Dawid Malan: ಸೆಮಿ ಫೈನಲ್​ಗೂ ಮುನ್ನ ಇಂಗ್ಲೆಂಡ್​ಗೆ ಬಿಗ್ ಶಾಕ್: ಭಾರತಕ್ಕೆ ಫುಲ್ ಖುಷ್

Edited By:

Updated on: Nov 08, 2022 | 11:41 AM

India vs England T20 World Cup: ಭಾರತ-ಇಂಗ್ಲೆಂಡ್ ಮಹತ್ವದ ಪಂದ್ಯಕ್ಕೂ ಮುನ್ನ ಆಂಗ್ಲರಿಗೆ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬ್ಯಾಟರ್‌ ಡೇವಿಡ್‌ ಮಲಾನ್‌ ಅವರು ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಭಾರತದ ವಿರುದ್ಧ ಸೆಮಿಫೈನಲ್‌ನಲ್ಲಿ ಆಡುವುದು ಅನುಮಾನ ಎಂದು ಹೇಳಲಾಗಿದೆ.

1 / 7
ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ ಈಗ ಸೆಮಿ ಫೈನಲ್ ಫೀವರ್ ಶುರುವಾಗಿದೆ. ನವೆಂಬರ್ 9 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯಲಿರುವ ಮೊದಲ ಸೆಮಿ ಫೈನಲ್​ನಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಸೆಣೆಸಾಟ ನಡೆಸಲಿದೆ. ದ್ವಿತೀಯ ಸೆಮೀಸ್ ಪಂದ್ಯ ನವೆಂಬರ್ 10 ರಂದು ಅಡಿಲೇಡ್​ನಲ್ಲಿ ಆಯೋಜಿಸಲಾಗಿದ್ದು ಭಾರತ ಹಾಗೂ ಇಂಗ್ಲೆಂಡ್ ಮುಖಾಮುಖಿ ಆಗಲಿದೆ.

ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ ಈಗ ಸೆಮಿ ಫೈನಲ್ ಫೀವರ್ ಶುರುವಾಗಿದೆ. ನವೆಂಬರ್ 9 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯಲಿರುವ ಮೊದಲ ಸೆಮಿ ಫೈನಲ್​ನಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಸೆಣೆಸಾಟ ನಡೆಸಲಿದೆ. ದ್ವಿತೀಯ ಸೆಮೀಸ್ ಪಂದ್ಯ ನವೆಂಬರ್ 10 ರಂದು ಅಡಿಲೇಡ್​ನಲ್ಲಿ ಆಯೋಜಿಸಲಾಗಿದ್ದು ಭಾರತ ಹಾಗೂ ಇಂಗ್ಲೆಂಡ್ ಮುಖಾಮುಖಿ ಆಗಲಿದೆ.

2 / 7

ಆದರೆ, ಈ ಮಹತ್ವದ ಪಂದ್ಯಕ್ಕೂ ಮುನ್ನ ಆಂಗ್ಲರಿಗೆ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬ್ಯಾಟರ್‌ ಡೇವಿಡ್‌ ಮಲಾನ್‌ ಅವರು ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಭಾರತದ ವಿರುದ್ಧ ಸೆಮಿಫೈನಲ್‌ನಲ್ಲಿ ಆಡುವುದು ಅನುಮಾನ ಎಂದು ಹೇಳಲಾಗಿದೆ.

3 / 7

ಕಳೆದ ಶ್ರೀಲಂಕಾ ಎದುರು ನಡೆದ ಸೂಪರ್‌ 12 ಹಂತದ ತಮ್ಮ ಕೊನೆಯ ಲೀಗ್‌ ಪಂದ್ಯದಲ್ಲಿ ಡೇವಿಡ್‌ ಮಲಾನ್‌ ಇಂಜುರಿಗೆ ತುತ್ತಾಗಿದ್ದರು. ಫೀಲ್ಡಿಂಗ್‌ ವೇಳೆ ಗಾಯಗೊಂಡು ನೋವಿನ ಪ್ರಮಾಣ ಹೆಚ್ಚಾಗಿದ್ದ ಕಾರಣ ಅವರು ಬ್ಯಾಟಿಂಗ್ ಮಾಡಲು ಕೂಡ ಬಂದಿರಲಿಲ್ಲ.

4 / 7

ಇತ್ತ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಭಾರತೀಯ ನಾಯಕ ರೋಹಿತ್ ಶರ್ಮಾ ಕೂಡ ಇಂಜುರಿಗೆ ಗುರಿಯಾಗಿದ್ದರೆ. ರೋಹಿತ್ ಅವರ ಬಲಗೈಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ.

5 / 7

ಸುಮಾರು 150 ಕಿ.ಮೀ ಗೂ ಹೆಚ್ಚಿನ ವೇಗದಲ್ಲಿ ಬಂದ ಚೆಂಡು ರೋಹಿತ್ ಮುಂಗೈಗೆ ಬಡಿಯಿತು. ತಕ್ಷಣ ರೋಹಿತ್ ವೈದ್ಯಕೀಯ ಆರೈಕೆ ಪಡೆದರು. ಆದರೆ, ಈ ಇಂಜುರಿ ಬಗ್ಗೆ ಬಿಸಿಸಿಐ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.

6 / 7

ರೋಹಿತ್ ಶರ್ಮಾ ಇಂಜುರಿ ಇದೀಗ ಭಾರತಕ್ಕೆ ದೊಡ್ಡ ಆಘಾತ ಉಂಟಾಗಿದೆ. ಸ್ವತಃ ನಾಯಕನೇ ಗಾಯಕ್ಕೆ ಗುರಿಯಾಗಿರುವುದು ಮ್ಯಾನೇಜ್ಮೆಂಟ್​ಗೆ ತಲೆನೋವಾಗಿದೆ. ನೆಟ್ಸ್‌ನಿಂದ ನಿರ್ಗಮಿಸಿದ ರೋಹಿತ್ ಕೈಗೆ ಐಸ್‌ ಬಾಕ್ಸ್‌ ಕಟ್ಟಿದ್ದು, ದೂರದಲ್ಲಿ ಕುಳಿತು ಅವರು ಅಭ್ಯಾಸವನ್ನು ವೀಕ್ಷಿಸುತ್ತಿದ್ದರು.

7 / 7

ಇನ್ನು ನವೆಂಬರ್ 10 ರಂದು ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಣ ಸೆಮಿ ಫೈನಲ್ ಪಂದ್ಯದಲ್ಲಿ ಐಸಿಸಿ ಅಂಪೈರ್​ಗಳ ಹೆಸರನ್ನು ಪ್ರಕಟ ಮಾಡಿದೆ. ಇದರಲ್ಲಿ ಆನ್-ಫೀಲ್ಡ್ ಅಂಪೈರ್​ ಆಗಿ ಕುಮಾರ್ ಧರ್ಮಸೇನ ಮತ್ತು ಪಾಲ್ ರೀಫೆಲ್ ಕ್ರಿಸ್ ಗಫಾನಿ (ಮೂರನೇ ಅಂಪೈರ್), ರಾಡ್ ಟಕರ್ (ನಾಲ್ಕನೇ ಅಂಪೈರ್), ಮತ್ತು ಡೇವಿಡ್ ಬೂನ್ (ಪಂದ್ಯ ರೆಫರಿ) ಆಗಿ ಆಯ್ಕೆ ಆಗಿದ್ದಾರೆ.

TV9 Web

TV9 Kannada

Read More
Loading...
Unable to load recommendations.
Follow Us