County Championship: 501 ರನ್‌ಗಳ ಗುರಿ ಬೆನ್ನಟ್ಟಿ ಇತಿಹಾಸ ಸೃಷ್ಟಿಸಿದ ಸರ್ರೆ..! ಅರ್ಷದೀಪ್ ತಂಡಕ್ಕೆ ಸೋಲು
County Championship: ಕೆಂಟ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ಸರ್ರೆ ತಂಡ ಕೌಂಟಿ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ತಂಡವೊಂದು 500ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎರಡನೇ ತಂಡವಾಗಿ ಹೊರಹೊಮ್ಮಿದೆ.
1 / 6
ಸದ್ಯ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಜೂನ್ 14 ರಂದು (ಬುಧವಾರ) ನಡೆದ ಕೆಂಟ್ ಹಾಗೂ ಸರ್ರೆ ತಂಡಗಳ ನಡುವಿನ ಪಂದ್ಯದಲ್ಲಿ ಕೆಂಟ್ ತಂಡ ನೀಡಿದ 501 ರನ್‌ಗಳ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟುವುದರೊಂದಿಗೆ ಸರ್ರೆ ತಂಡ ಇತಿಹಾಸ ಸೃಷ್ಟಿಸಿದೆ.
2 / 6
ಕೆಂಟ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ಸರ್ರೆ ತಂಡ ಕೌಂಟಿ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ತಂಡವೊಂದು 500ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎರಡನೇ ತಂಡವಾಗಿ ಹೊರಹೊಮ್ಮಿದೆ. ಒಟ್ಟಾರೆಯಾಗಿ, ಇದು ಪ್ರಥಮ ದರ್ಜೆ ಕ್ರಿಕೆಟ್‌ನ ಇತಿಹಾಸದಲ್ಲಿ ಜಂಟಿ 8ನೇ ಬಾರಿಗೆ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯಾಗಿದೆ.
3 / 6
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಂಟ್ ಮೊದಲ ಇನ್ನಿಂಗ್ಸ್‌ನಲ್ಲಿ 301 ರನ್ ಪೇರಸಿತು. ಇದಕ್ಕುತ್ತರವಾಗಿ ಸರ್ರೆ ತನ್ನ ಮೊದಲ ಇನ್ನಿಂಗ್ಸ್ ಅನ್ನು ಕೇವಲ 145 ರನ್‌ಗಳಿಗೆ ಅಂತ್ಯಗೊಳಿಸಿತು. ಕೆಂಟ್ ಎರಡನೇ ಇನ್ನಿಂಗ್ಸ್‌ನಲ್ಲಿ 344 ರನ್ ಗಳಿಸುವ ಮೂಲಕ 500 ರನ್‌ಗಳ ಮುನ್ನಡೆ ಸಾಧಿಸಿತು.
4 / 6
ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಷ್ಟು ದೊಡ್ಡ ಗುರಿ ಸಾಧಿಸುವುದು ಕಷ್ಟ, ಆದರೆ ಸರ್ರೆ ಬ್ಯಾಟ್ಸ್‌ಮನ್‌ಗಳು ಕೊನೆಯ ಇನ್ನಿಂಗ್ಸ್‌ನಲ್ಲಿ ಗೆಲುವಿನ ಇನ್ನಿಂಗ್ಸ್ ಆಡಿದರು. ತಂಡದ ಪರ ಡೊಮ್ ಸಿಬ್ಲಿ ಔಟಾಗದೆ 140, ಜೇಮಿ ಸ್ಮಿತ್ 114 ಮತ್ತು ಫಾಕ್ಸ್ 124 ರನ್ ಸಿಡಿಸಿದರು. ಒಟ್ಟಾರೆ ಸರ್ರೆ ತಂಡದ 3 ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗುರಿ ತಲುಪಿಸಿದರು.
5 / 6
ಫೆಬ್ರವರಿ 2010 ರಲ್ಲಿ ದಕ್ಷಿಣ ವಲಯದ ವಿರುದ್ಧ ಪಶ್ಚಿಮ ವಲಯ ತಂಡ 541 ರನ್ ಚೇಸ್ ಮಾಡಿದ್ದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ಚೇಸ್ ಆಗಿತ್ತು. ಇದರಲ್ಲಿ ಯೂಸುಫ್ ಪಠಾಣ್ 190 ಎಸೆತಗಳಲ್ಲಿ 19 ಬೌಂಡರಿ ಹಾಗೂ 10 ಸಿಕ್ಸರ್ಗಳೊಂದಿಗೆ 210 ರನ್ ಸಿಡಿಸಿ ಹೀರೋ ಆಗಿದ್ದರು.
6 / 6
ಈ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಒಟ್ಟು 4 ವಿಕೆಟ್ ಪಡೆದರು.ಕೆಂಟ್ ಪರ ಕಣಕ್ಕಿಳಿದಿದ್ದ ಅರ್ಷದೀಪ್ ಕೊನೆಯ ಇನ್ನಿಂಗ್ಸ್‌ನಲ್ಲಿ ಸ್ಮಿತ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದಾದ ನಂತರ ವಿಲ್ ಜಾಕ್ವೆಸ್ ಅವರನ್ನು ಬೇಟೆಯಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಷದೀಪ್, ಫಾಕ್ಸ್ ಅವರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ಕೌಂಟಿ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆದಿದ್ದರು.