AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jasprit Bumrah: 131 ಪಂದ್ಯಗಳಿಂದ ಹೊರಗುಳಿದ ಬುಮ್ರಾ: ಐಪಿಎಲ್​ಗೆ ಹಾಜರ್..!

Jasprit Bumrah: ಹೀಗೆ ಹೊರಗುಳಿದ ಪಂದ್ಯಗಳ ಸಂಖ್ಯೆಯೇ ನೂರನ್ನು ದಾಟಿರುವುದು ಅಚ್ಚರಿ. ಹಾಗಿದ್ರೆ ಬುಮ್ರಾ ತಮ್ಮ ಕೆರಿಯರ್​ನಲ್ಲಿ ತಂಡದಿಂದ ಹೊರಗುಳಿದಿರುವ ಅಂಕಿ ಅಂಶಗಳೇನು ನೋಡೋಣ...

TV9 Web
| Updated By: ಝಾಹಿರ್ ಯೂಸುಫ್|

Updated on: Oct 04, 2022 | 5:32 PM

Share
ಟೀಮ್ ಇಂಡಿಯಾದ ವೇಗದ ಬೌಲರ್​ ಜಸ್​ಪ್ರೀತ್ ಬುಮ್ರಾ ಟಿ20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಅವರಿಗೆ 6 ವಾರಗಳ ಕಾಲ ವಿಶ್ರಾಂತಿ ಸೂಚಿಸಲಾಗಿದೆ. ಅದರಂತೆ ಟಿ20 ವಿಶ್ವಕಪ್​ ಬಳಿಕ ಕೂಡ ಬುಮ್ರಾ ಕೆಲ ವಾರಗಳ ಕಾಲ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ.

1 / 9
ಅಂದಹಾಗೆ ಜಸ್​ಪ್ರೀತ್ ಬುಮ್ರಾ ಹೀಗೆ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ವಿಶ್ರಾಂತಿ ಹಾಗೂ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದರು. ಹೀಗೆ ಹೊರಗುಳಿದ ಪಂದ್ಯಗಳ ಸಂಖ್ಯೆಯೇ ನೂರನ್ನು ದಾಟಿರುವುದು ಅಚ್ಚರಿ. ಹಾಗಿದ್ರೆ ಬುಮ್ರಾ ತಮ್ಮ ಕೆರಿಯರ್​ನಲ್ಲಿ ತಂಡದಿಂದ ಹೊರಗುಳಿದಿರುವ ಅಂಕಿ ಅಂಶಗಳೇನು ನೋಡೋಣ...

2 / 9
ಕಳೆದ ಮೂರೂವರೆ ವರ್ಷಗಳಲ್ಲಿ ಜಸ್​​ಪ್ರೀತ್ ಬುಮ್ರಾ 5 ಬಾರಿ ಗಾಯಗೊಂಡಿದ್ದಾರೆ. ಈ ವೇಳೆ ಹಲವು ಬಾರಿ ಕಂಬ್ಯಾಕ್ ಮಾಡಿದರೂ ಮತ್ತೆ ಗಾಯಗೊಂಡು ಹೊರಗುಳಿದಿದ್ದರು. ಇದೀಗ ಏಷ್ಯಾಕಪ್​ನಿಂದ ಹೊರಗುಳಿದಿದ್ದ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬೆನ್ನಲ್ಲೇ ಮತ್ತೆ ಗಾಯಗೊಂಡು ಹೊರಗುಳಿಯಬೇಕಾಯಿತು. ಹೀಗೆ ಕಳೆದ ಮೂರುವರೆ ವರ್ಷಗಳಲ್ಲಿ 5 ಬಾರಿ ಗಾಯಗೊಂಡು ಹೊರಗುಳಿದರೆ, ಮತ್ತೆ ಹಲವು ಬಾರಿ ವಿಶ್ರಾಂತಿ ಪಡೆದಿದ್ದರು. ಅಂದರೆ...

3 / 9
2016 ರಲ್ಲಿ ಟೀಮ್ ಇಂಡಿಯಾ ಟಿ20 ತಂಡದ ಪರ ಪದಾರ್ಪಣೆ ಮಾಡಿದ್ದ ಜಸ್​​ಪ್ರೀತ್ ಬುಮ್ರಾ ಆ ಬಳಿಕ ಒಟ್ಟು 68 ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇಲ್ಲಿ ಅಚ್ಚರಿ ಅಂಶವೆಂದರೆ ಬುಮ್ರಾ ಟೀಮ್ ಇಂಡಿಯಾ ಪರ ಆಡಿರುವುದು ಕೇವಲ 60 ಟಿ20 ಪಂದ್ಯಗಳನ್ನು ಮಾತ್ರ. ಅಂದರೆ ಆಡಿದಕ್ಕಿಂತ ಹೊರಗುಳಿದದ್ದೇ ಹೆಚ್ಚು.

4 / 9
Jasprit Bumrah: 131 ಪಂದ್ಯಗಳಿಂದ ಹೊರಗುಳಿದ ಬುಮ್ರಾ: ಐಪಿಎಲ್​ಗೆ ಹಾಜರ್..!

5 / 9
2016 ರಲ್ಲೇ ಏಕದಿನ ಕ್ರಿಕೆಟ್​ಗೂ ಪಾದರ್ಪಣೆ ಮಾಡಿದ್ದ ಬುಮ್ರಾ 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಈ ವೇಳೆ ಹೊರಗುಳಿದಿರುವುದು ಬರೋಬ್ಬರಿ 49 ಏಕದಿನ ಪಂದ್ಯಗಳಲ್ಲಿ ಎಂಬುದು ವಿಶೇಷ.

6 / 9
2018 ರಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ಪಂದ್ಯವಾಡಿದ್ದ ಯಾರ್ಕರ್ ಕಿಂಗ್, ಇದುವರೆಗೆ 30 ಟೆಸ್ಟ್ ಪಂದ್ಯವಾಡಿದ್ದಾರೆ. ಈ ವೇಳೆ 14 ಟೆಸ್ಟ್ ಪಂದ್ಯಗಳಿಂದ ಬುಮ್ರಾ ಹೊರಗುಳಿದಿದ್ದರು.

7 / 9
ಅಂದರೆ ಜಸ್​ಪ್ರೀತ್​ ಬುಮ್ರಾ ತಮ್ಮ ಕೆರಿಯರ್​ನಲ್ಲಿ ಟೀಮ್ ಇಂಡಿಯಾದಿಂದ ಬರೋಬ್ಬರಿ 131 ಪಂದ್ಯಗಳಿಂದ ಹೊರಗುಳಿದಿದ್ದಾರೆ.

8 / 9
ಇವೆಲ್ಲಕ್ಕಿಂತ ಆಶ್ಚರ್ಯಕರ ಸಂಗತಿ ಎಂದರೆ ಜಸ್​ಪ್ರೀತ್ ಬುಮ್ರಾ ಇದೇ ಅವಧಿಯಲ್ಲಿ ಬರೋಬ್ಬರಿ 103 ಐಪಿಎಲ್​ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಹೊರಗುಳಿದಿರುವುದು ಕೇವಲ 1 ಪಂದ್ಯದಿಂದ ಎಂಬುದೇ ಅಚ್ಚರಿ.

9 / 9
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್

ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​

ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?

ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?