಕೊಂಡಿತು. ಯಾವ ಸಂದರ್ಭದಲ್ಲಿ ಯಾವ ವೇಗಿಯನ್ನು ಕಣಕ್ಕಿಳಿಸಬೇಕು. ಫೀಲ್ಡ್ ಪ್ಲೇಸ್​ಮೆಂಟ್ ಹೇಗಿರಬೇಕು ಎಂಬುದನ್ನು ನಿರ್ಧರಿಸುವಲ್ಲಿ ರೋಹಿತ್ ವಿಫಲರಾದರು. ಹಾಗೆಯೇ ಆಟಗಾರನಾಗಿಯೂ ರೋಹಿತ್ ರನ್ ಬರ ಎದುರಿಸಬೇಕಾಯಿತು.

5 / 6
ಏಕಾಂಗಿಯಾದ ಬುಮ್ರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡಿದ ಏಕೈಕ ಆಟಗಾರನೆಂದರೆ ಅದು ಜಸ್ಪ್ರೀತ್ ಬುಮ್ರಾ ಮಾತ್ರ. ಅವರನ್ನು ಹೊರತುಪಡಿಸಿ ಯಾರೊಬ್ಬರು ಆಸೀಸ್ ಆಟಗಾರರಿಗೆ ತೊಂದರೆ ನೀಡುವ ಕೆಲಸವನ್ನು ಮಾಡಲಿಲ್ಲ. ಅನುಭವಿಗಳಾದ ಜಡೇಜಾ ಹಾಗೂ ಅಶ್ವಿನ್​ಗೂ ಈ ಪ್ರವಾಸದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಇತ್ತ ಉಳಿದ ವೇಗಿಗಳು ಕೂಡ ಬುಮ್ರಾಗೆ ಸಾಥ್ ನೀಡಲಿಲ್ಲ.

6 / 6
ತಂಡದ ಸಂಯೋಜನೆಯಲ್ಲಿ ಲೋಪ:  ಬಾರ್ಡರ್-ಗಾವಸ್ಕರ್ ಸರಣಿಯ ಪ್ರತಿ ಪಂದ್ಯದಲ್ಲೂ ಭಾರತ ತಂಡ ಬಹುತೇಕ ವಿಭಿನ್ನ ಸಂಯೋಜನೆಯೊಂದಿಗೆ ಮೈದಾನಕ್ಕಿಳಿಯಿತು. ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿತ್ತು. ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸ್ಥಾನವನ್ನು ಪದೇ ಪದೇ ಬದಲಿಸಲಾಯಿತು. ಹಾಗೆಯೇ ನಾಲ್ಕನೇ ಟೆಸ್ಟ್‌ನಲ್ಲಿ ಶುಭ್​ಮನ್ ಗಿಲ್ ಅವರನ್ನು ತಂಡದಿಂದ ಕೈಬಿಡಲಾಯಿತು. ಸಿಡ್ನಿ ಟೆಸ್ಟ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದ ಪ್ರಸಿದ್ಧ ಕೃಷ್ಣ ಅವರನ್ನು ಆರಂಭಿಕ ಪಂದ್ಯಗಳಲ್ಲಿ ಆಡಿಸದೆ ಮ್ಯಾನೇಜ್‌ಮೆಂಟ್ ದೊಡ್ಡ ತಪ್ಪು ಮಾಡಿತು.