ದ್ರಾವಿಡ್ ದಾಖಲೆ ಮುರಿದ ಜೋ ರೂಟ್: ಸಚಿನ್ ರೆಕಾರ್ಡ್ ಶೇಕಿಂಗ್..!

Joe Root Records: ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಹೊಸ ಇತಿಹಾಸ ನಿರ್ಮಿಸುವತ್ತ ಮುನ್ನುಗ್ಗುತ್ತಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಸಚಿನ್ ತೆಂಡೂಲ್ಕರ್ (15,921) ಅವರ ವಿಶ್ವ ದಾಖಲೆ ಮುರಿಯಲು ಜೋ ರೂಟ್​ಗೆ ಬೇಕಿರುವುದು ಕೇವಲ 3790 ರನ್​ಗಳು ಮಾತ್ರ. ಇದರ ಜೊತೆಗೆ ಅರ್ಧಶತಕದ ದಾಖಲೆಯನ್ನು ಅಳಿಸಿ ಹಾಕುವ ಹೊಸ್ತಿಲಲ್ಲಿದ್ದಾರೆ.

| Updated By: ಝಾಹಿರ್ ಯೂಸುಫ್

Updated on: Aug 25, 2024 | 8:55 AM

ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ದರ್ಬಾರ್ ಮುಂದುವರೆದಿದೆ. ಕಳೆದ ಕೆಲ ವರ್ಷಗಳಿಂದ ಭರ್ಜರಿ ಫಾರ್ಮ್​ನಲ್ಲಿರುವ ರೂಟ್ ಮ್ಯಾಚೆಂಸ್ಟರ್​​ನಲ್ಲೂ ಅಬ್ಬರಿಸಿದ್ದಾರೆ. ಓಲ್ಡ್​ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಜೋ ರೂಟ್ ಅಜೇಯ 61 ರನ್ ಬಾರಿಸಿದ್ದಾರೆ.

1 / 6
ಈ ಅರ್ಧಶತಕದೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಜೋ ರೂಟ್ ಮೂರನೇ ಸ್ಥಾನಕ್ಕೇರಿದ್ದಾರೆ. ಅದು ಸಹ ಟೆಸ್ಟ್ ಕ್ರಿಕೆಟ್​ನ ದಂತಕಥೆ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

2 / 6
ಟೀಮ್ ಇಂಡಿಯಾ ಪರ 164 ಟೆಸ್ಟ್ ಪಂದ್ಯಗಳಲ್ಲಿ 286 ಇನಿಂಗ್ಸ್ ಆಡಿರುವ ರಾಹುಲ್ ದ್ರಾವಿಡ್ 63	ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಫಿಫ್ಟಿ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇದೀಗ ದ್ರಾವಿಡ್ ಅವರನ್ನು ಹಿಂದಿಕ್ಕುವಲ್ಲಿ ರೂಟ್ ಯಶಸ್ವಿಯಾಗಿದ್ದಾರೆ.

3 / 6
ಇಂಗ್ಲೆಂಡ್ ಪರ 144 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 263 ಇನಿಂಗ್ಸ್​ಗಳ ಮೂಲಕ ಒಟ್ಟು 64 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ ಟೆಸ್ಟ್​ನಲ್ಲಿ ಅತೀ ಹೆಚ್ಚು ಹಾಫ್ ಸೆಂಚುರಿ ಬಾರಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ವೆಸ್ಟ್ ಇಂಡೀಸ್​ನ ಶಿವನರೈನ್ ಚಂದ್ರಪಾಲ್ (66 ಅರ್ಧಶತಕ).

4 / 6
ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 200 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ ಬ್ಯಾಟ್ ಬೀಸಿದ 329 ಇನಿಂಗ್ಸ್​ಗ​ಳಿಂದ ಒಟ್ಟು 68 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್​ನಲ್ಲಿ ಅತ್ಯಧಿಕ ಫಿಫ್ಟಿ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.

5 / 6
ಇದೀಗ 64 ಅರ್ಧಶತಕಗಳೊಂದಿಗೆ 3ನೇ ಸ್ಥಾನಕ್ಕೇರಿರುವ ಜೋ ರೂಟ್​ಗೆ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆ ಮುರಿಯಲು ಬೇಕಿರುವುದು ಕೇವಲ 5 ಅರ್ಧಶತಕಗಳು ಮಾತ್ರ. 33 ವರ್ಷದ ಜೋ ರೂಟ್ ಇನ್ನೊಂದಷ್ಟು ವರ್ಷಗಳ ಕಾಲ ಟೆಸ್ಟ್​ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದು, ಹೀಗಾಗಿ ಈ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವುದನ್ನು ಎದುರು ನೋಡಬಹುದು.

6 / 6
Follow us