ENG vs SL: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಶತಕ ಸಿಡಿಸಿದ ಲಂಕಾ ಬ್ಯಾಟರ್
Kamindu Mendis: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಯುವ ಬ್ಯಾಟ್ಸ್‌ಮನ್ ಕಮಿಂದು ಮೆಂಡಿಸ್ ಶತಕ ಸಿಡಿಸಿದ್ದಾರೆ. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಮೆಂಡಿಸ್ 167 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ತಮ್ಮ ಟೆಸ್ಟ್ ವೃತ್ತಿ ಜೀವನದ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮೆಂಡಿಸ್ಗೆ ಇದು ಮೂರನೇ ಶತಕವಾಗಿದೆ.
1 / 6
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಯುವ ಬ್ಯಾಟ್ಸ್‌ಮನ್ ಕಮಿಂದು ಮೆಂಡಿಸ್ ಶತಕ ಸಿಡಿಸಿದ್ದಾರೆ. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಮೆಂಡಿಸ್ 167 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ತಮ್ಮ ಟೆಸ್ಟ್ ವೃತ್ತಿ ಜೀವನದ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮೆಂಡಿಸ್ಗೆ ಇದು ಮೂರನೇ ಶತಕವಾಗಿದೆ.
2 / 6
ಇದರೊಂದಿಗೆ ಕಮಿಂದು ಮೆಂಡಿಸ್, ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಇಂಗ್ಲೆಂಡ್‌ನಲ್ಲಿ ಶತಕ ಸಿಡಿಸಿದ ಮೊದಲ ಶ್ರೀಲಂಕಾದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೆಂಡಿಸ್ ಕ್ರೀಸ್‌ಗೆ ಬಂದಾಗ ಶ್ರೀಲಂಕಾ ಸ್ಕೋರ್ 95 ರನ್‌ಗಳಿಗೆ 4 ವಿಕೆಟ್ ಆಗಿತ್ತು.
3 / 6
ಇಲ್ಲಿಂದ ತಂಡದ ಇನ್ನಿಂಗ್ಸ್ ನಿಭಾಯಿಸಿದ ಮೆಂಡಿಸ್ ನಾಲ್ಕನೇ ದಿನದ ಊಟದ ಹೊತ್ತಿಗೆ ಸ್ಕೋರ್ ಅನ್ನು 6 ವಿಕೆಟ್‌ಗೆ 291 ರನ್‌ಗಳಿಗೆ ಕೊಂಡೊಯ್ದರು. ಹಾಗೆಯೇ ಮೆಂಡಿಸ್ ಮತ್ತು ದಿನೇಶ್ ಚಾಂಡಿಮಾಲ್ ನಡುವಿನ ಶತಕದ ಜೊತೆಯಾಟದಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ ತಂಡದ ಮುನ್ನಡೆ 169 ರನ್‌ಗಳಿಗೆ ತಲುಪಿದೆ.
4 / 6
2022ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಮೆಂಡಿಸ್ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದರು. ಆ ನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಮೆಂಡಿಸ್ ಶತಕ ಬಾರಿಸಿದ್ದರು. ನಂತರ ಮುಂದಿನ ಟೆಸ್ಟ್‌ನಲ್ಲಿ 92 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇದೀಗ ನಾಲ್ಕನೇ ಟೆಸ್ಟ್‌ನಲ್ಲೂ ಮೆಂಡಿಸ್ ಶತಕ ಸಿಡಿಸಿದ್ದಾರೆ.
5 / 6
ಭಾರತದ ವಿರುದ್ಧದ ಏಕದಿನ ಸರಣಿಯಲ್ಲೂ ಮಿಂಚಿದ್ದ ಮೆಂಡಿಸ್ ಎರಡನೇ ಪಂದ್ಯದಲ್ಲಿ 40 ರನ್ ಮತ್ತು ಮೂರನೇ ಪಂದ್ಯದಲ್ಲಿ ಔಟಾಗದೆ 23 ರನ್ ಗಳಿಸಿದ್ದರು. ಅವರ ಕೆಳ ಕ್ರಮಾಂಕದ ಇನ್ನಿಂಗ್ಸ್ ಶ್ರೀಲಂಕಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
6 / 6
ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಇದೇ ತಿಂಗಳು ನಡೆದ ಏಕದಿನ ಸರಣಿಯಲ್ಲಿ ಭಾರತವನ್ನು ಸೋಲಿಸಿದ ಶ್ರೀಲಂಕಾದ ಆತ್ಮವಿಶ್ವಾಸ ಬಹಳಷ್ಟು ಹೆಚ್ಚಿದೆ. ಅದರ ಝಲಕ್ ಈ ಟೆಸ್ಟ್‌ನಲ್ಲೂ ಗೋಚರಿಸುತ್ತಿದ್ದು, ಅಂತಿಮವಾಗಿ ಲಂಕಾ ತಂಡ ಇಂಗ್ಲೆಂಡ್ಗೆ 204 ರನ್‌ಗಳ ಗುರಿ ನೀಡಿದೆ.