BPL 2023: 8 ಸಿಕ್ಸ್, 9 ಫೋರ್: ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ ಮಾಜಿ ಕ್ರಿಕೆಟಿಗನ ಪುತ್ರ

| Updated By: ಝಾಹಿರ್ ಯೂಸುಫ್

Updated on: Jan 09, 2023 | 9:25 PM

BPL 2023: ಈ ಪಂದ್ಯದಲ್ಲಿ ಟಾಸ್ ಗೆದ್ದ ಚಟ್ಟೋಗ್ರಾಮ್ ಚಾಲೆಂಜರ್ಸ್ ತಂಡವು ಎದುರಾಳಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಖುಲ್ನಾ ಟೈಗರ್ಸ್​ ಉತ್ತಮ ಆರಂಭ ಪಡೆದಿರಲಿಲ್ಲ.

1 / 5
ಬಾಂಗ್ಲಾದೇಶ್​ನಲ್ಲಿ ನಡೆಯುತ್ತಿರುವ ಬಿಪಿಎಲ್ (ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್) ಟೂರ್ನಿಯಲ್ಲಿ ಆಜಂ ಖಾನ್ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಶೇರ್​ ಇ ಬಾಂಗ್ಲಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಚಟ್ಟೋಗ್ರಾಮ್ ಚಾಲೆಂಜರ್ಸ್ ಹಾಗೂ ಖುಲ್ನಾ ಟೈಗರ್ಸ್ ತಂಡಗಳು ಮುಖಾಮುಖಿಯಾಗಿತ್ತು.

2 / 5
ಟಾಸ್ ಗೆದ್ದ ಚಟ್ಟೋಗ್ರಾಮ್ ಚಾಲೆಂಜರ್ಸ್ ತಂಡವು ಎದುರಾಳಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಖುಲ್ನಾ ಟೈಗರ್ಸ್​ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 12 ರನ್​ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ವೇಳೆ ಕಣಕ್ಕಿಳಿದ ಆಜಂ ಖಾನ್ ಸ್ಪೋಟಕ ಇನಿಂಗ್ಸ್ ಆಡಿದರು.

3 / 5
ಚಟ್ಟೋಗ್ರಾಮ್ ಚಾಲೆಂಜರ್ಸ್ ಬೌಲರ್​ಗಳ ವಿರುದ್ಧ ಅಬ್ಬರಿಸಿದ್ದ ಆಜಂ ಖಾನ್ 8 ಭರ್ಜರಿ ಸಿಕ್ಸರ್ ಸಿಡಿಸಿದರು. ಅಲ್ಲದೆ 9 ಫೋರ್​ಗಳೊಂದಿಗೆ 57 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 58 ಎಸೆತಗಳಲ್ಲಿ ಅಜೇಯ 109 ರನ್​ ಚಚ್ಚಿದರು. ಆಜಂ ಖಾನ್​ ಅವರ ಈ ಶತಕದ ನೆರವಿನಿಂದ ಖುಲ್ನಾ ಟೈಗರ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 178 ರನ್​ ಕಲೆಹಾಕಿತು.

4 / 5
ವಿಶೇಷ ಎಂದರೆ ಇದು ಟಿ20 ಕ್ರಿಕೆಟ್​ನಲ್ಲಿ ಆಜಂ ಖಾನ್ ಅವರ ಮೊದಲ ಶತಕವಾಗಿದೆ. ಈ ಹಿಂದೆ ಪಾಕಿಸ್ತಾನ್ ಪರ 3 ಟಿ20 ಪಂದ್ಯವಾಡಿದ್ದರೂ ಎರಡಂಕಿ ಮೊತ್ತಗಳಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಹಲವು ಲೀಗ್ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಕಾಣಿಸಿಕೊಂಡಿದ್ದ ಆಜಂ 10 ಅರ್ಧಶತಕಗಳನ್ನು ಮಾತ್ರ ಬಾರಿಸಿದ್ದರು. ಇದೀಗ ಬಿಪಿಎಲ್ ಮೂಲಕ ಚೊಚ್ಚಲ ಟಿ20 ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

5 / 5
ಅಂದಹಾಗೆ ಆಜಂ ಖಾನ್ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಮೊಯೀನ್ ಖಾನ್ ಅವರ ಪುತ್ರ. ತಂದೆಯ ಹಾದಿಯಲ್ಲೇ ಹೊಸ ಹೆಜ್ಜೆಯನ್ನಿಟ್ಟಿರುವ 24 ವರ್ಷದ ಆಜಂ ಕೂಡ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಗುರುತಿಸಿಕೊಂಡಿದ್ದಾರೆ.