Updated on: Oct 04, 2022 | 10:38 PM
ಇಂದೋರ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ದಿನೇಶ್ ಕಾರ್ತಿಕ್ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದರು. ಸೌತ್ ಆಫ್ರಿಕಾ ನೀಡಿದ 228 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರೆ, ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (1) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಡಿಕೆ 4 ಸಿಕ್ಸ್ ಹಾಗೂ 4 ಫೋರ್ ಸಿಡಿಸಿದರು. ಅಲ್ಲದೆ ಕೇವಲ 20 ಎಸೆತಗಳಲ್ಲಿ 219 ರ ಸ್ಟ್ರೈಕ್ ರೇಟ್ನಲ್ಲಿ 46 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಈ ವೇಳೆ ಸ್ವಿಚ್ ಹಿಟ್ ಬಾರಿಸುವ ಯತ್ನದಲ್ಲಿ ಬೌಲ್ಡ್ ಆಗಿ ಹೊರನಡೆಯಬೇಕಾಯಿತು.
ಈ ಸ್ಪೋಟಕ ಇನಿಂಗ್ಸ್ ಮೂಲಕ ಟಿ20 ಕ್ರಿಕೆಟ್ನಲ್ಲಿ ದಿನೇಶ್ ಕಾರ್ತಿಕ್ ಹೊಸ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ. ಅಂದರೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 200 ಕ್ಕೂ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಅತೀ ಹಿರಿಯ ಆಟಗಾರ ಎಂಬ ದಾಖಲೆ ಡಿಕೆಯ ಪಾಲಾಗಿದೆ.
ಈ ಹಿಂದೆ ಈ ದಾಖಲೆ ಶ್ರೀಲಂಕಾದ ಸನತ್ ಜಯಸೂರ್ಯ ಹೆಸರಿನಲ್ಲಿತ್ತು. ಜಯಸೂರ್ಯ ತಮ್ಮ 37ನೇ ವಯಸ್ಸಿನಲ್ಲಿ 2 ಬಾರಿ 200ರ ಸ್ಟ್ರೈಕ್ ರೇಟ್ನಲ್ಲಿ 30+ ರನ್ ಬಾರಿಸಿದ್ದರು. ಇದೀಗ ದಿನೇಶ್ ಕಾರ್ತಿಕ್ ತಮ್ಮ 37ನೇ ವಯಸ್ಸಿನಲ್ಲಿ 3 ಬಾರಿ 200 ಕ್ಕಿಂತಲೂ ಹೆಚ್ಚಿನ ಸ್ಟ್ರೈಕ್ ರೇಟ್ 30+ ರನ್ ಕಲೆಹಾಕಿದ್ದಾರೆ.
ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಭರ್ಜರಿ ಸ್ಟ್ರೈಕ್ ರೇಟ್ ಮೂಲಕ ಅಬ್ಬರಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶೇಷ ವಿಶ್ವ ದಾಖಲೆಯನ್ನು ದಿನೇಶ್ ಕಾರ್ತಿಕ್ ತಮ್ಮದಾಗಿಸಿಕೊಂಡಿದ್ದಾರೆ.