- Kannada News Photo gallery Cricket photos ED Raids At India Cements Office Led By csk ipl team woner N Srinivasan
ಭ್ರಷ್ಟಾಚಾರ ಆರೋಪ; ಸಿಎಸ್ಕೆ ತಂಡದ ಮಾಲೀಕರ ಕಂಪನಿ ಮೇಲೆ ಇಡಿ ದಾಳಿ..!
Former BCCI President: : ಎನ್ ಶ್ರೀನಿವಾಸನ್ ಅವರ ಚೆನ್ನೈ ಮೂಲದ ಇಂಡಿಯಾ ಸಿಮೆಂಟ್ ಕಂಪನಿಯ ಮೇಲೆ ಇಡಿ ದಾಳಿ ನಡೆಸಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಇಡಿ, ಇಂಡಿಯಾ ಸಿಮೆಂಟ್ ಕಂಪನಿ ಮೇಲೆ ದಾಳಿ ನಡೆಸಿದ್ದು, ಕಂಪನಿಯ ಎಂಡಿ ಎನ್ ಶ್ರೀನಿವಾಸನ್ಗೆ ಸಂಕಷ್ಟ ತಂದೊಡ್ಡಿದೆ.
Updated on:Feb 01, 2024 | 4:18 PM

ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಐಪಿಎಲ್ನ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾದ ಎನ್ ಶ್ರೀನಿವಾಸನ್ ಅವರ ಅವರ ಹಲವು ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದೆ.

ಎನ್ ಶ್ರೀನಿವಾಸನ್ ಅವರ ಚೆನ್ನೈ ಮೂಲದ ಇಂಡಿಯಾ ಸಿಮೆಂಟ್ ಕಂಪನಿಯ ಮೇಲೆ ಇಡಿ ದಾಳಿ ನಡೆಸಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಇಡಿ, ಇಂಡಿಯಾ ಸಿಮೆಂಟ್ ಕಂಪನಿ ಮೇಲೆ ದಾಳಿ ನಡೆಸಿದ್ದು, ಕಂಪನಿಯ ಎಂಡಿ ಎನ್ ಶ್ರೀನಿವಾಸನ್ಗೆ ಸಂಕಷ್ಟ ತಂದೊಡ್ಡಿದೆ.

ಎನ್ ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ ಕಂಪನಿಯು ದೇಶದ ಅತಿದೊಡ್ಡ ಸಿಮೆಂಟ್ ಕಂಪನಿಗಳಲ್ಲಿ ಒಂದಾಗಿದೆ. ಇಂಡಿಯಾ ಸಿಮೆಂಟ್ ಕಂಪನಿಯು ದೇಶದ ವಿವಿಧ ಸ್ಥಳಗಳಲ್ಲಿ ಬ್ರ್ಯಾಂಚ್ಗಳನ್ನು ಹೊಂದಿದೆ. ವರದಿಗಳ ಪ್ರಕಾರ ಇದೀಗ ಇಡಿ, ಇಂಡಿಯಾ ಸಿಮೆಂಟ್ ಸಂಸ್ಥೆಗೆ ಬೀಗ ಹಾಕಿಸಿ, ತನಿಖೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಇಂಡಿಯಾ ಸಿಮೆಂಟ್ನ ಎಂಡಿಯಾಗಿರುವ ಎನ್ ಶ್ರೀನಿವಾಸನ್ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರೂ ಆಗಿದ್ದಾರೆ. 2013 ರಲ್ಲಿ, ಎನ್ ಶ್ರೀನಿವಾಸನ್ ಅವರ ತಂಡ ಚೆನ್ನೈ ಸೂಪರ್ ಕಿಂಗ್ಸ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಬಾಗಿಯಾಗಿತ್ತು.

ನಂತರ ಈ ತಂಡವನ್ನು ಎರಡು ವರ್ಷಗಳ ಕಾಲ ಐಪಿಎಲ್ನಿಂದ ನಿಷೇಧಿಸಲಾಗಿತ್ತು. ಇದೇ ವೇಳೆ ಎನ್ ಶ್ರೀನಿವಾಸನ್ ಕೂಡ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತೊರೆಯಬೇಕಾಯಿತು.

2008 ರಲ್ಲಿ, ಮೊದಲ ಬಾರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಎನ್ ಶ್ರೀನಿವಾಸನ್, ಇದರ ನಂತರ 2011 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿಯೂ ಅಯ್ಕೆಯಾದರು. ಆದರೆ ಮ್ಯಾಚ್ ಫಿಕ್ಸಿಂಗ್ ಆರೋಪ ಸಾಭೀತಾದ ಬಳಿಕ ಶ್ರೀನಿವಾಸನ್ ಈ ಹುದ್ದೆಯಿಂದ ಕೆಳಗಿಳಿದರು.
Published On - 4:17 pm, Thu, 1 February 24




