CPL 2025: ಕೆರಿಬಿಯನ್ ಪ್ರೀಮಿಯರ್ ಲೀಗ್ನ 6 ತಂಡಗಳು ಪ್ರಕಟ
Caribbean Premier League 2025: ಕೆರಿಬಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಯು ಆಗಸ್ಟ್ 14 ರಿಂದ ಶುರುವಾಗಲಿದ್ದು, ಸೆಪ್ಟೆಂಬರ್ 21 ರಂದು ಫೈನಲ್ ಪಂದ್ಯ ಜರುಗಲಿದೆ. ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದ್ದು, ಈ ತಂಡಗಳಲ್ಲಿರುವ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ...
CPL 2025: ಕೆರಿಬಿಯನ್ ಪ್ರೀಮಿಯರ್ ಲೀಗ್ ಸೀಸನ್-14ರ ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಈ ಬಾರಿ ಕಣಕ್ಕಿಳಿಯಲಿರುವ 6 ತಂಡಗಳ ಘೋಷಣೆಯಾಗಿದೆ. ಸ್ಟಾರ್ ಪ್ಲೇಯರ್ಸ್ಗಳನ್ನು ಒಳಗೊಂಡಿರುವ ಈ ತಂಡಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ್, ನ್ಯೂಝಿಲೆಂಡ್ ಸೇರಿದಂತೆ ವಿಶ್ವದ ಪ್ರಮುಖ ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ. ಹಾಗಿದ್ರೆ ಯಾವ ತಂಡದಲ್ಲಿ ಯಾರೆಲ್ಲಾ ಇದ್ದಾರೆಂದು ನೋಡೋಣ...
1 / 7
ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ: ಕೀರನ್ ಪೊಲಾರ್ಡ್, ಆಂಡ್ರೆ ರಸೆಲ್, ಸುನಿಲ್ ನರೈನ್, ನಿಕೋಲಸ್ ಪೂರನ್, ಅಲೆಕ್ಸ್ ಹೇಲ್ಸ್, ಅಕೇಲ್ ಹೊಸೇನ್, ಮೊಹಮ್ಮದ್ ಅಮೀರ್, ಕಾಲಿನ್ ಮನ್ರೋ, ಉಸ್ಮಾನ್ ತಾರಿಕ್, ಅಲಿ ಖಾನ್, ಡ್ಯಾರೆನ್ ಬ್ರಾವೋ, ಯಾನಿಕ್ ಕರಿಯಾ, ಕೀಸಿ ಕಾರ್ಟಿ, ಟೆರೆನ್ಸ್ ಹಿಂಡ್ಸ್, ಮೆಕೆನ್ನಿ ಕ್ಲಾರ್ಕ್, ಜೋಶುವಾ ಡಾ ಸಿಲ್ವಾ, ನಾಥನ್ ಎಡ್ವರ್ಡ್