NZ vs WI: ಐಪಿಎಲ್​ನಲ್ಲಿ ಹರಾಜಾಗದ ಆಟಗಾರ ಒಂದೇ ಪಂದ್ಯದಲ್ಲಿ 327 ರನ್ ಚಚ್ಚಿದ

Updated on: Dec 21, 2025 | 7:30 PM

Devon Conway's Record-Breaking Test Century: ಐಪಿಎಲ್ 2026 ಹರಾಜಿನಲ್ಲಿ ಮಾರಾಟವಾಗದ ಡೆವೊನ್ ಕಾನ್ವೇ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಒಂದೇ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ದ್ವಿಶತಕ (227) ಮತ್ತು ಶತಕ (100) ಗಳಿಸಿ ಒಟ್ಟು 327 ರನ್ ಬಾರಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಆಗಿ ಇತಿಹಾಸ ನಿರ್ಮಿಸಿ, ಐಪಿಎಲ್ ಫ್ರಾಂಚೈಸಿಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

1 / 5
ಐಪಿಎಲ್ 2026 ರ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಿತು. ಈ ಹರಾಜಿನಲ್ಲಿ ಕೆಲವು ಆಟಗಾರರಿಗೆ ಬಂಗಾರದ ಬೆಲೆ ಸಿಕ್ಕರೆ, ಇನ್ನೂ ಅನೇಕರು ಮಾರಾಟವಾಗದೆ ಉಳಿದರು. ಮಾರಾಟವಾಗದೆ ಉಳಿದವರಲ್ಲಿ ನ್ಯೂಜಿಲೆಂಡ್​ನ ಡೆವೊನ್ ಕಾನ್ವೇ ಕೂಡ ಒಬ್ಬರು. ಮೂಲ ಬೆಲೆ 2 ಕೋಟಿ ರೂಗಳೊಂದಿಗೆ ಹರಾಜಿಗೆ ಬಂದಿದ್ದ ಕಾನ್ವೇ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಲಿಲ್ಲ.

2 / 5
ಆದರೆ ಹರಾಜು ಮುಗಿದ ಬಳಿಕ ಅಬ್ಬರಿಸಿರುವ ಕಾನ್ವೇ ಒಂದೇ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್​ಗಳಿಂದ ಕಾನ್ವೇ ಒಟ್ಟು 327 ರನ್ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಡೆವೊನ್ ಕಾನ್ವೇ ಅವರ ಈ ಇನ್ನಿಂಗ್ಸ್​ನಲ್ಲಿ 42 ಬೌಂಡರಿ ಮತ್ತು ಸಿಕ್ಸರ್‌ಗಳು ಸೇರಿದ್ದವು.

3 / 5
 ಮೊದಲ ಇನ್ನಿಂಗ್ಸ್‌ನಲ್ಲಿ, ಕಾನ್ವೇ 367 ಎಸೆತಗಳನ್ನು ಎದುರಿಸಿ 31 ಬೌಂಡರಿಗಳೊಂದಿಗೆ 227 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 139 ಎಸೆತಗಳನ್ನು ಎದುರಿಸಿ 3 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳ ಸಹಾಯದಿಂದ 100 ರನ್ ಗಳಿಸಿದರು. ಇದರರ್ಥ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ ಕಾನ್ವೇ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದರು.

4 / 5
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ದ್ವಿಶತಕ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ್ದ ಡೆವೊನ್ ಕಾನ್ವೇ, ಒಂದೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದ ಮೊದಲ ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 10 ನೇ ಬ್ಯಾಟ್ಸ್​ಮನ್ ಕೂಡ ಇವರು.

5 / 5
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಡೆವೊನ್ ಕಾನ್ವೇಗೆ ನಿರ್ಣಾಯಕವಾಗಿತ್ತು . ಅವರು ತಮ್ಮ ಆರನೇ ಮತ್ತು ಏಳನೇ ಟೆಸ್ಟ್ ಶತಕಗಳನ್ನು ಗಳಿಸಿದ್ದಲ್ಲದೆ, ತಮ್ಮ ಅತ್ಯಧಿಕ ಸ್ಕೋರ್ ಅನ್ನು ಸಹ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಬಾರಿಸಿದ 227 ರನ್‌ಗಳು ಕಾನ್ವೇ ಅವರ ವೃತ್ತಿಜೀವನದ ಅತ್ಯಧಿಕ ಟೆಸ್ಟ್ ಇನ್ನಿಂಗ್ಸ್‌ ಆಗಿದೆ. ಅವರ ಹಿಂದಿನ ಅತ್ಯಧಿಕ ಸ್ಕೋರ್ 200 ಆಗಿದ್ದು, ಅವರು ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿಯೇ ಈ ಸಾಧನೆ ಮಾಡಿದ್ದರು.