T20 World Cup 2021: ಇಂಗ್ಲೆಂಡ್​ ತಂಡಕ್ಕೆ ಆಘಾತ: ಟಿ20 ವಿಶ್ವಕಪ್​ಗೆ ಚಾಂಪಿಯನ್ ಆಟಗಾರ ಡೌಟ್

| Updated By: ಝಾಹಿರ್ ಯೂಸುಫ್

Updated on: Sep 04, 2021 | 5:21 PM

England Team: ಇನ್ನು ಇಂಗ್ಲೆಂಡ್ ತಂಡವು ಶೀಘ್ರದಲ್ಲೇ 15 ಸದಸ್ಯರ ತಂಡವನ್ನು ಪ್ರಕಟಿಸಲಿದ್ದು, ಮೀಸಲು ಆಟಗಾರರಾಗಿ ಮೂವರನ್ನು ಆಯ್ಕೆ ಮಾಡಲಿದೆ.

1 / 6
T20 ವಿಶ್ವಕಪ್ (T20 World Cup 2021) ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿದೆ. ಈಗಾಗಲೇ ಆಸ್ಟ್ರೇಲಿಯಾ (Australia), ನ್ಯೂಜಿಲೆಂಡ್ (New Zealand) ತಂಡಗಳು ತಮ್ಮ ವಿಶ್ವಕಪ್ ಟೀಮ್​ ಅನ್ನು ಪ್ರಕಟಿಸಿದೆ. ಇದಾಗ್ಯೂ ಭಾರತ (India), ಇಂಗ್ಲೆಂಡ್ (England) ಸೇರಿದಂತೆ ಕೆಲ ತಂಡಗಳು ಇನ್ನೂ ಕೂಡ ಅಂತಿಮ ಬಳಗದ ಆಯ್ಕೆಯನ್ನು ಮಾಡಿಲ್ಲ.

2 / 6
ಅದರಲ್ಲೂ ಇಂಗ್ಲೆಂಡ್ ತಂಡವು ಮುಂದಿನ ವಾರ ಟಿ20 ವಿಶ್ವಕಪ್ (T20 World Cup 2021) ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಆದರೆ ಈ ಬಳಗದಲ್ಲಿ ತಂಡದ ಚಾಂಪಿಯನ್ ಆಲ್​ರೌಂಡರ್ ಬೆನ್​ ಸ್ಟೋಕ್ಸ್ (Ben Stokes) ಕಾಣಿಸಿಕೊಳ್ಳುವುದು ಅನುಮಾನ.

3 / 6
 ಹೌದು, ಡೈಲಿ ಮೇಲ್ ವರದಿ ಪ್ರಕಾರ, 2019ರ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ ಆಲ್​ರೌಂಡರ್  ಬೆನ್​ ಸ್ಟೋಕ್ಸ್ ( Ben Stokes)​ ಟಿ20 ವಿಶ್ವಕಪ್​ನಿಂದ ಹೊರಗುಳಿಯಲಿದ್ದಾರೆ. ಮಾನಸಿಕ ಒತ್ತಡದಿಂದ ಬಳಲುತ್ತಿರುವ ಸ್ಟೋಕ್ಸ್ ಚುಟುಕು ಕ್ರಿಕೆಟ್ ಕದನಕ್ಕೆ ತಮ್ಮ ಲಭ್ಯತೆಯ ಬಗ್ಗೆ ಕೂಡ ಸ್ಪಷ್ಟಣೆ ನೀಡಿಲ್ಲ.

4 / 6
 ಪ್ರಸ್ತುತ ನಡೆಯುತ್ತಿರುವ ಭಾರತದ ವಿರುದ್ದ ಪ್ರತಿಷ್ಠಿತ ಟೆಸ್ಟ್ ಸರಣಿಯಿಂದ ಕೂಡ ಹೊರಗುಳಿದಿದ್ದಾರೆ. ಅದಲ್ಲದೆ ಐಪಿಎಲ್​ನ  (IPL 2021) ಉಳಿದಾರ್ಧದಿಂದಲೂ ಕೂಡ ಸ್ಟೋಕ್ಸ್​ ಹಿಂದೆ ಸರಿದಿದ್ದಾರೆ. ಅತ್ತ ಐಪಿಎಲ್​ ಬೆನ್ನಲ್ಲೇ ಟಿ20 ವಿಶ್ವಕಪ್ ಯುಎಇನಲ್ಲಿ ಜರಗುಲಿದ್ದು, ಇದಾಗ್ಯೂ ಬೆನ್​ ಸ್ಟೋಕ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ದ ಆಡುವ ಮನಸ್ಸು ಮಾಡಿಲ್ಲ. ಈ ಎಲ್ಲಾ ಕಾರಣಗಳಿಂದ ಸ್ಟೋಕ್ಸ್ ಟಿ20 ವಿಶ್ವಕಪ್ ಆಡುವುದು ಅನುಮಾನ ಎಂದು ವರದಿಯಾಗಿದೆ.

5 / 6
ಕಳೆದ ಕೆಲ ತಿಂಗಳಿಂದ ಬೆನ್​ ಸ್ಟೋಕ್ಸ್​ ಮಾನಸಿಕವಾಗಿ ಮತ್ತು ದೈಹಿಕವಾಗಿ ಚೇತರಿಸಿಕೊಳ್ಳಲು ಕ್ರಿಕೆಟ್​ನಿಂದ ವಿರಾಮವನ್ನು ತೆಗೆದುಕೊಂಡಿದ್ದಾರೆ. ಇದೇ ವಿಶ್ರಾಂತಿಯನ್ನು ಮುಂದುವರೆಸಲು ಸ್ಟೋಕ್ಸ್ ಬಯಸಿದ್ದು, ಹೀಗಾಗಿ ಐಪಿಎಲ್ ಹಾಗೂ ಟಿ20 ವಿಶ್ವಕಪ್ ಭಾಗವಾಗಲು ಯೋಚಿಸುತ್ತಿಲ್ಲ ಎಂದು ಆಂಗ್ಲ ಪತ್ರಿಕೆಯೊಂದು ರಿಪೋರ್ಟ್ ಮಾಡಿದೆ.

6 / 6
ಇನ್ನು ಇಂಗ್ಲೆಂಡ್ ತಂಡವು ಶೀಘ್ರದಲ್ಲೇ 15 ಸದಸ್ಯರ ತಂಡವನ್ನು ಪ್ರಕಟಿಸಲಿದ್ದು, ಮೀಸಲು ಆಟಗಾರರಾಗಿ ಮೂವರನ್ನು ಆಯ್ಕೆ ಮಾಡಲಿದೆ. ಅತ್ತ ಜೋಫ್ರಾ ಆರ್ಚರ್ ಕೂಡ ಗಾಯಗೊಂಡಿದ್ದು, ಮುಂದಿನ ತಿಂಗಳೊಳಗೆ ಫಿಟ್ ಆಗುವ ಸಾಧ್ಯತೆಯಿದ್ದರೆ ಮಾತ್ರ ಆರ್ಚರ್ ಆಯ್ಕೆಯಾಗಲಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

Published On - 5:16 pm, Sat, 4 September 21