IPL 2023: ಕೊಹ್ಲಿ, ಬಟ್ಲರ್ ಅಲ್ಲ; ತನ್ನ ಐಪಿಎಲ್ ದಾಖಲೆ ಮುರಿಯುವ ಆಟಗಾರನನ್ನು ಹೆಸರಿಸಿದ ಕ್ರಿಸ್ ಗೇಲ್

Updated on: Mar 20, 2023 | 6:00 PM

IPL 2023: ಇದೀಗ ತಮ್ಮ ಹೆಸರಿನಲ್ಲಿರುವ ಅತೀ ದೊಡ್ಡ ದಾಖಲೆಯನ್ನು ಮುರಿಯುವ ಆಟಗಾರನ ಬಗ್ಗೆ ಗೇಲ್ ಮಾತನಾಡಿದ್ದು, ಅಚ್ಚರಿಯ ಹೆಸರನ್ನು ತೆಗೆದುಕೊಂಡಿದ್ದಾರೆ.

1 / 5
ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ತನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಟಿ20 ಕ್ರಿಕೆಟ್​ನಲ್ಲಿ ಯಾರೂ ಮುರಿಯಲಾಗದ ದಾಖಲೆಗಳನ್ನು ನಿರ್ಮಿಸಿರುವ ಗೇಲ್, ಐಪಿಎಲ್​ನಲ್ಲೂ ಅಂತಹ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ತನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಟಿ20 ಕ್ರಿಕೆಟ್​ನಲ್ಲಿ ಯಾರೂ ಮುರಿಯಲಾಗದ ದಾಖಲೆಗಳನ್ನು ನಿರ್ಮಿಸಿರುವ ಗೇಲ್, ಐಪಿಎಲ್​ನಲ್ಲೂ ಅಂತಹ ಹಲವು ದಾಖಲೆಗಳನ್ನು ಮಾಡಿದ್ದಾರೆ.

2 / 5

ಇದೀಗ ತಮ್ಮ ಹೆಸರಿನಲ್ಲಿರುವ ಅತೀ ದೊಡ್ಡ ದಾಖಲೆಯನ್ನು ಮುರಿಯುವ ಆಟಗಾರನ ಬಗ್ಗೆ ಗೇಲ್ ಮಾತನಾಡಿದ್ದು, ಅಚ್ಚರಿಯ ಹೆಸರನ್ನು ತೆಗೆದುಕೊಂಡಿದ್ದಾರೆ. ವಾಸ್ತವವಾಗಿ ಗೇಲ್ ಐಪಿಎಲ್​ನಲ್ಲಿ 175 ರನ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದು ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

3 / 5

ಈಗ ಆ ದಾಖಲೆಯನ್ನು ಯಾವ ಆಟಗಾರ ಮುರಿಯಬಹುದು ಎಂಬುದಕ್ಕೆ ಉತ್ತರಿಸಿರುವ ಗೇಲ್, ಅಚ್ಚರಿಯೆಂಬಂತೆ ಕನ್ನಡಿಗ ಕೆಎಲ್ ರಾಹುಲ್ ಹೆಸರನ್ನು ತೆಗೆದುಕೊಂಡಿದ್ದಾರೆ.

4 / 5

ಇದಕ್ಕೆ ಸೂಕ್ತ ಸಮಜಾಯಿಷಿಯನ್ನು ನೀಡಿರುವ ಗೇಲ್, ನಾನು ತೀರ ಹತ್ತಿರದಿಂದ ರಾಹುಲ್ ಆಟವನ್ನು ನೋಡಿದ್ದೇನೆ. ಅವರು ಮನಸ್ಸು ಮಾಡಿದ್ದರೆ ಖಂಡಿತ ನನ್ನ ದಾಖಲೆಯನ್ನು ಮುರಿಯುತ್ತಾರೆ. ಸಾಮಾನ್ಯವಾಗಿ 15ರಿಂದ 20ನೇ ಓವರ್​ ನಡುವೆ ಬ್ಯಾಟಿಂಗ್​ಗೆ ಬಂದಾಗ ಅಥವಾ ಡೆತ್ ಓವರ್​ಗಳಲ್ಲಿ ಬ್ಯಾಟಿಂಗ್​ಗೆ ಬಂದಾಗ ರಾಹುಲ್ ತುಂಬಾ ಅಪಾಯಕಾರಿ. ಅವರು ಉತ್ತಮ ಆರಂಭವನ್ನು ಪಡೆದರೆ, ಖಂಡಿತವಾಗಿಯೂ ನನ್ನ 175 ರನ್​ಗಳ ದಾಖಲೆಯನ್ನು ಮುರಿಯಲಿದ್ದಾರೆ ಎಂದಿದ್ದಾರೆ.

5 / 5

ಸದ್ಯ ರಾಹುಲ್ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದು ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತನ್ನ ಹಳೆಯ ಲಯಕ್ಕೆ ಬಂದಿರುವ ರಾಹುಲ್ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 75 ರನ್ ಬಾರಿಸಿದ್ದರು.

Published On - 5:57 pm, Mon, 20 March 23

Loading...
Unable to load recommendations.
Follow Us