ENG vs IND: ಕೆನ್ನಿಂಗ್​ಟನ್​ನಲ್ಲಿ ಮೊದಲ ಏಕದಿನಕ್ಕೆ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸ: ಫೋಟೋ ನೋಡಿ

| Updated By: Vinay Bhat

Updated on: Jul 12, 2022 | 10:14 AM

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಬಾಕಿ ಉಳಿದಿದ್ದ ಒಂದು ಟೆಸ್ಟ್ ಪಂದ್ಯದ ಜೊತೆ ಟಿ20 ಸರಣಿ ಕೂಡ ಮುಕ್ತಾಯಗೊಂಡಿದ್ದು ಇದೀಗ ಏಕದಿನ ಸರಣಿಗೆ ವೇದಿಕೆ ಸಜ್ಜಾಗಿದೆ.

1 / 6
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಬಾಕಿ ಉಳಿದಿದ್ದ ಒಂದು ಟೆಸ್ಟ್ ಪಂದ್ಯದ ಜೊತೆ ಟಿ20 ಸರಣಿ ಕೂಡ ಮುಕ್ತಾಯಗೊಂಡಿದ್ದು ಇದೀಗ ಏಕದಿನ ಸರಣಿಗೆ ವೇದಿಕೆ ಸಜ್ಜಾಗಿದೆ. ಇಂದು ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಮೊದಲ ಏಕದಿನ ಆಯೋಜಿಸಲಾಗಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಉಭಯ ತಂಡಗಳ ನಡುವಣ ಕಾದಾಟ ಸಾಕಷ್ಟು ಕುತೂಹಲ ಕೆರಳಿಸಿದೆ.

2 / 6
ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಅವರು ತೊಡೆಸಂದು ನೋವಿನಿಂದ ಬಳಲುತ್ತಿದ್ದು, ಇಂದಿನ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಆದರೆ ಕೊಹ್ಲಿ ಗಾಯದ ಬಗ್ಗೆ ಹೆಚ್ಚಿನ ವಿವರಗಳು ಖಚಿತವಾಗಿಲ್ಲ.

3 / 6
ಬಹಳ ಸಮಯದ ನಂತರ ಶಿಖರ್ ಧವನ್ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇವರು ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಕೊಹ್ಲಿ ಹೊರಗುಳಿದರೆ ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ಗೆ ಸ್ಥಾನ ಸಿಗಲಿದೆ.

4 / 6
ಸೂರ್ಯಕುಮಾರ್ ಯಾದವ್ ಕೂಡ ತಂಡದಲ್ಲಿದ್ದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ನಂತರದ ಸ್ಥಾನದಲ್ಲಿ ಆಡಲಿದ್ದಾರೆ.

5 / 6
ಟೀಮ್ ಇಂಡಿಯಾದ ಬೌಲಿಂಗ್ ಆಯ್ಕೆ ಕೊಂಚ ಕಷ್ಟವಾಗಿದೆ. ಮತ್ತೊಬ್ಬ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಆಡಿಸಬೇಕೊ ಅಥವಾ ಪ್ರಸಿದ್ಧ್ ಕೃಷ್ಣ ಆಯ್ಕೆ ಮಾಡುತ್ತಾರೊ ನೋಡಬೇಕಿದೆ. ಉಳಿದಂತೆ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಯುಜ್ವೇಂದ್ರ ಚಹಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ.

6 / 6
ಅಭ್ಯಾಸದಲ್ಲಿ ತೊಡಗಿಕೊಂಡಿರುವ ಟೀಮ್ ಇಂಡಿಯಾ ಆಟಗಾರರು.

Published On - 10:14 am, Tue, 12 July 22