David Warner: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್

| Updated By: ಝಾಹಿರ್ ಯೂಸುಫ್

Updated on: Oct 25, 2023 | 10:07 PM

David Warner Records: ನೆದರ್​ಲೆಂಡ್ಸ್ ಬೌಲರ್​ಗಳನ್ನು ಮನಸೊ ಇಚ್ಛೆ ದಂಡಿಸಿದ ಎಡಗೈ ದಾಂಡಿಗ ಕೇವಲ 91 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಡೇವಿಡ್ ವಾರ್ನರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.

1 / 8
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

2 / 8
ನೆದರ್​ಲೆಂಡ್ಸ್ ಬೌಲರ್​ಗಳನ್ನು ಮನಸೊ ಇಚ್ಛೆ ದಂಡಿಸಿದ ಎಡಗೈ ದಾಂಡಿಗ ಕೇವಲ 91 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಡೇವಿಡ್ ವಾರ್ನರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.

3 / 8
ಈ ಪಂದ್ಯದಲ್ಲಿ 93 ಎಸೆತಗಳಲ್ಲಿ 104 ರನ್ ಬಾರಿಸುವ ಮೂಲಕ ಡೇವಿಡ್ ವಾರ್ನರ್ ಏಕದಿನ ವಿಶ್ವಕಪ್​ನಲ್ಲಿ 6ನೇ ಶತಕ ಸಿಡಿಸಿದರು. ಈ ಮೂಲಕ ಒಡಿಐ ವರ್ಲ್ಡಕಪ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಸ್ಟ್ರೇಲಿಯಾ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು.

4 / 8
ಹಾಗೆಯೇ ಏಕದಿನ ವಿಶ್ವಕಪ್​ನಲ್ಲಿ 6 ಶತಕಗಳನ್ನು ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಡೇವಿಡ್ ವಾರ್ನರ್ ಸರಿಗಟ್ಟಿದ್ದರು. ಏಕದಿನ ವಿಶ್ವಕಪ್​ನಲ್ಲಿ ಒಟ್ಟು 44 ಇನಿಂಗ್ಸ್ ಆಡಿದ್ದ ಸಚಿನ್ 6 ಶತಕ ಬಾರಿಸಿ ದಾಖಲೆ ಬರೆದಿದ್ದರು.

5 / 8
ಇದೀಗ 23 ವರ್ಲ್ಡಕಪ್ ಇನಿಂಗ್ಸ್​ಗಳ ಮೂಲಕ ಡೇವಿಡ್ ವಾರ್ನರ್ 6ನೇ ಶತಕ ಸಿಡಿಸಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ವಿಶ್ವಕಪ್ ಶತಕದ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.

6 / 8
ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ. ಹಿಟ್​ಮ್ಯಾನ್ 22 ಇನಿಂಗ್ಸ್​ಗಳ ಮೂಲಕ ಒಟ್ಟು 7 ಏಕದಿನ ವಿಶ್ವಕಪ್ ಶತಕಗಳನ್ನು ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿಟ್ಟಿದ್ದಾರೆ.

7 / 8
ಇದೀಗ 6 ಶತಕಗಳನ್ನು ಬಾರಿಸಿರುವ ಡೇವಿಡ್ ವಾರ್ನರ್ ಮುಂಬರುವ ಪಂದ್ಯಗಳ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಸರಿಗಟ್ಟಲಿದ್ದಾರಾ ಕಾದು ನೋಡಬೇಕಿದೆ.

8 / 8
ಏಕದಿನ ವಿಶ್ವಕಪ್​ನಲ್ಲಿ ಅತ್ಯಧಿಕ ಶತಕ ಬಾರಿಸಿದವರ ಪಟ್ಟಿ ಹೀಗಿದೆ: ರೋಹಿತ್ ಶರ್ಮಾ (7), ಡೇವಿಡ್ ವಾರ್ನರ್ (6), ಸಚಿನ್ ತೆಂಡೂಲ್ಕರ್ (6), ಕುಮಾರ ಸಂಗಾಕ್ಕರ (5), ರಿಕಿ ಪಾಂಟಿಂಗ್ (5).