ಹರಾಜಿನಲ್ಲೂ ಫಿಕ್ಸಿಂಗ್… CSK ಫ್ರಾಂಚೈಸಿಯ ಬಂಡವಾಳ ಬಿಚ್ಚಿಟ್ಟ ಲಲಿತ್ ಮೋದಿ

|

Updated on: Nov 28, 2024 | 12:20 PM

IPL 2009 ರಲ್ಲಿ ಇಂಗ್ಲೆಂಡ್ ಆಟಗಾರ ಆ್ಯಂಡ್ರ್ಯೂ ಫ್ಲಿಂಟಾಫ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಆದರೆ ಇದಕ್ಕೂ ಮುನ್ನ ನಡೆದ ಹರಾಜಿನ ವೇಳೆ ಇಂಗ್ಲೆಂಡ್ ಆಟಗಾರನನ್ನು ಖರೀದಿಸದಂತೆ ಉಳಿದ ಫ್ರಾಂಚೈಸಿಗಳು ಸಿಎಸ್​​ಕೆ ಒತ್ತಡ ಹೇರಿದ ಆರೋಪ ಕೇಳಿ ಬಂದಿದೆ. ಈ ಮೂಲಕ ಸಿಎಸ್​​ಕೆ 7.5 ಕೋಟಿ ರೂ.ಗೆ ಫ್ಲಿಂಟಾಫ್ ಅವರನ್ನು ಖರೀದಿಸಿತು ಎಂದು ಲಲಿತ್ ಮೋದಿ ಹೇಳಿದ್ದಾರೆ.

1 / 6
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್​​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಆರೋಪಗಳ ಸುರಿಮಳೆಗೈದಿದ್ದಾರೆ. ಈ ಆರೋಪಗಳ ನಡುವೆ ಸಿಎಸ್​​ಕೆ ಫ್ರಾಂಚೈಸಿ ಅಂಪೈರ್​​​ಗಳನ್ನು ಫಿಕ್ಸಿಂಗ್ ಮಾಡುತ್ತಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅದರ ಜೊತೆ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಡುತ್ತಿದ್ದ ಮಾಸ್ಟರ್ ಪ್ಲ್ಯಾನ್​​ಗಳನ್ನು ಸಹ ಬಿಚ್ಚಿಟ್ಟಿದ್ದಾರೆ.

2 / 6
ರಾಜ್ ಶಾಮಣಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಲಲಿತ್ ಮೋದಿ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು​ ಹರಾಜಿಗೂ ಮುನ್ನ ಕೆಲ ಆಟಗಾರರನ್ನು ಟಾರ್ಗೆಟ್ ಮಾಡುತ್ತಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 2009 ರ ಐಪಿಎಲ್ ಹರಾಜಿಗೂ ಮುನ್ನ ಇಂಗ್ಲೆಂಡ್ ಆಲ್​​ರೌಂಡರ್ ಆ್ಯಂಡ್ರೊ ಫ್ಲಿಂಟಾಫ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಬಾರದು ಸಿಎಸ್​​ಕೆ ಮಾಲೀಕರಾದ ಎನ್ ಶ್ರೀನಿವಾಸನ್ ತಿಳಿಸಿದ್ದರು.

3 / 6
ಇದನ್ನು ನಾನು ಎಲ್ಲಾ ಫ್ರಾಂಚೈಸಿಗಳ ಬಳಿ ಹೇಳಿದ್ದೆ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ಖರೀದಿಸಿದ್ದರು. ಅಂದರೆ ಇಲ್ಲಿ ಮೊದಲೇ ಬಿಡ್ ಮಾಡಬಾರದೆಂದು ಸೂಚಿಸಲಾಗುತ್ತಿತ್ತು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

4 / 6
ಒಂದು ವೇಳೆ ನಾವು ಅಂದಿನ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಎನ್ ಶ್ರೀನಿವಾಸನ್ ವಿರುದ್ಧ ತಿರುಗಿನಿಂತಿದ್ದರೆ ಅವರು ಐಪಿಎಲ್ ಆಯೋಜನೆಗೊಳ್ಳಲು ಬಿಡುತ್ತಿರಲಿಲ್ಲ. ಹೀಗಾಗಿ ಸಿಎಸ್​​ಕೆ ಫ್ರಾಂಚೈಸಿಯ ಡಿಮ್ಯಾಂಡ್​​ಗೆ ತಕ್ಕಂತೆ ಆಟಗಾರರ ಬಿಡ್ಡಿಂಗ್ ನಡೆದಿದೆ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

5 / 6
ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯು ತನ್ನ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್​​ಗಳನ್ನು ನೇಮಿಸಿಕೊಳ್ಳುತ್ತಿದ್ದರು. ಈ ಮೂಲಕ ಅಂಪೈರ್​​ಗಳನ್ನು ಫಿಕ್ಸ್ ಮಾಡಿಕೊಳ್ಳುತ್ತಿದ್ದರು. ಇದನ್ನು ಅಂಪೈರ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ. ಇದನ್ನು ಪ್ರಶ್ನಿಸಿದ ನನ್ನ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರು ತಿರುಗಿಬಿದ್ದಿದ್ದರು ಎಂದು ಲಲಿತ್ ಮೋದಿ ಹೇಳಿದ್ದಾರೆ.

6 / 6
ಒಟ್ಟಿನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿ 2 ವರ್ಷಗಳ ಕಾಲ ಐಪಿಎಲ್​​ನಿಂದ ಬ್ಯಾನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇದೀಗ ಅಂಪೈರ್ ಫಿಕ್ಸಿಂಗ್ ಹಾಗೂ ಹರಾಜು ಫಿಕ್ಸಿಂಗ್ ಆರೋಪಗಳು ಕೇಳಿ ಬಂದಿದ್ದು, ಈ ಆರೋಪಗಳ ಮೂಲಕ ಐಪಿಎಲ್​​ನ ಮಾಜಿ ಅಧ್ಯಕ್ಷರು ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಹೊಸ ಚರ್ಚೆಗಳನ್ನು ಹುಟ್ಟುಹಾಕಿದ್ದಾರೆ.

Published On - 12:20 pm, Thu, 28 November 24